2023 ವರ್ಷಾಂತ್ಯದ ಕೊನೆಯ ದಿನ ಡಿಸೆಂಬರ್ 30ನೇ ತಾರೀಕು ಬೆಳಗಿನ ಜಾವ 5.30 ಕ್ಕೆ ಜನಾನುರಾಗಿಯಾಗಿದ್ದ
ಆತ್ಮೀಯರು ಶ್ರೀ ದೇವೆಶ್ ಆಳ್ವರವರು ಕೊನೆಯುಸಿರೆಳೆದ ಸುದ್ದಿ ಕ್ಷಣಾರ್ಧದಲ್ಲಿ ಯು.ಎ.ಇ.ಯ ಉದ್ದಗಲಗಳಲ್ಲಿ ಸ್ನೇಹಿತರೆಲ್ಲರಿಗೂ ದಿಗ್ರಭಮೆ ಮೂಡಿಸಿಸು. ಕೆಲವು ದಿನಗಳಿಂದ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು.
ಮೂಲತ ಕರಾವಳಿ ಕರ್ನಾಟಕದ ತುಳುನಾಡಿನವರಾದ ದೇವೆಶ್ ಆಳ್ವ ಪ್ರತಿಷ್ಠಿತ ಕೆನರಾ ಕಾಲೇಜು ಮತ್ತು ಎಸ್.ಡಿ.ಎಂ.ಸಿ.ಇ.ಟಿ. ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದವರು. ದುಬಾಯಿಗೆ ಬಂದು ಸೋಲಾಸ್ ಮರೀನ್ ಸರ್ವಿಸಸ್ ನಲ್ಲಿ ಮ್ಯಾನೆಜರ್ ಆಗಿ ಸೇವೆ ಸಲ್ಲಿಸುತಿದ್ದರು. ಸ್ವಂತ ಉಧ್ಯಮ ಪಯೋನಿರ್ ಮರೈನ್ ಸಂಸ್ಥೆಯನ್ನು ಸ್ಥಾಪಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
ಸುರದ್ರೂಪಿಯಾಗಿದ್ದು ಸುಂದರ ವ್ಯಕ್ತಿತ್ವ ಹೊಂದಿದ್ದ ದೇವೆಶ್ ಆಳ್ವರು ಜನಮಾನಸದಲ್ಲಿ ಸದಾ ನಗುಮುಖದ ವ್ಯಕ್ತಿಯಾಗಿದ್ದು ಸದಾ ಚೈತನ್ಯದ ಚಿಲುಮೆಯಂತೆ ಇದ್ದವರು. ಗಲ್ಫ್ ರಾಷ್ಟ್ರದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟ, ಸ್ನೇಹಮಿಲನಗಳಿಗೆ ಸದಾ ಬೆಂಬಲ ನೀಡುತ್ತಾ ಪ್ರಾಯೋಜಕರಾಗಿ ಪ್ರೋತ್ಸಾಹ ನೀಡುತಿದ್ದ ಹೃದಯವಂತ ಅಗಲಿರುವುದು ಎಲ್ಲಾ ಬಂದುಬಳಗ ಸ್ನೇಹಿತ ವರ್ಗದವರಿಗೆ ಅತೀವ ನೋವಾಗಿದೆ.
ಯು.ಎ.ಇ. ಬಂಟ್ಸ್ ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತಿದ್ದರು. ಯು.ಎ.ಇ.ಯ ಉದ್ದಗಲಗಳಲ್ಲಿ ನಡೆಯುವ ಸಾಮೂಹಿಕ ಪೂಜಾ ಕಾರ್ಯಗಳು, ಕ್ರೀಡಾಕೂಟ, ಯಕ್ಷಗಾನ ಪ್ರದರ್ಶನ, ನಾಟಕ ಪ್ರದರ್ಶನ ಕನ್ನಡ ತುಳು ಸಮ್ಮೇಳನ, ಕ್ರಿಕೆಟ್ ಪಂದ್ಯಾಟ, ವಾಲಿಬಾಲ್, ಥ್ರೋಬಾಲ್ ಪಂದ್ಯಾಟಗಳ ಪ್ರಾಯೋಜಕರಾಗಿ ಯಶಸ್ಸಿನ
ಹಿಂದಿನ ಶಕ್ತಿಯಾಗಿದ್ದರು. ಇತ್ತಿಚೆಗೆ ನವೆಂಬರ್ ನಲ್ಲಿ ಬಂಟ್ಸ್ ಪ್ರಿಮೀಯರ್ ಲೀಗ್ ಸೀಸನ್ 3 ಕ್ರಿಕೆಟ್ ಪಂದ್ಯಾಟದ ಆಯೋಜಕರಲ್ಲಿ ಓರ್ವರಾಗಿ ಯುವ ಆಟಗಾರರಿಗೆ ಅವಕಾಶ ನೀಡಿ ಪ್ರೋತ್ಸಾಹಿಸಿದವರು ದೇವೆಶ್ ಆಳ್ವರು.
ಜನ್ಮದಾತರು, ಮಡದಿ, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿರುವ ದೇವೆಶ್ ಆಳ್ವರಿಗೆ, ದುಬಾಯಿ ಸೋನಾಪುರದಲ್ಲಿರುವ ಶವಗಾರದ ಆವರಣದಲ್ಲಿ ಬಂಧು ಬಳಗದವರು, ಸ್ನೇಹಿತರು ಹಾಗೂ ವಿವಿಧ
ಸಮಾಜ ಬಾಂಧವರು ಅಪಾರ ಸಂಖ್ಯೆಯಲ್ಲಿಒಟ್ಟು ಸೇರಿ ಮೃತರ ದಿವ್ಯಾತ್ಮಕ್ಕೆ ಚಿರ ಶಾಂತಿಯನ್ನು ಕೋರಿ ಬಂಧು ಬಳಗದವರಿಗೆ ದುಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿ, ಅಂತಿಮ ನಮನ ಸಲ್ಲಿಸಿದರು.