ಸ್ತ್ರೀ ಶಕ್ತಿಯೇ ಪ್ರಧಾನವಾಗಿರುವ ಈ ಸೃಷ್ಟಿಯ ಮೇಲಿನ ವೈಭವಗಳು ,ಕಾರ್ಯ ಸಿದ್ದಿಗಳು ಶ್ರೀ ದುರ್ಗಾ ದೇವಿಯ ಕೃಪೆಯಿಂದ ಸೃಷ್ಟಿಯಾಗಿವೆ ,ತಾಯಿಯ ಆರಾಧನೆ ಹಾಗೂ ಭಕ್ತಿಯನ್ನು ಹೊಂದಿ ಪೂಜಿಸಿದರೆ ಜೀವನದಲ್ಲಿ ಧರ್ಮದ ಹಾದಿಯಲ್ಲಿ ಮನ ಶಾಂತಿಯಿಂದ ಸಂತೃಪ್ತಿ ದೊರೆಯಲು ಸಾದ್ಯ, ಉತ್ತಮ ಕಾರ್ಯಕ್ಕೆ ಪುಣ್ಯ ಪ್ರಾಪ್ತಿಯಾಗುವಂತೆ ,ದುಷ್ಟ ಸಂಹಾರಕ್ಕಾಗಿಯೇ ಅವತರಿಸಿದ ದುರ್ಗಾ ಮಾತೆಯ ಪೂಜನೀಯ ಪುಣ್ಯ ಪರ್ವವಿದು ನವರಾತ್ರಿ ಉತ್ಸವ . ನಮ್ಮ ಭಾರತೀಯ ಸಂಸ್ಕ್ರತಿಯಂತೆ ಧಾರ್ಮಿಕ ಆಚರಣೆಗಳು ಬಹಳ ವೈಭಯುತವಾಗಿ ನಡೆಯುತ್ತವೆ ಇದರಲ್ಲಿ ನವರಾತ್ರಿ ಉತ್ಸವ ಸ್ತ್ರೀ ಶಕ್ತಿ ಪ್ರಧಾನವಾಗಿ ನಡೆಯುವ ಹಬ್ಬ ,ಶಕ್ತಿಯ ಸೆಳೆತವಿರುವ ಈ ವೈಭಯುತ ಬಂಟರ ಭವನದಲ್ಲಿ ಮಹಿಳಾ ವಿಭಾಗದ ಸ್ತ್ರೀ ಶಕ್ತಿ ಒಂದಾಗಿ ನಮ್ಮ ತುಳುನಾಡ ಅಚಾರ ವಿಚಾರಗಳನ್ನು ತಿಳಿಸುವ ಈ ಅರ್ಥ ಗರ್ಭಿತ ಕಾರ್ಯಕ್ರಮ ಮಾದರಿಯಾಗಿ ನಡೆದಿದೆ ಎಂದು ಪಡುಬಿದ್ರಿ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಲಯನ್ಸ್ ಗವರ್ನರ್ ಸುರೇಶ್ ಶೆಟ್ಟಿ ನುಡಿದರು .
ಪುಣೆ ಬಂಟರ ಸಂಘದ ವತಿಯಿಂದ ನವರಾತ್ರಿ ಉತ್ಸವವು ವಿವಿದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅಕ್ಟೋಬರ್ 21 ರ ಶನಿವಾರದಂದು ಬಹಳ ವಿಜ್ರಂಭಣೆಯಿಂದ ಜರಗಿತು.ಈ ಉತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಸುರೇಶ್ ಶೆಟ್ಟಿಯವರು ಸಮಾಜದ ಶಕ್ತಿಯನ್ನು ಒಟ್ಟುಗೂಡಿಸಿಕೊಂಡು ಯುಕ್ತಿಯಿಂದ ಮತ್ತು ನಾಯಕತ್ವಗುಣದಿಂದ ಮಹಾನ್ ಕಾರ್ಯ ಮಾಡಬಹುದು ಎಂಬುದಕ್ಕೆ ಅಧ್ಯಕ್ಷ ಸಂತೋಷ್ ಶೆಟ್ಟಿ ಯಂತವರಿಂದ ಸಾದ್ಯ .ಮಹಿಳಾ ವಿಭಾಗದ ಅಧ್ಯಕ್ಷೆ ಸುಲತಾ ಶೆಟ್ಟಿ ಯವರು ಒಂದೇ ಕುಟುಂಬದವರಂತೆ ಎಲ್ಲರನ್ನೂ ಸೇರಿಸಿಕೊಂಡು ಮಾಡಿದ ಈ ದುರ್ಗಾ ಪೂಜೆಯ ವೈಭವ ಮೆಚ್ಚಬೇಕು ,ಜಾತಿ ಮತ ಬೇಧ ಎನ್ನದೆ ಸಮಾಜದಲ್ಲಿ ಉತ್ತಮ ಸೇವಾ ಕಾರ್ಯ ಮಾಡಿದ ಆಯ್ದ ಮಹಿಳೆಯರಿಗೆ ಶ್ರೀ ದುರ್ಗಾ ಪ್ರಶಸ್ತಿ ನೀಡಿ ಸನ್ಮಾನಿಸಿದ ಕಾರ್ಯ ಶ್ಲಾಘನೀಯ ಎಂದರು .
