ಐಕಳಬಾವ ವಿಕಾಸ್ ಎಚ್ ಶೆಟ್ಟಿ ಅವರು ನೆರೂಲ್ ಜಿಮ್ಖಾನಾ ನೆರೂಲ್ ನವಿ ಮುಂಬೈನ ಗೌರವ ಪ್ರಧಾನ ಕಾರ್ಯದರ್ಶಿಯಾಗಿ 2024ರಿಂದ 2027ರವರೆಗೆ ಸತತ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ. ಮೊದಲು ಅವರನ್ನು 2021ರಿಂದ 2024 ರ ಅವಧಿಗೆ ನೇಮಕ ಮಾಡಲಾಗಿತ್ತು. ಫೆಬ್ರವರಿ 24 ರಂದು ಚುನಾವಣೆ ನಡೆದಿತ್ತು. ವಿಕಾಸ್ ಎಚ್ ಶೆಟ್ಟಿಯವರು ಈ ಹಿಂದೆ ನೆರೂಲ್ ಜಿಮ್ಖಾನಾದ ಕಾರ್ಯದರ್ಶಿ, ಕೋಶಾಧಿಕಾರಿ ಮತ್ತು ಉಪಾಧ್ಯಕ್ಷರಾಗಿ ವಿವಿಧ ಹುದ್ದೆಗಳನ್ನು ಅಲಕರಿಸಿದ್ದರು. ನೆರೂಲ್ ಜಿಮ್ಖಾನಾ ನೆರೂಲ್ ಪಶ್ಚಿಮ ನವಿ ಮುಂಬೈನಲ್ಲಿ ನೋಂದಾಯಿತ ಚಾರಿಟೇಬಲ್ ಟ್ರಸ್ಟ್ ಆಗಿದ್ದು, ಕ್ರೀಡೆ, ಅರೋಗ್ಯ ಮತ್ತು ಮನರಂಜನೆಯನ್ನು ಉತ್ತೇಜಸುತ್ತಿದೆ ಮತ್ತು ನವಿ ಮುಂಬೈನಲ್ಲಿ ಸಾಮಾಜಿಕ ಚಟುವಟಿಕೆಗಳಿಗೆ ಅಪಾರವಾದ ಕೊಡುಗೆ ನೀಡುತ್ತಾ ಬಂದಿದೆ. ನೆರೂಲ್ ಜಿಮ್ಖಾನ 4,000ಕ್ಕೂ ಹೆಚ್ಚು ಪ್ರಾಥಮಿಕ ಸದಸ್ಯರನ್ನು ಹೊಂದಿದ್ದು ಮತ್ತು ಸುಮಾರು 13,500 ಕುಟುಂಬ ಸದಸ್ಯರನ್ನು ಒಳಗೊಂಡಿದೆ.
ವಿಕಾಸ್ ಶೆಟ್ಟಿ ಅವರು ದಿವಂಗತ ಐಕಳಬಾವ ಶ್ರೀಮತಿ ಸರ್ವಾಣಿ ಶೆಟ್ಟಿ ಮತ್ತು ಕೆಂಜೂರು ಉಪ್ಪರಿಗೆ ಮನೆ ಹಿರಿಯಣ್ಣ ಎಸ್. ಶೆಟ್ಟಿ ದಂಪತಿಯ ಪುತ್ರರಾಗಿದ್ದಾರೆ. ಉಮಾ ವಿ. ಶೆಟ್ಟಿ ಅವರನ್ನು ವಿವಾಹವಾಗಿ ರಕ್ಷಿತಾ ವಿ. ಶೆಟ್ಟಿ ಎಂಬ ಮಗಳನ್ನು ಹೊಂದಿದ್ದಾರೆ. ವಿಕಾಸ್ ಶೆಟ್ಟಿಯವರ ನೇತೃತ್ವದಲ್ಲಿ ನೆರೂಲ್ ಜಿಮ್ಖಾನಾ ಟ್ರಸ್ಟಿಗಳು ಮತ್ತು ವ್ಯವಸ್ಥಾಪಕ ಸಮಿತಿ ಸದಸ್ಯರು ಮತ್ತು ಸ್ವಯಂಸೇವಕರು ಕ್ರಿಕೆಟ್, ಟೆನಿಸ್, ಈಜು, ಮುಂತಾದ ಕ್ರೀಡಾ ಚಟುವಟಿಕೆಗಳ ಕ್ಷೇತ್ರದಲ್ಲಿ ವಿವಿಧ ಉಪಕ್ರಮಗಳನ್ನು ಕೈಗೊಂಡಿದ್ದಾರೆ.
