ಪುಣೆ; ಪುಣೆಯಲ್ಲಿ ತುಳುವರಿಗಾಗಿ ಸ್ಥಾಪನೆಯಾದ ಸಂಸ್ಥೆ ತುಳುಕೂಟ ಪುಣೆ ,ನಮ್ಮ ತುಳು ಬಾಷೆ ,ಕಲೆ ,ಸಂಸ್ಕ್ರತಿ , ಅಚಾರ . ವಿಚಾರಗಳಿಗೆ ಒತ್ತು ನೀಡುತ್ತಾ ಅದರ ಬೆಳವಣಿಗೆ ಮತ್ತು ನಮ್ಮ ತುಳುವರ ಕಷ್ಟ ಸುಖಗಳಲಿ ಬಾಗಿಯಾಗುತ್ತಾ ತುಳುವರ ಮತ್ತು ತುಳು ಬಾಷೆಯ ಅಭಿವೃದ್ದಿಗೆ ಶ್ರಮಿಸುವ ಮೂಲಕ ಸೇವಾ ಕಾರ್ಯ ಮಾಡುತಿದೆ . ಈ ಹಿಂದೆ ಹಲವಾರು ಕಾರ್ಯ ಯೋಜನೆಗಳ ಮೂಲಕ ಪುಣೆಯಲ್ಲಿ ತುಳುವರ ಸಂಘಟನೆಗೆ ಉತ್ತಮ ಜನ ಸ್ಪಂದನೆ ಸಿಕ್ಕಿದೆ , .ಈ ವರ್ಷ ರಜತ ಮಹೋತ್ಸವ ವರ್ಷವನ್ನಾಗಿ ನಾವು ಆಚರಿಸುತಿದ್ದು ಈ ಸಂದರ್ಭದಲ್ಲಿ ಪುಣೆ ತುಳುವರಿಗೆ ಪ್ರಯೋಜನವಾಗುವಂತಹ ಯೋಜನೆ ಆಗಬೇಕು ಎಂಬುದೇ ನಮ್ಮ ಉದ್ದೇಶ .ಈ ದೃಷ್ಟಿ ಕೋನ ಇಟ್ಟುಕೊಂಡು ನೂತನ ಸಮಿತಿ ರಚನೆ ಮಾಡಿ ಕಾರ್ಯೋನ್ಮುಖರಾಗಿ ತುಳುವರ ಅಭಿವ್ರದ್ದಿಗೆ ಕೆಲಸ ಮಾಡುವುದೇ ನಮ್ಮ ದ್ಯೆಯವಾಗಿದೆ ಎಂದು ತುಳುಕೂಟದ ನೂತನ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು ನುಡಿದರು .
ನ 5ರಂದು ಪುಣೆಯ ಕರ್ವೆ ರೋಡ್ ನಲ್ಲಿಯ ರತ್ನ ಹೋಟೆಲ್ ನ ಬ್ಯಾಂಕ್ವೆಟ್ ಹಾಳ್ ನಲ್ಲಿ ಜರಗಿದ ತುಳುಕೂದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ದಿನೇಶ್ ಶೆಟ್ಟಿ ಯವರು ಎಲ್ಲಾ ಸಮಾಜದ ಜಾತಿ ಭಾಂದವರನ್ನು ತುಳುವರ ಸಂಘಟನೆ ತುಳುಕೂಟಕ್ಕೆ ಸೇರಿಸಿಕೊಂಡು ಸಮ್ಮಿಲಿತ ಕಾರ್ಯಕಾರಿ ಸಮಿತಿ ರಚನೆ ಮಾಡಿ ,ಕಾರ್ಯ ಯೋಜನೆ ರೂಪಿಸುವ ಚಿಂತನೆ ನಮ್ಮದು ,ಸಮಿತಿಯನ್ನು ನಾವಿಂದು ಪ್ರಕಟಿಸಲಿದ್ದೇವೆ .ಈಗಾಗಲೇ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ ಪುತ್ತೂರುರವರು ಜವಾಬ್ಧಾರಿ ವಹಿಸಿಕೊಂಡಿದ್ದಾರೆ ,ನೂತನ ಸಮಿತಿ ಮತ್ತು ಹಿಂದಿನ ಸಮಿತಿಯ ಸದಸ್ಯರು,ಹಾಗೂ ಎಲ್ಲಾ ತುಳು ಭಾಂದವರು ಸೇರಿಕೊಂಡು ಉತ್ತಮ ಪ್ರೋತ್ಸಾಹ ನೀಡುವ ಮೂಲಕ ತುಳುಕೂಟದ ಮುಖಾಂತರ ನಡೆಯುವ ಸೇವಾ ಕಾರ್ಯಗಳಿ ಸಂಪೂರ್ಣ ತನು ಮನ ಧನದ ಸಹಕಾರ ಇರಲಿ ಎಂದರು. ಪುಣೆ ತುಳು ಕೂಟದ ಅಧ್ಯಕ್ಷ ಶ್ರೀ ದಿನೇಶ್ ಶೆಟ್ಟಿ ಕಳತ್ತೂರುರವರ ಅಧ್ಯಕ್ಷತೆಯಲ್ಲಿ ಜರಗಿದ ಈ ವಿಶೇಷ ಸಭೆಯ ವೇದಿಕೆಯಲ್ಲಿ ತುಳುಕೂಟದ ಸ್ಥಾಪಕ ಅಧ್ಯಕ್ಷ ಜಯ ಕೆ .ಶೆಟ್ಟಿ ,ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು , ತುಳುಕೂಟದ ನಿಕಟ ಪೂರ್ವ ಅಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ ,ಸಲಹೆಗಾರರಾದ ಮಾಧವ್ ಶೆಟ್ಟಿಯವರು ಉಪಸ್ಥಿತರಿದ್ದರು . ಸಂತೋಷ್ಶೆ ಟ್ಟಿ ಎಣ್ಣೆಹೊಳೆ ಸ್ವಾಗತಿಸಿ ಪ್ರಾರ್ಥನೆ ಗೈದರು , ವೇದಿಕೆಯಲ್ಲಿದ್ದ ಗಣ್ಯರನ್ನು ಅಭಿನಂದಿಸಲಾಯಿತು ,
ಈ ಸಂದರ್ಭದಲ್ಲಿ ಈ ಬಾರಿಯ 2023 ರ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ,ತುಳುಕೂಟದ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ರವರನ್ನು ಶಾಲು ಪುಷ್ಪ ಗುಚ್ಛ ನೀಡಿ ತುಳುಕೂಟದ ವತಿಯಿಂದ ಸತ್ಕರಿಸಲಾಯಿತು .
ಈ ಸಂದರ್ಭದಲ್ಲಿ ತುಳುಕೂಟದ ನೂತನ ಕಾರ್ಯಕಾರಿ ಸಮಿತಿಯನ್ನು ಮತ್ತು ಮಹಿಳಾ ವಿಭಾಗವನ್ನು ಅಧ್ಯಕ್ಷರ ಅನುಮತಿ ಮೇರೆಗೆ ಸಭೆಯಲ್ಲಿ ಪ್ರಕಟಿಸಲಾಯಿತು .ಮುಂದೆ ಪ್ರಕಟಿಸಲಾಗುವುದೆದೆಂದು ಸಭೆಗೆ ತಿಳಿಸಲಾಯಿತು .ವೇದಿಕೆಯಲ್ಲಿದ್ದ ಗಣ್ಯರು ಸಾಂದರ್ಭಿಕವಾಗಿ ಮಾತನಾಡಿದರು .ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ,ಹೆಚ್ಚಿನ ಸಂಖ್ಯೆಯ ತುಳು ಭಾಂದವರು ಸಭೆಯಲ್ಲಿ ಉಪಸ್ಥಿತರಿದ್ದರು . ಸಭೆಯಲ್ಲಿದ್ದ ತುಳು ಭಾಂದವರು ಸಲಹೆ ಸೂಚನೆ ಮತ್ತು ತುಳುಕೂಟದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿ ಮುಂದಿನ ಯೋಜನೆಗಳಿಗೆ ಸಹಕಾರ ನೀಡುವ ಭರವಸೆ ನೀಡಿದರು .