ಪುಣೆ ; ಪುಣೆಯ ಹೆಸರಾಂತ ಸಮಾಜ ಸೇವಕ ,ಕಲಾ ಸಂಘಟಕ ಅಪತ್ಭಾಂದವ ಎಂದೇ ಹೆಸರು ಪಡೆದಿರುವ ಪುಣೆಯ – ಖ್ಯಾತ ಉದ್ಯಮಿ ಪ್ರವೀಣ್ ಶೆಟ್ಟಿ ಪುತ್ತೂರು ರವರಿಗೆ 2023 ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ . .ವಿವಿದ ಕ್ಷೇತ್ರಗಳಲ್ಲಿ ಕಾರ್ಯ ಗೈದ, ಮಹಾನ್ ಸಾಧನೆ ಮಾಡಿದ ಸಾಧಕರಿಗೆ ಹೊರನಾಡ ಕನ್ನಡಿಗರ ಮಟ್ಟದಲ್ಲಿ ಕೊಡಮಾಡುವ ಈ ಉಡುಪಿ ಜಿಲ್ಲೆಗೆ ಅನ್ವಯಿಸುವಂತೆ ಈ ಬಾರಿ ಪ್ರಶಸ್ತಿ ಪುಣೆಯ ಪ್ರವೀಣ್ ಶೆಟ್ಟಿ ಪುತ್ತೂರುವರಿಗೆ ಲಭಿಸಿದೆ .
ನವೆಂಬರ್ ಒಂದರಂದು ಉಡುಪಿ ಅಜ್ಜರ ಕಾಡು ಮೈದಾನದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಲ್ಕರ್ ರವರು ಪ್ರವೀಣ್ ಶೆಟ್ಟಿ ಯವರು ಪ್ರಶಸ್ತಿ ಪ್ರದಾನ ಮಾಡಿದರು .
ಪೂನಾದಲ್ಲಿ ಅರ್ .ಬಿ ಐ ಪ್ರವೀಣಣ್ಣ ಎಂದೇ ಪ್ರಸಿದ್ದಿ ಪಡೆದ ಪ್ರವೀಣ್ ಶೆಟ್ಟಿ ಯವರು ,ಜನ್ಮ ಭೂಮಿ ತುಳುನಾಡಿನ ಪ್ರೀತಿಯಿಂದ ,ಕರ್ಮ ಭೂಮಿ ಪುಣೆಯಲ್ಲಿ ಸಾಮಾಜಿಕ ಜೀವನದಲ್ಲಿ ತನ್ನದೊಂದು ಕಾರ್ಯವೆಂದು ಸಮಾಜ ಸೇವೆಗೆ ತೊಡಗಿಸಿಕೊಂಡು ಸ್ವಲ್ಪ ಸಮಯವನ್ನು ಮಿಸಲಿಡಿಸಿ, ಅದೇ ರೀತಿ ತನ್ನ ಆದಾಯದ ಒಂದಂಶವನ್ನು ತೆಗೆದಿಟ್ಟು ದಿನ, ತಂದೆ ತಾಯಿಯವರು ನೀಡಿದ ಸಂಸ್ಕಾರದಂತೆ ,ದಾರ್ಮಿಕತೆಯನ್ನು ಮೈಗೂಡಿಸಿಕೊಂಡು ಬಡ ಬಗ್ಗರ ಸೇವೆಗೆ , ದಾರ್ಮಿಕ ಕ್ಷೇತ್ರಗಳಿಗೆ,ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆಯನ್ನು ನಿಡುವ ಮೂಲಕ ಜನ್ಮಭೂಮಿ ,ಕರ್ಮಭೂಮಿ ಎರಡರಲ್ಲೂ ತನ್ನಿಂದಾದ ಸೇವೆಯನ್ನು ಮಾಡುವ ಸಂಕಲ್ಪವನ್ನು ಮಾಡಿ ಅದೇ ಪ್ರಕಾರವಾಗಿ . ಜಾತಿ ಮತ ಎನ್ನದೆ ತುಳುವ ಕನ್ನಡಿಗರು,ಅಥವಾ ಬೇರೆ ಭಾಷಿಕರೇ ಅಗಲಿ ಅತ್ಯಂತ ಕಷ್ಟವನ್ನು ಅನುಭವಿಸಿ ಅಸಹಾಯಕತೆಯಿಂದ ಬಳಲಿ , ತನ್ನ ಬಳಿಗೆ ಬಂದಂತಹ ಬಡವರಿಗೆ , ಕಷ್ಟದಲ್ಲಿದ್ದವರಿಗೆ , ಅರೋಗ್ಯ ಸಂಬಂದಿತ ರೋಗಿಗಳಿಗೆ ,ವಿಧ್ಯಾಭ್ಯಾಸಕ್ಕೆ ತೊಂದರೆ ಇರುವ ಬಡ ಮಕ್ಕಳಿಗೆ ನೆರವು ನೀಡಿ ಸಹಕರಿಸುವ ಮೂಲಕ ಸಮಾಜ ಸೇವೆಯನ್ನು ಮಾಡುತಿದ್ದಾರೆ .