ನವರಾತ್ರಿಯ ಉತ್ಸವದ ಅಂಗವಾಗಿ ಮೊದಲಿಗೆ ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಹರೀಶ್ ಭಟ್ ರವರ ನೇತ್ರತ್ವದಲ್ಲಿ ಕಲ್ಪೋಕ್ತ ದುರ್ಗಾನಮಸ್ಕಾರ ಪೂಜೆ ಜರಗಿತು . ನಂತರ ಸಂಘದ ಸದಸ್ಯರ ಉಪಸ್ಥಿತಿಯಲ್ಲಿ ಪ್ರತಿವರ್ಷದಂತೆ ತುಳುನಾಡಿನ ಸಾಂಪ್ರದಾಯಿಕ ಆಚರಣೆ ಕದಿರು ಕಟ್ಟುವ ಸಮಾರಂಭವು ಬಂಟರ ಭವನದ ಚಾವಡಿಯಲ್ಲಿ ಜರಗಿತು . ಸಂತೋಷ್ ಶೆಟ್ಟಿಯವರು ತೆನೆ ಕಟ್ಟುವ ಪುಣ್ಯ ಕಾರ್ಯವನ್ನು ತುಳುನಾಡ ಸಂಪ್ರದಾಯ ಪ್ರಕಾರ ನೆರವೇರಿಸಿದರು .ಸುಮಂಗಲೆಯರು ಆರತಿ ಬೆಳಗಿದರು .ಸೇರಿದ ಸಮಾಜ ಭಾಂದವರಿಗೆ ತೆನೆ ವಿತರಿಸಲಾಯಿತು .
ನಂತರ ಪುಣೆ ಬಂಟರ ಸಂಘ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾಕಾರ್ಯಕ್ರಮ ಜರಗಿತು ,ಮುಖ್ಯ ಅತಿಥಿಯಾಗಿ ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ಹಾಗೂ ಲಯನ್ಸ್ ಗವರ್ನರ್ ಶ್ರೀ ಸುರೇಶ್ ಶೆಟ್ಟಿ ಯವರು ಉಪಸ್ಥಿತರಿದ್ದರು ,ವಿಶೇಷ ಆಮಂತ್ರಿತ ಗೌರವ ಅತಿಥಿ ಸಮಾಜ ಸೇವಕಿ ಸುಮತಿ ಕೆ .ಶೆಟ್ಟಿ ,ಪುಣೆ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ,ಕೊಶಾದಿಕಾರಿ ಶ್ರೀನಿವಾಸ್ ಶೆಟ್ಟಿ ,ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಗಣೇಶ್ ಹೆಗ್ಡೆ ,ಮಹಿಳಾ ವಿಬಾಗದ ಅಧ್ಯಕ್ಷೆ ಸುಲತಾ ಎಸ್ .ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು . ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .ಯಶೋದ ಶೆಟ್ಟಿ ಪ್ರಾರ್ಥನೆ ಗೈದರು .ಮಹಿಳಾ ವಿಬಾಗದ ಅಧ್ಯಕ್ಷೆ ಸುಲತಾ ಎಸ್ .