ಏಣಗುಡ್ಡೆಯ ಬಹು ಕಾರಣಿಕದ ಕ್ಷೇತ್ರವೆನಿಸಿದ ದುರ್ಗಾ ನಗರ ಚೌಡೇಶ್ವರಿ ದೇವಸ್ಥಾನದಲ್ಲಿ ಇದೇ ಬರುವ 30.12.2023 ರ ಶನಿವಾರದಂದು ಚೌಡೇಶ್ವರಿ ದೇವಿಗೆ ಹೂವಿನ ಪೂಜೆ ಹಾಗೂ ದರ್ಶನ ಸೇವೆ ವಿಜೃಂಭಣೆಯಿಂದ ಊರ ಹಾಗೂ ಪರವೂರ ಭಕ್ತಾದಿಗಳ ಸಮಕ್ಷಮದಲ್ಲಿ 11 ಫಂಟೆಯ ಶುಭಮುಹೂರ್ತದಲ್ಲಿ ಜರಗಲಿದ್ದು, ಆ ಪ್ರಯುಕ್ತ 12.00 ಘಂಟೆಗೆ ಚಪ್ಪರ ಮುಹೂರ್ತ 12.30 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ಬಳಿಕ ಸಂಜೆ 5.00ಘಂಟೆಗೆ ಭಂಡಾರ ಇಳಿಯುವುದು. ತದ ನಂತರ 6.00 ಘಂಟೆಗೆ ಕುಣಿತ ಭಜನೆ ಕಾರ್ಯಕ್ರಮ ನಡೆಯಲಿದೆ.
ಅದೇದಿನ ರಾತ್ರಿ 8.00 ಗಂಟೆಗೆ ಕಲ್ಕುಡ ವರ್ತೆ ಕಾಳಮ್ಮ ದೈವಗಳಿಗೆ ನೇಮೋತ್ಸವ ಜರುಗಲಿದೆ. ಮತ್ತು ಮರುದಿನ ದಿನಾಂಕ 31.12.2023 ರ ಭಾನುವಾರ ಬೆಳಿಗ್ಗೆ 9.00 ಘಂಟೆಗೆ ಗುಳಿಗ ದೈವಕ್ಕೆ ನೇಮೋತ್ಸವ ಜರಗಲಿರುವುದು.
ಅದೇ ರೀತಿ 3.1.2024 ರ ಬುಧವಾರ ದೈವಗಳಿಗೆ ತಂಬಿಲ ಸೇವೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳ ಸಮಾರೋಪ ನಡೆಯಲಿದ್ದು, ಆಸ್ತಿಕ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೈವಗಳ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕೆಂದು ಶ್ರೀ ಕ್ಷೇತ್ರದ ಧರ್ಮದರ್ಶಿ ಸಚಿನ್ ಶೆಟ್ಟಿ, ಆಡಳಿತ ಸಮಿತಿ ಸದಸ್ಯರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಈ ಮೂಲಕ ಪ್ರಾರ್ಥಿಸಿಕೊಂಡಿದ್ದಾರೆ.