ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಅಕ್ಟೋಬರ್ 6 ರಿಂದ 8 ರ ವರೆಗೆ ಮೂರು ದಿನಗಳ ಕಾಲ ಸುರತ್ಕಲ್ ಬಂಟರ ಭವನದಲ್ಲಿ ನಡೆಯುವ ಸೀರೆ, ಆಭರಣಗಳ ಮಾರಾಟ ಮೇಳವನ್ನು ಶ್ರೀಮತಿ ನಿರ್ಮಿತ ಸತೀಶ್ ಶೆಟ್ಟಿ ಪಟ್ಲ ಉದ್ಘಾಟಿಸಿದರು. ಸುರತ್ಕಲ್ ಪರಿಸರದವರಿಗೆ ಇದೊಂದು ಅಪೂರ್ವ ಅವಕಾಶ. ನವನವೀನ ಮಾದರಿಯ ಸೀರೆ, ಸಿದ್ದ ಉಡುಪುಗಳನ್ನು ಖರೀದಿಸುವ ಅವಕಾಶ ಒದಗಿದೆ. ಗ್ರಾಹಕರು ಇದರ ಸದುಪಯೋಗ ಪಡೆಯಬೇಕೆಂದು ನಿರ್ಮಿತ ಸತೀಶ್ ಶೆಟ್ಟಿ ತಿಳಿಸಿದರು.
ಮಹಿಳಾ ವೇದಿಕೆಯ ಅಧ್ಯಕ್ಷೆ ಭವ್ಯಾ ಎ ಶೆಟ್ಟಿ ಮಾತನಾಡಿ ಕಳೆದ ಮೂರು ವರ್ಷಗಳಿಂದ ಉಡುಪಿ- ಉದ್ಯಾವರದ ಜಯಲಕ್ಷ್ಮೀ ಸಿಲ್ಕ್ಸ್ ಇವರ ಸೀರೆ ಮತ್ತು ಸಿದ್ದ ಉಡುಪುಗಳನ್ನು ಮಹಿಳಾ ವೇದಿಕೆಯ ಆಶ್ರಯದಲ್ಲಿ ಸುರತ್ಕಲ್ ಬಂಟರ ಭವನದಲ್ಲಿ ಮಾರಾಟ ಮೇಳ ನಡೆದಿದೆ. ಇವರ ಸೀರೆ, ಸಿದ್ದುಉಡುಪುಗಳಿಗೆ ಎಲ್ಲೆಡೆ ಬಹುಬೇಡಿಕೆ ಇದೆ. ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುರತ್ಕಲ್ ಬಂಟರ ಭವನದಲ್ಲಿ ಅಕ್ಟೋಬರ್ 6 ರಿಂದ 8 ರ ವರೆಗೆ ಮಾರಾಟ ಮೇಳದ ವ್ಯವಸ್ಥೆಯನ್ನು ಮಾಡಿದ್ದೇವೆ. ಜೊತೆಗೆ ಇತರ ಖಾದ್ಯ ವಸ್ತುಗಳು, ಆಭರಣ ಮೇಳವೂ ನಡೆಯಲಿದೆ ಎಂದವರು ತಿಳಿಸಿದರು.
ಪ್ರತೀ ವರ್ಷವೂ ಗ್ರಾಹಕರಿಂದ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿದೆ. ಹೆಚ್ಚೆಚ್ಚು ಜನರು ಸೇರುತ್ತಿದ್ದಾರೆ. ಪುರುಷರ, ಮಕ್ಕಳ ಸಿದ್ದ ಉಡುಗಳೂ ಇಲ್ಲಿ ಲಭ್ಯವಿದೆ ಎಂದು ನಿಕಟಪೂರ್ವ ಅಧ್ಯಕ್ಷೆ ಚಿತ್ರಾ ಜೆ ಶೆಟ್ಟಿ ತಿಳಿಸಿದರು. ಜಯಲಕ್ಷ್ಮೀ ಸಿಲ್ಕ್ಸ್ ಉಡುಪಿ ಉದ್ಯಾವರ ದೇಶ ವಿದೇಶಗಳಲ್ಲಿ ಪ್ರಸಿದ್ದಿ ಪಡೆದಿದೆ. ಸುರತ್ಕಲ್ ಪರಿಸರದವರು ಇದರ ಪ್ರಯೋಜನ ಪಡೆಯಬೇಕೆಂದು ಸುರತ್ಕಲ್ ಬಂಟರ ಸಂಘದ ಉಪಾಧ್ಯಕ್ಷ ಪುಷ್ಪರಾಜ ಶೆಟ್ಟಿ ಕುಡುಂಬೂರು ತಿಳಿಸಿದರು.