ಶೆಟ್ಟಿಯವರು ಸ್ವಾಗತಿಸಿ ನವರಾತ್ರಿ ಉತ್ಸವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾನಾಡಿದರು .ಪ್ರತಿ ವರ್ಷದಂತೆ ವಿವಿದ ರೀತಿಯ ಸಮಾಜ ಸೇವೆಯಲ್ಲಿ ಸಾದನೆ ಗೈದ ಒಂಬತ್ತು ಮಹಿಳೆಯರಾದ ಹಿರಿಯ ಪೋಲಿಸ್ ಅಧಿಕಾರಿ ಸ್ವಪ್ನಾಲಿ ಚಂದ್ರಕಾಂತ್ ಶಿಂದೆ ,ಸಮಾಜ ಸೇವಕಿ ರೋಹಿಣಿ ಸುಧೀರ್ ಚಿಮ್ತೆ ,ರಂಗ ಕಲಾವಿದೆ ನಯನ ಸಿ ಶೆಟ್ಟಿ,ಯೋಗ ಸಾಧಕಿ ಹೀರಾ ರಾಜ್ ಶೇಖರ್ ಶೆಟ್ಟಿ ,ಸಮಾಜ ಸುಧಾರಕಿ ನೂತನ್ ಸುವರ್ಣ ,ಶಿಕ್ಷಕಿ ಶೋಭಾ ಪಂಚಂಗಥ್, ಪ್ರೇರಕ ಶಕ್ತಿಯಾಗಿ ಕಾರ್ಯ ಗೈಯುವ ಮೀನಾಕ್ಷಿ ಜೋಟಾವರ್ ,ನರ್ಸ್ ಸುನಂದಾ ಶೆಟ್ಟಿ ,ಸಮಾಜ ಸೇವಕಿ ಮನಿಷಾ ಫಾಟೆ,ಯವರಿಗೆ ಶಾಲು ಪಲ ಪುಷ್ಪ ,ಸ್ಮರಣಿಕೆ ನೀಡಿ ಶ್ರೀ ನವದುರ್ಗಾ ಪ್ರಶಸ್ತಿಯನ್ನು ನೀಡಿ ಬಂಟರ ಸಂಘದ ಮಹಿಳಾ ವಿಬಾಗದ ಪದಾಧಿಕಾರಿಗಳು ಸನ್ಮಾನಿಸಿದರು. ಮುಖ್ಯ ಅತಿಥಿಗಳಾದ ಸುರೇಶ ಶೆಟ್ಟಿ ಮತ್ತು ಸುಮತಿ ಕೆ .ಶೆಟ್ಟಿ ಯವರನ್ನು ಶಾಲು ಪುಷ್ಪ ,ಸ್ಮರಣಿಕೆ ನೀಡಿ ಸಂಘದ ವತಿಯಿಂದ ಸಂತೋಷ್ ಶೆಟ್ಟಿ ಮತ್ತು ಸುಲತಾ ಶೆಟ್ಟಿಯವರು ಗೌರವಿಸಿದರು .ವಿವಿದ ಸಂಘ ಸಂಸ್ಥಗಳ ಅಧ್ಯಕ್ಷರುಗಳನ್ನು ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು . ನಂತರ ಬಂಟರ ಸಂಘದ ಮಹಿಳಾ ವಿಬಾಗ ,ಪ್ರಾದೇಶಿಕ ಸಮಿತಿಯರಿಂದ ಯುವ ವಿಭಾಗದವರಿಂದ ಮತ್ತು ಸಾಮೂಹಿಕ ದಾಂಡಿಯಾ ರಾಸ್ ನೃತ್ಯ ಕಾರ್ಯಕ್ರಮ ಜರಗಿತು .ಹೆಚ್ಚಿನ ಸಂಖ್ಯೆಯ ಪುರುಷರು ಮಹಿಳೆಯರು ದಾಂಡಿಯಾ ನೃತ್ಯ ದಲ್ಲಿ ಪಾಲ್ಗೊಂಡರು .ಮಹಿಳಾ ವಿಬಾಗದ ಪ್ರಮುಖರಾದ ಸುಚಿತ್ರಾ ಎಸ್ .ಶೆಟ್ಟಿ ,ಶಮ್ಮಿ ಎ .