ದಿನಾಂಕ 10-03-2024 ನೇ ಆದಿತ್ಯವಾರದಂದು ಪರ್ಕಳ ಪ್ರೌಢಶಾಲಾ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಈ ವರ್ಷದ ಬಂಟರ ಸಮ್ಮಿಲನ ಕಾರ್ಯಕ್ರಮವು ಬಂಟರ ಚಾವಡಿಯ ಅಧ್ಯಕ್ಷರಾದ ಶ್ರೀ ತಾರನಾಥ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಕುಮಾರಿ ಮೋನೀಶ ಪ್ರಾರ್ಥನೆಯನ್ನು ನೆರವೇರಿಸಿದರು. ಕಾರ್ಯಾಧ್ಯಕ್ಷ ವಸಂತ ಶೆಟ್ಟಿ ಚೆನ್ನಿಬೆಟ್ಟು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಹಿರೇಬೆಟ್ಟು ವರದಿ ವಾಚಿಸಿದರು. ಕೋಶಾಧಿಕಾರಿ ದಿನಕರ್ ಶೆಟ್ಟಿ ಹೆರ್ಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಅಧ್ಯಕ್ಷರುಗಳಾದ ಜಯರಾಜ್ ಹೆಗ್ಡೆ ಹಾಗೂ ದಿಲೀಪ್ ರಾಜ್ ಹೆಗ್ಡೆಯವರು ದೀಪ ಪ್ರಜ್ವಲನೆ ಮಾಡಿದರು.
ಮುಖ್ಯ ಅತಿಥಿ ಬಂಟರ ಸಮಾಜದ ಹಿರಿಯ ಚೇತನ, ಹಿರಿಯ ರಾಜಕೀಯ ಮುತ್ಸದ್ದಿ ಶ್ರೀಮಾನ್ ಅಪ್ಪಣ್ಣ ಹೆಗ್ಡೆಯವರಿಗೆ ಚಾವಡಿ ವತಿಯಿಂದ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಸಿದ್ದ ನೇತ್ರ ತಜ್ಞರಾದ ಶ್ರೀ ಸುಬ್ಬಣ್ಣ ಶೆಟ್ಟಿಯವರಿಗೆ ಸೇವಾ ವಿಭೂಷಣ ಮತ್ತು ಸಮಾಜ ಸೇವಕರಾದ ಶ್ರೀ ಪ್ರಕಾಶ್ ಶೆಟ್ಟಿ ಮಣಿಪಾಲ ಇವರಿಗೆ ಸೇವಾ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅತಿಥಿಗಳಾದ ಕಾಪು ಶಾಸಕರಾದ ಶ್ರೀ ಸುರೇಶ್ ಶೆಟ್ಟಿ ಗುರ್ಮೆಯವರನ್ನು ಮತ್ತು ಬಂಟ್ಸ್ ಅಸೋಸಿಯೇಷನ್ ಪುಣೆಯ ಅಧ್ಯಕ್ಷರಾದ ಶ್ರೀ ಪುನ್ಚೂರು ಗಣೇಶ್ ಹೆಗ್ಡೆಯವರನ್ನು ಹಾಗೂ ಗೌರವ ಅತಿಥಿ ಬಂಟರ ಯಾನೆ ನಾಡವರ ಮಾತೃ ಸಂಘದ ಉಡುಪಿ ತಾಲೂಕು ಸಮಿತಿಯ ಸಂಚಾಲಕರಾದ ಶ್ರೀ ಶಿವಪ್ರಸಾದ್ ಹೆಗ್ಡೆಯವರನ್ನು ಗೌರವಿಸಲಾಯಿತು. ಚಿನ್ನದ ಪದಕ ವಿಜೇತ ದಂತ ವೈದ್ದೆ ಕುಮಾರಿ ಶ್ರುತಿ ಶೆಟ್ಟಿಯವರನ್ನು ಗೌರವಿಸಲಾಯಿತು.
ಬಂಟರ ಚಾವಡಿಯ ಅಧ್ಯಕ್ಷರಾದ ಶ್ರೀ ತಾರನಾಥ ಹೆಗ್ಡೆಯವರು ಅಧ್ಯಕ್ಷೀಯ ಭಾಷಣದಲ್ಲಿ ಬಂಟರು ಸಂಘಟಿತರಾಗುವ ಮಹತ್ವದ ಬಗ್ಗೆ ಸದಸ್ಯರಿಗೆ ಮನವರಿಕೆ ಮಾಡಿದರು ಅತಿಥಿ ಕಲಾವಿದರನ್ನು ಮತ್ತು ಯಕ್ಷಗಾನದ ಪ್ರಾಯೋಜಕರಾದ ಶ್ರೀಮತಿ ನಿರೂಪಮಾ ಪ್ರಸಾದ್ ಶೆಟ್ಟಿಯವರನ್ನು ಗೌರವಿಸಲಾಯಿತು. ಉಪಾಧ್ಯಕ್ಷರಾದ ದಿನೇಶ್ ಹೆಗ್ಡೆಯವರು ಧನ್ಯವಾದವನ್ನು ಅರ್ಪಿಸಿದರು. ಸಾಫಲ್ಯ ಮಹಿಳಾ ಯಕ್ಷಗಾನ ಬಳಗ, ಉಡುಪಿಯವರಿಂದ ‘ಕಂಸ ದಿಗ್ವಿಜಯ’ ಎಂಬ ಯಕ್ಷಗಾನ ಅದ್ಭುತವಾಗಿ ನಡೆಯಿತು. ಸಾಮೂಹಿಕ ಸಹ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.