ಮಹಿಳಾ ವೇದಿಕೆಯ ಉಪಾಧ್ಯೆಕ್ಷೆ ಸರೋಜ ಟಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಜಾತ ಶೆಟ್ಟಿ ಕೃಷ್ಣಾಪುರ, ಪದಾಧಿಕಾರಿಗಳಾದ ವಜ್ರಾಕ್ಷಿ ಶೆಟ್ಟಿ, ಸುಜಾತ ಶೆಟ್ಟಿ ಕಾಟಿಪಳ್ಳ, ಬಬಿತಾ ಶೆಟ್ಟಿ, ನಾಗಲತಾ ಶೆಟ್ಟಿ, ಮಹಿಳಾ ವೇದಿಕೆಯ ಮಾಜೀ ಅಧ್ಯಕ್ಷರಾದ ಅಂಜನಾ ಶೆಟ್ಟಿ, ಆಶಾ ಶೆಟ್ಟಿ, ಚಂದ್ರಕಲಾ ಶೆಟ್ಟಿ, ಬೇಬಿ ಶೆಟ್ಟಿ, ಚಿತ್ರಾ ಜೆ ಶೆಟ್ಟಿ, ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಂಜ, ಮಾಜಿ ಅಧ್ಯಕ್ಷ ಉಲ್ಲಾಸ್ ಶೆಟ್ಟಿ, ಉಪಾಧ್ಯಕ್ಷ ಪುಷ್ಪರಾಜ ಶೆಟ್ಟಿ ಕುಡುಂಬೂರು ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಅಧ್ಯಕ್ಷೆ ಭವ್ಯಾ ಎ ಶೆಟ್ಟಿ ಸ್ವಾಗತಿಸಿದರು. ಸುಧಾ ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಬೆಳಿಗ್ಗೆ 8 ರಿಂದ ರಾತ್ರಿ 8 ರ ವರೆಗೆ ಉಡುಪಿ (ಉದ್ಯಾವರ) ಜಯಲಕ್ಷ್ಮೀ ಸಿಲ್ಕ್ಸ್ ಇವರಿಂದ ನವನವೀನ ಮಾದರಿಯ ಸೀರೆ, ರೆಡಿಮೆಡ್ ಸಿದ್ದ ಉಡುಪುಗಳು ಮಾರಾಟ ಮೇಳದಲ್ಲಿ ಲಭ್ಯವಿದೆ. ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಜರಗುವ ಮಾರಾಟ ಮೇಳದಲ್ಲಿ ಕಾಂಜೀವರಂ, ಬನಾರಸ್, ಧರ್ಮಾವರಂ, ಪೋಚಂಪಳ್ಳಿ, ಆರ್ಣ, ಉಪ್ಪಡ ಟಸ್ಸರ್, ರೇಶ್ಮೆ ಸೀರೆಗಳು, ಶುದ್ದ ಹತ್ತಿ ಕೈಮಗ್ಗದ ಸೀರೆಗಳು, ಜಾರ್ಜೆಟ್, ಕ್ರೇಪ್, ಷಿಫಾನ್ ಸೀರೆಗಳು, ಮನಮೋಹಕ ಕಸೂತಿ ಸೀರೆಗಳು ಮತ್ತು ಫ್ಯಾನ್ಸಿ ಸೀರೆಗಳ ಬೃಹತ್ ಪ್ರದರ್ಶನ ಇದೆ. ಅತ್ಯುತ್ತಮ ಗುಣಮಟ್ಟದ ರೇಷ್ಮೆ, ಹತ್ತಿ, ಕ್ರೇಪ್, ಪಾಲಿಸ್ಟರ್, ಸಲ್ವಾರ್ ಸೂಟ್ ಬಟ್ಟೆಗಳು, ಕುರ್ತಾಗಳು, ಬೆಡ್ ಶೀಟ್ ಗಳು, ಕಸೂತಿ ಬ್ಯಾಗ್ ಗಳು, ಪಾದರಕ್ಷೆಗಳು ಲಭ್ಯವಿದೆ.
ಜೊತೆಗೆ ಚಿಕನ್ ಮಸಾಲ, ಚಿಕನ್ ಸುಕ್ಕ, ಗಿರೋಸ್ಟ್ ಸಾಂಬಾರು ಇತ್ಯಾದಿ ಮಸಾಲೆ ಪುಡಿಗಳು ಲಭ್ಯ. ಎಲ್ಲವೂ ಸಮಂಜಸ ಬೆಲೆಯಲ್ಲಿ ಗುಣಮಟ್ಟದ ಖಾತರಿಯೊಂದಿಗೆ ಗ್ರಾಹಕರಿಗೆ ದೊರೆಯಲಿದೆ.
ಈ ಬಾರಿ ಮೂರು ದಿನಗಳ ಮಾರಾಟ ಮೇಳದಲ್ಲಿ ಮಕ್ಕಳ ಮತ್ತು ಪುರುಷರ ಸಿದ್ದ ಉಡುಪುಗಳೂ ಲಭ್ಯ ಇದೆ.
ಸುರತ್ಕಲ್ ಸುತ್ತಮುತ್ತಲ ಪ್ರದೇಶದ ನಾಗರಿಕರಿಗೊಂದು ಅವಕಾಶ. ಸುರತ್ಕಲ್ ನಲ್ಲೇ ಉಡುಪಿ ಉದ್ಯಾವರದ ಜಯಲಕ್ಚ್ಮೀ ಸಿಲ್ಕ್ಸ್ ನ ನವನವೀನ ಮಾದರಿಯ ಸೀರೆಗಳನ್ನು ಖರೀದಿಸುವ ಅಪೂರ್ವ ಅವಕಾಶವನ್ನು ಸುರತ್ಕಲ್ ನ ಬಂಟರ ಮಹಿಳಾ ವೇದಿಕೆ ಮಾಡಿಕೊಟ್ಟಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮಹಿಳಾ ವೇದಿಕೆಯ ಅಧ್ಯಕ್ಷೆ ಭವ್ಯಾ ಎ ಶೆಟ್ಟಿ ವಿನಂತಿಸಿದ್ದಾರೆ.