ಹೆಗ್ಡೆ ,ನಯನ ಜೆ .ಶೆಟ್ಟಿ ,ದಿವ್ಯಾ ಎಸ್.ಶೆಟ್ಟಿ ,ಗೀತಾ ಜೆ .ಶೆಟ್ಟಿ ,ಸಂಧ್ಯಾ ಅರ್.ಶೆಟ್ಟಿ ,ವಿನಯಾ ಯು .ಶೆಟ್ಟಿ ,ಸಾರಿಕಾ ಸಿ .ಶೆಟ್ಟಿ ,ನೀನಾ .ಬಿ .ಶೆಟ್ಟಿ ,ನಿವೇದಿತಾ ಎಸ್,ಶೆಟ್ಟಿ ,ಆಶಾ ಪಿ .ಶೆಟ್ಟಿ ,ವೀಣಾ ಪಿ .ಶೆಟ್ಟಿ ,ಗೀತಾ ಅರ್.ಶೆಟ್ಟಿ,ಸಂಧ್ಯಾ ವಿ .ಶೆಟ್ಟಿ ಯವರು ಸಹಕರಿಸಿದರು .ಬಂಟರ ಸಂಘದ ಪ್ರಮುಖರಾದ ಸತೀಶ್ ಅರ್, ಶೆಟ್ಟಿ ,ಪ್ರಶಾಂತ್ ಶೆಟ್ಟಿ ಹೆರ್ಗೆ ಬೀಡು ,ದಿನೇಶ್ ಶೆಟ್ಟಿ ಕಳತ್ತೂರು , ರಾಮಕೃಷ್ಣ ಶೆಟ್ಟಿ ,ವಿವೇಕಾನಂದ ಶೆಟ್ಟಿ ಅವರ್ಸೆ ,ಪುರುಷೋತ್ತಮ ಶೆಟ್ಟಿ ,ಸುಧೀರ್ ಶೆಟ್ಟಿ , ಶೇಖರ್ ಸಿ ಶೆಟ್ಟಿ ,ಗಣೇಶ್ ಜೆ ,ಪೂಂಜಾ ,ಉದಯ್ ಜೆ ಶೆಟ್ಟಿ ,ಪ್ರಮಿಳಾ ಎಸ್.ಶೆಟ್ಟಿ .ಯಶೋದಾ ಜಿ .ಶೆಟ್ಟಿ ,ಯುವ ವಿಭಾಗ ,ದಕ್ಷಿಣ ಪೂರ್ವ ,ಮತ್ತು ಉತ್ತರಪಶ್ಚಿಮ ವಲಯದ ಸಮಿತಿ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು .
ಶ್ರೀಮತಿ ಅಕ್ಷತಾ ಸುಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿದರು ,ಕಿಶೋರ್ ಹೆಗ್ಡೆಯವರು ಧನ್ಯವಾದ ಗೈದರು .ನಮ್ಮ ಬಂಟರ ಸಂಘದ ನವರಾತ್ರಿ ಉತ್ಸವವನ್ನು ಪ್ರತಿ ವರ್ಷ ವಿಶೇಷ ಅರ್ಥ ಪೂರ್ಣವಾಗಿ ಮಹಿಳಾ ವಿಬಾಗದವರು ನಡೆಸಿಕೊಂಡು ಬರುತಿದ್ದಾರೆ.ಸುಸ್ಥಿತಿಯ ಸಮಾಜದ ನಿರ್ಮಾಣದಲ್ಲಿ ಸ್ತ್ರೀಯರ ಪಾತ್ರ ಮಹತ್ತರವಾದುದು .ಸಮಾಜದಲ್ಲಿ ಯಾವುದೇ ರೀತಿಯ ಪ್ರಚಾರವನ್ನು ಬಯಸದೆ ವಿವಿದ ಕ್ಷೇತ್ರದಲ್ಲಿ ಅಂದರೆ ಸಮಾಜ ಸೇವೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡ ಒಂಬತ್ತು ಸ್ತ್ರೀಯರನ್ನು ಗುರುತಿಸಿ ಶ್ರೀ ನವದುರ್ಗಾ ಪ್ರಶಸ್ತಿಯನ್ನು ಪ್ರಧಾನಿಸಲಾಗಿದೆ .