*ಕನ್ನಡ ಸೇವಾ ಸಂಘ ಪೊವಾಯಿ ಇದರ ಮಹಿಳಾ ವಿಭಾಗದ ವತಿಯಿಂದ ಪರಿಸರದ ತುಳು ಮತ್ತು ಕನ್ನಡದ ಮಕ್ಕಳು ಮತ್ತು ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಕಾರ್ಯಕ್ರಮ*ಕನ್ನಡ ಸೇವಾ ಸಂಘ ಪೊವಾಯಿ ಇದರ ಮಹಿಳಾ ವಿಭಾಗದ ವತಿಯಿಂದ ಪರಿಸರದ ತುಳು ಮತ್ತು ಕನ್ನಡ ಮಕ್ಕಳಿಗೆ ಮತ್ತು ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಕಾರ್ಯಕ್ರಮವನ್ನು ಜನವರಿ 30 ಭಾನುವಾರದಂದು ಬೆಳಿಗ್ಗೆ 11.00 ಗಂಟೆಗೆ ಸರಿಯಾಗಿ ಸಂಘದ ಕಛೇರಿಯಲ್ಲಿ ಆಯೋಜಿಸಲಾಗಿತ್ತು.ಅಧ್ಯಕ್ಷರಾದ ನ್ಯಾಯವಾದಿ ಆರ್.ಜಿ.ಶೆಟ್ಟಿ ಉಪಾಧ್ಯಕ್ಷರಾದ ದಿವಾಕರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ.ಆರ್.ರೈ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಪ್ರಶಾಂತಿ.ಡಿ.ಶೆಟ್ಟಿ, ಕಾರ್ಯದರ್ಶಿ ನಾಗರಾಜ ಗುರುಪುರ ಅವರೆಲ್ಲರೂ ಸೇರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಈ ವರುಷ ನಮ್ಮ ಸಂಘದ ಬೆಳ್ಳಿ ಹಬ್ಬದ ಸಂಭ್ರಮ.ಆ ಸಂಭ್ರಮವನ್ನು ಸಂಭ್ರಮಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.ಅದರಲ್ಲಿ ಈ ರಂಗೋಲಿ ಸ್ಪರ್ಧೆ ಒಂದಾಗಿದೆ.ಪೊವಾಯಿ ಪರಿಸರದ 15 ರಿಂದ 20 ಪ್ರಾಯದ ಮಕ್ಕಳು ಮತ್ತು 21 ರಿಂದ ಮೇಲ್ಪಟ್ಟ ಮಹಿಳೆಯರು ರಂಗೋಲಿ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಎನ್ನಲು ತುಂಬಾ ಖುಷಿಯಾಗುತ್ತಿದೆ.ಸಂಘದ ಅಧ್ಯಕ್ಷರ ಮತ್ತು ಎಲ್ಲಾ ಪದಾಧಿಕಾರಿಗಳ ಮತ್ತು ಎಲ್ಲಾ ಸ್ಪರ್ಧಾಳುಗಳ ಸಹಾಯದಿಂದ ಈ ಸ್ಪರ್ಧೆಯು ತುಂಬಾ ಚೆನ್ನಾಗಿ ನೇರವೇರಿತು ಎನ್ನಲು ಹೆಮ್ಮೆಯಾಗುತ್ತಿದೆ.ಇನ್ನು ಮುಂದೆಯೂ ನಿಮ್ಮ ಸಹಕಾರ, ಪ್ರೋತ್ಸಾಹ ಇರಲಿ ಎಂದು ಹೇಳುತ್ತಾ ಸ್ಪರ್ಧಾಳುಗಳನ್ನು ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಶಾಂತಿ.ಡಿ.ಶೆಟ್ಟಿಯವರು ಅಭಿನಂದಿಸಿದರು.