ತವರೂರ ತುಳು ಬಾಷೆ ,ಕಲೆ, ಸಂಸ್ಕ್ರತಿಗೆ, ಪ್ರೋತ್ಸಾಹ ನೀಡುತ್ತಾ ಬಂದಿದ್ದು ಹಲವಾರು ಸಂಘ ಸಂಸ್ಥೆ ಗಳಿಗೆ ,ಸಹಕಾರವನ್ನು ನೀಡುತ್ತಾ ಬಂದವರು ಇವರು , ಕರ್ನಾಟಕ ಕರಾವಳಿಯ ಶ್ರೀಮಂತ ಕಲೆಯಾದ ಯಕ್ಷಗಾನದ ಮೇಲಿನ ಅತೀವ ಪ್ರೀತಿಯಿಂದ 2009 ರಲ್ಲಿ ಪುಣೆಯಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ [ರಿ]ಯನ್ನು ಸ್ತಾಪಿಸಿ, ಸ್ಥಾಪಕ ಅದ್ಯಕ್ಷರಾಗಿ ಕಾರ್ಯನಿರ್ವೈಸುತಿರುವ ಇವರು , ಪುಣೆ ಬಂಟರ ಸಂಘದ ಟ್ರಸ್ಟಿಯಾಗಿ ಉಪಾಧ್ಯಕ್ಷರಾಗಿ ,ಮತ್ತು ಉಡುಪಿ ಪುತ್ತೂರು ಬಂಟರ ಸಂಘದ ಗೌರವಾಧ್ಯಕ್ಷರಾಗಿ ,ಪುಣೆ ತುಳುಕೂಟದ ರಜತ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ತಮ್ಮ ಸೇವೆಯನ್ನು ಮಾಡುತಿದ್ದಾರೆ .
ಪ್ರವೀಣ್ ಶೆಟ್ಟಿ ಯವರಿಗೆ ಆರ್ಯಭಟ ಪ್ರಶಸ್ತಿ ,ವಿಶ್ವ ತೌಳವ ರತ್ನ ಪ್ರಶಸ್ತಿ ,ಮುಂಬಯಿ ಕಲಾ ಜಗತ್ತು ಕ್ರಿಯೇಷನ್ಸ್ ನಿಂದ ತೌಳವ ಪ್ರಶಸ್ತಿ ,ಸುಬ್ಬಣ್ಣ ಶೆಟ್ಟಿ ಸಂಸ್ಕರಣ ಪ್ರಶಸ್ತಿ , ಮುಂಬಯಿ ಕಲ್ವ ಫ್ರೆಂಡ್ಸ್ ನವರಿಂದ ಪ್ರಶಸ್ತಿ , ಕಾಪು ತುಳುಕೂಟ, ಶ್ರೀ ಗುರುದೇವ ಸೇವಾ ಬಳಗ ಪುಣೆ ,ಬಂಟ್ಸ್ ಅಸೋಸಿಯೇಷನ್ ಪುಣೆ ,ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘ ,ಸಾಂಗ್ಲಿ ತುಳು ಕೂಟ,ಹೊರನಾಡ ಕನ್ನಡಿಗರ ಸಂಘ ಅಹಮದ್ ನಗರ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಿಂದ ಸಮಾಜ ಸೇವಕ ಪ್ರಶಸ್ತಿ ,ಅಜೆಕಾರ್ ಕಲಾಭಿಮಾನಿಗಳ ಬಳಗದವರಿಂದ ಯಕ್ಷ ರಕ್ಷಾ ಪ್ರಶಸ್ತಿ ಮುಂಬಯಿ ಬ್ರಾಮರಿ ಯಕ್ಷ ನೃತ್ಯನಿಲಯದ ದಶಮಾನೋತ್ಸವ ಪ್ರಶಸ್ತಿ , ಬಿ .ಎಲ್ ರಾವ್ ಸಂಸ್ಕರಣ ಪ್ರಶಸ್ತಿ ,ಸೇರಿದಂತೆ ಪುಣೆ ಮುಂಬಯಿಯ ಊರಿನ ಹಲವಾರು ಸಂಘ ಸಂಸ್ಥೆ ಗಳಿಂದ ಪ್ರಶಸ್ತಿ ಗಳು ಲಭಿಸಿವೆ.