ಸಂತೋಷ ಶೆಟ್ಟಿ ಎಣ್ಣೆಹೊಳೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ತುಳುವರ ಸಂಘಟನೆ ,ನಮ್ಮ ತುಳುನಾಡಿನ ಸರ್ವ ತುಳುವರಿಗೆ ಸೇರಿದ ಸಂಸ್ಥೆ ,ಈ ವರೆಗೆ ಸುಮಾರು 24 ವರ್ಷಗಳಿಂದ ತುಳುಕೂಟ ಪುಣೆ ಬೆಳೆದು ಬಂದ ರೀತಿ ಎಲ್ಲರಿಗೂ ತಿಳಿದಿದೆ.,ಆದರೆ ತುಳುಕೂಟಕ್ಕೆ ಅಸ್ತಿ ಎಂಬುದು ಏನೂ ಇಲ್ಲಾ ,ನಮ್ಮ ತುಳುವರ ಸೇವೆ ಮಾಡುವ ಸಂಸ್ಥೆಗೆ ಮತ್ತು ತುಳುವರಿಗೆ ಸಹಕರಿಯಾಗುವಂತಹ ಯೋಜನೆಗಳನ್ನು ಮಾಡಿ ಸಮಾಜಕ್ಕೆ ಅರ್ಪಿಸುವುದು ನಮ್ಮ ಮುಖ್ಯ ಉದ್ದೇಶ .ಇದನ್ನು ನಾವು ಮೊದಲಾಗಿ ಮಾಡಬೇಕು ,ರಜತ ಮಹೋತ್ಸವ ವರ್ಷದಲ್ಲಿ ಈ ಕಾರ್ಯ ಆಗಬೇಕು ಎಂಬುದು ನಮ್ಮ ಯೋಚನೆ ,ಎಲ್ಲಾ ತುಳು ಭಾಂದವರು ಸೇರಿದರೆ ಈ ಕೆಲಸವನ್ನು ನಾವು ಮಾಡಿ ತೋರಿಸಬಹುದು , ನೂತನ ಅಧ್ಯಕ್ಷ ದಿನೇಶ್ ಶೆಟ್ಟಿಯವರ ಚಿಂತನೆ ಕೂಡಾ ಇದೆ ಆಗಿದೆ .,ಸಮಾಜ ಸೇವೆಯೇ ನಮ್ಮ ಮುಖ್ಯ ಉದ್ದೇಶವಾಗಿರಲಿ . ಬೆಳ್ಳಿ ಮಹೋತ್ಸವ ಆಚರಣೆಯನ್ನು ತುಳುವರ ಹಬ್ಬವಾಗಿ ಸಮಾಜ ಮುಖಿಯಾಗಿ ಆಚರಿಸಿ ಸೇವಾ ಕಾರ್ಯವನ್ನು ಮಾಡೋಣ – ಪ್ರವೀಣ್ ಶೆಟ್ಟಿ ಪುತ್ತೂರು – ,ಅಧ್ಯಕ್ಷರು ರಜತ ಮಹೋತ್ಸವ ಸಮಿತಿ ತುಳುಕೂಟ ಪುಣೆ .
ತುಳುಕೂಟ ಪುಣೆಯಲ್ಲಿ ಸ್ಥಾಪಕನಾಗಿ ಮುಂದುವರಿಸಕೊಂಡು ಬಂದ ಸಂಸ್ಥೆಯನ್ನು ಹಿಂದಿನ ಅಧ್ಯಕ್ಷರುಗಳು ಉತ್ತಮ
ರೀತಿಯಲ್ಲಿ ನಡೆಸಿಕೊಂಡು ಬಂದಿದ್ದಾರೆ .ಈಗ ತುಳುಕೂಟಕ್ಕೆ ನೂತನ ಅಧ್ಯಕ್ಷರ ಆಯ್ಕೆ ಮತ್ತು ರಜತ ಮಹೋತ್ಸವಕ್ಕೆ
ಅಧ್ಯಕ್ಷರ ಆಯ್ಕೆಯಾಗಿದೆ .ಇವರಿಂದ ನಮಗೆ ತುಳುಕೂಟಕ್ಕೆ ಸ್ವಂತ ಒಂದು ಅಸ್ತಿ ಮಾಡುವ ತಾಕತ್ತು ಛಲ ಇದೆ ,ಅದು
ಈಡೇರಲಿ ಎಂಬುದೇ ನನ್ನ ಬೇಡಿಕೆ ಈಗಾ ಹಲವಾರು ಸೂಕ್ತ ವ್ಯಕ್ತಿಗಳು ನಮ್ಮ ಜೊತೆಇದ್ದಾರೆ ಕೂಡ , ತುಳುಕೂಟ