ಇದು ಪುಣೆ ಬಂಟರ ಸಂಘದ ವಿಶೇಷತೆ . ಇಂದಿನ ನಮ್ಮ ಅತಿಥಿ ಸುಮತಿ ಶೆಟ್ಟಿಯವರು ಸಮಾಜದ ,ಸಂಘದ ಮೇಲಿನ ಪ್ರೀತಿಯಿಂದ ದೊಡ್ಡ ರೀತಿಯ ದೇಣಿಗೆಯನ್ನು ನೀಡಿ ತಮ್ಮ ಘನತೆಯನ್ನು ಮೆರೆದವರು ,ಅದೇ ರೀತಿ ಮುಖ್ಯ ಅತಿಥಿ ಸುರೇಶ್ ಶೆಟ್ಟಿಯವರು ಸಮಾಜಕ್ಕಾಗಿ ತಮ್ಮನ್ನು ತೊಡಗಿಸಿಕೊಂಡವರು, ಸಮಾಜ ಸೇವೆಯಲ್ಲಿ ಮಹತ್ತರವಾದ ಕೊಡುಗೆ ನೀಡಿದವರು .ಇವರ ಸಮ್ಮುಖದಲ್ಲಿ ನಡೆದ ನವರಾತ್ರಿಯ ಈ ಉತ್ಸವ ಎಲ್ಲಾ ರೀತಿಯಲ್ಲೂ ಅರ್ಥಪೂರ್ಣವಾಗಿನಡೆದಿದೆ ,ಎಲ್ಲಾ ಸಮಿತಿಯವರು ಸಹಕಾರ ನೀಡಿದ್ದಾರೆ ಎಲ್ಲರಿಗೂ ಅಭಿನಂದನೆಗಳು-ಶ್ರೀ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಅಧ್ಯಕ್ಷರು ಬಂಟರ ಸಂಘ ಪುಣೆ .
ನವರಾತ್ರಿ ಉತ್ಸವ ಎಂದರೆ ಸ್ತ್ರೀಶಕ್ತಿ ಆರಾಧನೆಯ ಹಬ್ಬ ,ಉತ್ಸವ ಆಚರಣೆಯಲ್ಲಿ ಮಹಿಳೆಯರಿಗೆ ಜವಾಬ್ದಾರಿ ತುಂಬಾ ಇದೆ ,ಇಲ್ಲಿ ಶ್ರೀ ದುರ್ಗಾ ದೇವಿಯ ಆರಾಧನೆಯೊಂದಿಗೆ ತೆನೆ ಹಬ್ಬ ,ಪೂಜೆ ಪುರಸ್ಕಾರ ಭಕ್ತಿ ಶ್ರದ್ದೆಯಿಂದ ನಡೆದಿದೆ . ನಮ್ಮ ಸಂಘದ ಮಹಿಳಾ ವಿಬಾಗದ ಎಲ್ಲಾ ಪದಾಧಿಕಾರಿಗಳು, ಪ್ರಾದೇಶಿಕ ಸಮಿತಿಯನ್ನು ಸೇರಿಸಿಕೊಂಡು ನಾವು ಮಾಡುವ ಈ ಧಾರ್ಮಿಕ ಕಾರ್ಯಕ್ಕೆ ಸಂಘದ ಅಧ್ಯಕ್ಷರು ಮತ್ತು ಎಲ್ಲರ ಸಂಪೂರ್ಣ ಸಹಕಾರ ಸದಾ ಸಿಗುತ್ತದೆ .ಸಮಾಜದಲ್ಲಿ ಸ್ತ್ರೀಯರ ಮಹತ್ವವನ್ನು ಅರಿತು ನಾವು ನೀಡುವ ಶ್ರೀ ನವದುರ್ಗಾ ಪ್ರಶಸ್ತಿ ಅರ್ಹ ಮಹಿಳೆಯರಿಗೆ ಸಂದಿದೆ .ಸಹಕರಿಸದ ಎಲ್ಲರಿಗೂ ವಂದನೆಗಳು .ಶ್ರೀಮತಿ ಸುಲತಾ ಎಸ್.ಶೆಟ್ಟಿ -ಅಧ್ಯಕ್ಷೆ ಮಹಿಳಾ ವಿಬಾಗ ಬಂಟರ ಸಂಘ ಪುಣೆ
ವರದಿ- ಹರೀಶ್ ಮೂಡಬಿದ್ರಿ ಪುಣೆ