ಟಾಟಾ ಕ್ಯಾನ್ಸರ್ ಆಸ್ಪತ್ರೆ ಖಾರ್ಘರ್ ಗೆ ರಕ್ತದಾನ ಅಭಿಯಾನ, ಹಿರಿಯ ನಾಗರಿಕರಿಗೆ ಕೋವಿಡ್ ಲಸಿಕೆ, ಸದಸ್ಯರು ಮತ್ತು ನವಿ ಮುಂಬೈನ ನಾಗರಿಕರಿಗೆ ವೈದ್ಯಕೀಯ ಶಿಬಿರಗಳಂತಹ ಸಮುದಾಯದೆಡೆಗೆ ಫುಟ್ಬಾಲ್ ಶಿಬಿರಗಳು ಮತ್ತು ಪಂದ್ಯಾವಳಿಗಳು ಮತ್ತು ಸಾಮಾಜಿಕ ಚಟುವಟಿಕೆಗಳು, ಆಟಗಾರರು ಅನುಭವದ ತರಬೇತುದಾರರಿಂದ ಘೋಷಣೆ ಮತ್ತು ತರಬೇತಿ ಪಡೆದಿದ್ದಾರೆ. ನೆರೂಲ್ ಜಿಮ್ಖಾನಾದಲ್ಲಿ ಕ್ರಿಕೆಟ್ ಅಕಾಡೆಮಿಯನ್ನು ಪ್ರಾರಂಭಿಸುವಲ್ಲಿ ಅವರು ಬಹಳ ಪ್ರಮುಖ ಪಾತ್ರ ವಹಿಸಿದ್ದು, ಅಲ್ಲಿ ಯುವ ಆಟಗಾರರು ಅನುಭವದ ತರಬೇತುದಾರರಿಂದ ತರಬೇತಿ ಪಡೆದಿದ್ದಾರೆ. ಇತ್ತೀಚಿಗೆ ಕ್ಲಬ್ 50 ಮೀಟರ್ ಒಲಿಂಪಿಕ್ ಗಾತ್ರದ ಈಜುಕೊಳವನ್ನು ಉದ್ಘಾಟಿಸಲಾಗಿತ್ತು ವಿಕಾಸ್ ಶೆಟ್ಟಿಯವರು ತಮ್ಮ ಶಾಲಾ ಶಿಕ್ಷಣವನ್ನು ಮುಂಬಯಿಯ ಸೈಂಟ್ ಮೇರಿಸ್ ಹೈಸ್ಕೂಲ್ ಮಜಗಾಂವ್ ನಲ್ಲಿ ಪಡೆದರು. ಬಳಿಕ ಮುಂಬೈ ವಿಶ್ವವಿದ್ಯಾನಿಲಯದಿಂದ ಆಮದು ಮತ್ತು ರಫ್ತು ವಿಷಯದಲ್ಲಿ ಡಿಪ್ಲೋಮಾದೊಂದಿಗೆ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಅವರು ಕಾರ್ಪೊರೇಟ್ ಫೈನಾನ್ಸ್ ಡಿಪಾರ್ಟ್ಮೆಂಟ್ ಮುಂಬೈನಲ್ಲಿ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಅವರು ಹಣಕಾಸು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಉತ್ತಮ ಕ್ರಿಕೆಟ್ ಮತ್ತು ಫುಟ್ಬಾಲ್ ಆಟಗಾರರಾಗಿದ್ದಾರೆ.