ಇನ್ನಷ್ಟು ಬೆಳೆಯಬೇಕು, -ಜಯ ಶೆಟ್ಟಿ ಪುಣೆ ಸ್ಥಾಪಕಾಧ್ಯಕ್ಷರು ತುಳುಕೂಟ ಪುಣೆ ಒಂದು ಸಂಸ್ಥೆ ಅಥವಾ ಸಂಘಟನೆ ಮಾಡುವುದು ಸುಲಭ ,ಆದರೆ ಅದನ್ನು ನಡೆಸಿಕೊಂಡು ಹೋಗುವ ಸಾಮರ್ಥ್ಯ ನಾಯಕರಲ್ಲಿ ಇರಬೇಕು, ಸುಮಾರು ಆರು ವರ್ಷಗಳಿಂದ ತುಳುಕೂಟದ ಅಧ್ಯಕ್ಷನಾಗಿ ಬಹಳಷ್ಟು ಶ್ರಮ ವಹಿಸಿದ್ದೇನೆ , ಕೊರೋನದ ಎರಡು ವರ್ಷ ಕಾಲದಲ್ಲೂ ಕಾರ್ಯಕ್ರಮ ಮಾಡಲು ಆಗದಿದ್ದರೂ ಸಂಘದ ಮುಖಾಂತರ ಸಮಾಜ ಸೇವಾ ಕಾರ್ಯಗಳು ನಡೆದಿದೆ , ನಾನು ಬರುವ ಸಮಯದಲ್ಲಿ ತುಳುಕೂಟದಲ್ಲಿ ಅರ್ಥಿಕ ಬಲ ಇಲ್ಲದಿದ್ದರೂ ,ನಮ್ಮ ಕಾಲಾವದಿಯಲ್ಲಿ ಅದ್ದೂರಿ ಕಾರ್ಯಕ್ರಮಗಳನ್ನು ಮಾಡಿ ,ವಿವಿದ ಧಾರ್ಮಿಕ ,ಶೈಕ್ಷಣಿಕ ಕಲಾ ಸೇವೆಗಳನ್ನು ಮಾಡಿ ತುಳುಕೂಟವನ್ನು ಸ್ವಲ್ಪ ಮಟ್ಟದಲ್ಲಿ ಅರ್ಥಿಕಾಗಿ ಬಲ ಪಡಿಸಿದ ತೃಪ್ತಿ ಇದೆ ,ಮುಂದಕ್ಕೆ ಉತ್ತಮ ಸಾರಥ್ಯ ಬೇಕು ಎಂಬ ನಮ್ಮ ಇಚ್ಛೆಯಂತೆ ದೀನೆಶಣ್ಣ ಅಧ್ಯಕ್ಸರಾಗಿ ಪ್ರವೀಣಣ್ಣ ರಜತ ಮಹೋತ್ಸವ ಅಧ್ಯಕ್ಷರಾಗಿ ಉತ್ತಮ ಯೋಜನೆಗಳನ್ನು ಹಾಕಿ ಕೊಂಡಿದ್ದಾರೆ ..ಅವರೊಂದಿಗೆ ಹೊಂದಿಕೊಂಡು ಮುಂದಿನ ಕಾರ್ಯ ಯೋಜನೆಗಳನ್ನು ರೂಪಿಸಿ ಅದಜ್ಕ್ಕೆ ಬೇಕಾದ ಸಮಿತಿಯನ್ನು ರಚಿಸಿ ಮುಂದಿನ ಹೆಜ್ಜೆಯನ್ನು ಇಡೋಣ -ಶ್ರೀ ಮೋಹನ್ ಶೆಟ್ಟಿ ಎಣ್ಣೆಹೊಳೆ ,ನಿಕಟ ಪೂರ್ವ ಅಧ್ಯಕ್ಷರು ತುಳುಕೂಟ ಪುಣೆತುಳುಕೂಟದ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ನನ್ನ ಜವಾಬ್ಧಾರಿಯನ್ನು ಅರಿತು ನನ್ನ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ ಎಂಬ ತೃಪ್ತಿ ಇದೆ .ತುಳುಕೂಟದ ಸಮಿತಿ ಪದಾಧಿಕಾರಿಗಳು,, ಮಹಿಳಾ ವಿಭಾಗದ ಸದಸ್ಯರು ಮತ್ತು ಯುವ ವಿಭಾಗದ ಸದಸ್ಯರ ಸಹಕಾರದಿಂದ ಮಹಿಳಾ ವಿಭಾಗದ ಮುಖಾಂತರ ಹಲವಾರು ಯಶಸ್ವಿ ಕಾರ್ಯಕ್ರಮಗಳು ನಡೆದಿವೆ . ಸರ್ವ ತುಳು ಭಾಂದವರ ಸಹಕಾರ ಪ್ರೀತಿ ಪೂರ್ವಕವಾಗಿ ಸಿಕ್ಕಿದೆ ,ಮುಂದೆಯೂ ನೂತನ ಸಮಿತಿಗೆ ನಾವೆಲ್ಲರೂ ಸಹಕರಿಸಿ ಪ್ರೋತ್ಸಾಹ ನೀಡಿ ಮುಂದರಿಯೋಣ -ಶ್ರೀಮತಿ ಸುಜಾತಾ ಡಿ.ಶೆಟ್ಟಿ -ಅಧ್ಯಕ್ಷೆ ತುಳುಕೂಟ ಪುಣೆ
ವರದಿ :ಹರೀಶ್ ಮೂಡಬಿದ್ರಿ ಪುಣೆ