ಸಂಘದ ಗೌರವಾಧ್ಯಕ್ಷರಾದ ಮಹೇಶ್ ಶೆಟ್ಟಿಯವರು ರಂಗೋಲಿ ಸ್ಪರ್ಧೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಸಂಘದ ಅಧ್ಯಕ್ಷರಾದ ನ್ಯಾಯವಾದಿ ಆರ್.ಜಿ.ಶೆಟ್ಟಿಯವರು ಸ್ಪರ್ಧಿಗಳನ್ನು ಅಭಿನಂದಿಸುತ್ತಾ,ಸ್ಪರ್ಧೆಯಲ್ಲಿ ಬಹುಮಾನ ಬರಲಿಲ್ಲ ಎಂಬ ಬೇಸರ ತಮ್ಮಲ್ಲಿ ಇರಬಾರದು. ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ ಎಂಬ ಹೆಮ್ಮೆ ತಮ್ಮಲ್ಲಿ ಇರಬೇಕು.ಮಹಿಳೆಯರು ಮತ್ತು ಮಕ್ಕಳು ತುಂಬಾ ಹುಮ್ಮಸ್ಸಿನಿಂದ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿರುವರು.ಹಾಗೆಯೇ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಮಹಿಳಾ ಪದಾಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳು ಎಂದರು.ತೀರ್ಪುಗಾರರಾದ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಉಪಕಾರ್ಯಧ್ಯಕ್ಷೆರಾದ ಶ್ರೀಮತಿ ವಂದನಾ ದಯಾನಂದ ಶೆಟ್ಟಿ ಅವರು ಮಾತನಾಡುತ್ತಾ ಸ್ಪರ್ಧಾಳುಗಳನ್ನು ಅಭಿನಂದಿಸಿದರು.ಎಲ್ಲರೂ ಉತ್ತಮವಾದ ರಂಗೋಲಿಯನ್ನು ಬಿಡಿಸಿರುವರು ಎಂದು ಪ್ರಶಂಸಿಸಿದರು.ಇನ್ನೊಬ್ಬ ತೀರ್ಪುಗಾರರಾದ ಶಿಕ್ಷಕಿ ಶ್ರೀಮತಿ ಸುರಭಿ ವರ್ಮ ಅವರು ಶಾಯರಿಯನ್ನು ಹೇಳಿ ಸ್ಪರ್ಧಾಳುಗಳನ್ನು ಹುರಿದುಂಬಿಸಿ ಅಭಿನಂದಿಸಿದರು.ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶೋಭಾ.ಆರ್.ರೈ ಅವರು ಮಾತನಾಡುತ್ತಾ, ಅರಿಸಿನ ಕುಂಕುಮ ಕಾರ್ಯಕ್ರಮದ ದಿವಸ ವಿಜೇತರಿಗೆ ಬಹುಮಾನ ನೀಡಲಾಗುವುದು ಎಂದರು.ಜೊತೆಗೆ ಸ್ಪರ್ಧಾಳುಗಳನ್ನು ಅಭಿನಂದಿಸಿ, ವಿಜೇತರಿಗೆ ಪುಷ್ಪಗುಚ್ಛ ನೀಡಿ ಗೌರವಿಸಿದರು.15 ರಿಂದ 20 ಪ್ರಾಯದ ಮಕ್ಕಳಲ್ಲಿ ವಿಜೇತರು-ಪ್ರಥಮ ಸ್ಥಾನ ಶ್ರೇಯಾ ಶೆಟ್ಟಿ,ದ್ವಿತೀಯಾ ಸ್ಥಾನ ನೇಹಾ ಸಾಲ್ಯಾನ್,ತೃತೀಯಾ ಸ್ಥಾನ ನಿಶಾ ಶೆಟ್ಟಿ ಮತ್ತು ಪ್ರಜ್ಞಾ ಸುವರ್ಣ21ರಿಂದ ಮೇಲ್ಪಟ್ಟ ವಿಜೇತ ಮಹಿಳೆಯರ ಹೆಸರುಪ್ರಥಮ ಸ್ಥಾನ ದೀಪಾ ಶೆಟ್ಟಿ, ದ್ವಿತೀಯಾ ಸ್ಥಾನ ಸೌಮ್ಯ ಆಚಾರ್ಯ, ತೃತೀಯ ಸ್ಥಾನ ವಿನೀತಾ ಆತಾನಿ ಮತ್ತು ನಮಿತಾ ಸಾಲ್ಯಾನ್.ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಜ್ರಾ ಪೂಂಜಾ ಅವರು ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. .ಸಂಘದ ಮಾಜಿ ಅಧ್ಯಕ್ಷರುಗಳಾದ ರಮೇಶ್.ರೈ,ನಾನಯ ಗರಡಿ ಪ್ರಭಾಕರ ಶೆಟ್ಟಿ , ಪದಾಧಿಕಾರಿಗಳು ಮತ್ತು ಮಹಿಳಾ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಮಹಿಳಾ ವಿಭಾಗದ ಕೋಶಾಧಿಕಾರಿ ಆಶಾ. ಎಸ್. ಶೆಟ್ಟಿ ಅವರು ಪ್ರಾರ್ಥನೆ ಹಾಡಿದರು.ಕಾರ್ಯದರ್ಶಿ ರೇಖಾ.ಸಿ.ಶೆಟ್ಟಿ ಅವರು ವಿಜೇತರ ಯಾದಿಯನ್ನು ಓದಿದರು.ಉಪಕಾರ್ಯದರ್ಶಿ ಅನಿತಾ ಎಸ್ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಣ ವಿಭಾಗದ ಉಪ ಕಾರ್ಯಾಧ್ಯಕ್ಷೆ ಯಶೋದಾ ಎಸ್.ಪೂಜಾರಿಯವರು ಧನ್ಯವಾದ ಅರ್ಪಿಸಿದರು.ಲಘು ಉಪಹಾರವನ್ನು ಸಂಘದ ಉಪಾಧ್ಯಕ್ಷರಾದ ದಿವಾಕರ ಶೆಟ್ಟಿ ಅವರು ನೀಡಿರುವರು.ಕಾರ್ಯಕ್ರಮ ಯಶಸ್ವಿಯಾಗಿ ನೇರವೇರಲು ಸದಸ್ಯರಾದ ಆನಂದ ಪೂಜಾರಿ ಮತ್ತು ಉಮೇಶ್ ಆಚಾರ್ಯ ಅವರು ಕೂಡ ಸಹಕರಿಸಿದರು.ಫೋಟೋ,ರಂಗೋಲಿ ಸ್ಪರ್ಧೆಯಲ್ಲಿ ಬಹುಮಾನ ವಿಜೇತರೊಂದಿಗೆ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಆರ್ ಜಿ ಶೆಟ್ಟಿ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶೋಭಾ ರಮೇಶ್ ರೈ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಮಹಿಳಾ ಸದಸ್ಯರುತೀರ್ಪುಗಾರರಾದ ಶ್ರೀಮತಿ ವಂದನಾ ದಯಾನಂದ್ ಶೆಟ್ಟಿ , ಹಾಗು ಸುರಭಿ ವರ್ಮಾ ಅವರೊಂದಿಗೆ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಶೋಭಾ ರಮೇಶ್ ರೈ ಮತ್ತು ಮಹಿಳಾ ವಿಭಾಗದ ಸದಸ್ಯರು ೩)ಅಂಧೇರಿ -ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ವಜ್ರಪೂಂಜಾ ಅವರೊಂದಿಗೆ ಮಾಹಿಳಾ ಸದಸ್ಯರು ,
Previous Articleಪೊವಾಯಿ ಕನ್ನಡ ಸಂಘದ ವತಿಯಿಂದ ರಕ್ತದಾನ ಶಿಬಿರ