ಬಂಟರ ಚಾವಡಿ ಪರ್ಕಳ( ರಿ) ಇದರ ವಾರ್ಷಿಕ ಮಹಾಸಭೆಯು ಪರ್ಕಳ ಸುರಕ್ಷಾ ಸಭಾಭವನದಲ್ಲಿ ಜರಗಿತು. ಸಭೆಯ ಅಧ್ಯಕ್ಷ ಸ್ಥಾನವನ್ನು ಬಂಟರ ಚಾವಡಿಯ ಚಾವಡಿಯ ಅಧ್ಯಕ್ಷರಾದ ಶ್ರೀ ತಾರನಾಥ್ ಹೆಗ್ಡೆಯವರು ವಹಿಸಿದ್ದರು. ಸಂಘದ ಗೌರವಾಧ್ಯಕ್ಷರಾದ ಶ್ರೀ ಜಯರಾಜ್ ಹೆಗ್ಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಧ್ಯಕ್ಷರಾದ ವಸಂತ ಶೆಟ್ಟಿ ಚೆನ್ನಿಬೆಟ್ಟು, ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಹಿರೇಬೆಟ್ಟು, ಕೋಶಾಧಿಕಾರಿ ದಿನಕರ್ ಶೆಟ್ಟಿ ಹೆರ್ಗ, ಸಂಘಟನಾ ಕಾರ್ಯದರ್ಶಿ ಶುಭಕರ್ ಶೆಟ್ಟಿ ಮತ್ತು 5 ಘಟಕಗಳ ಅಧ್ಯಕ್ಷರು ವೇದಿಕೆಯಲ್ಲಿ ಆಸೀನರಾಗಿದ್ದರು.
ಕುಮಾರಿ ಅನುಷ ಪ್ರಾರ್ಥನೆ ಮಾಡಿದರು. ಕಾರ್ಯಧ್ಯಕ್ಷರಾದ ವಸಂತ ಶೆಟ್ಟಿ ಚೆನ್ನಿಬೆಟ್ಟು ಸಭೆಗೆ ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಹಿರೇಬೆಟ್ಟು ಸಂಘದ ಕಾರ್ಯ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಪೂರ್ವಧ್ಯಕ್ಷರಾದ ಶಿವರಾಮ ಶೆಟ್ಟಿಯವರು ಸಂಘದ ಧ್ಯೇಯೋದ್ದೇಶದ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾಡಿದರು. ಕೋಶಾಧಿಕಾರಿ ದಿನಕರ ಶೆಟ್ಟಿಯವರು 2022-23ನೇ ಸಾಲಿನ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು ಮತ್ತು ಅದಕ್ಕೆ ಸಭೆಯ ಸದಸ್ಯರ ಅನುಮೋದನೆಯನ್ನು ಪಡೆದುಕೊಂಡರು.
ಹಾಜರಿದ್ದ ಸದಸ್ಯರ ಅನುಮತಿ ಮೇರೆಗೆ 2023-24ನೇ ಸಾಲಿಗೆ ಲೆಕ್ಕಪರಿಶೋಧಕರಾಗಿ ಅರುಣ್ ನಾಯಕ್ & ಕಂ ಯನ್ನೇ ಮುಂದುವರೆಸಲು ನಿರ್ಧರಿಸಲಾಯಿತು.
ಗೌರವಾಧ್ಯಕ್ಷರಾದ ಜಯರಾಜ್ ಹೆಗ್ಡೆಯವರು ಮುಂದೆ ಸಂಘದ ಸದಸ್ಯರಿಗೆ ವಿವಿಧ ಸಂಸ್ಥೆಗಳಿಂದ ಸಿಗುವ ಸಹಾಯಧನವನ್ನು ಸಂಘದ ಸದಸ್ಯರಿಗೆ ತಲಪಿಸಲು ಯಾವ ರೀತಿ ಕೆಲಸ ಮಾಡಬೇಕೆಂಬುದರ ಬಗ್ಗೆ ಸಂಘದ ಪಧಾಧಿಕಾರಿಗಳಿಗೆ ಮಾಹಿತಿ ನೀಡಿದರು. ಅಧ್ಯಕ್ಷರಾದ ತಾರನಾಥ್ ಹೆಗ್ಡೆಯವರು ಸಂಘದ ಕಾರ್ಯಚಟುವಟಿಕೆಗಳಲ್ಲಿ ಎಲ್ಲಾ ಸದಸ್ಯರ ಪಾಲ್ಗೊಳ್ಳುವಿಕೆಯನ್ನು ಶ್ಲಾಘಿಸಿದರು. ಮುಂದೆ ಕೂಡ ಸಂಘದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಲು ಎಲ್ಲಾ ಸದಸ್ಯರ ಸಹಕಾರವನ್ನು ಕೋರಿದರು ಮತ್ತು ಸಂಘದ ಕಾರ್ಯಚಟುವಟಿಕೆಗಳನ್ನು ನಡೆಸಲು ಸಂಘಕ್ಕೆ ತುರ್ತು ಜಾಗದ ಅವಶ್ಯಕತೆಯ ಬಗ್ಗೆ ಸದಸ್ಯರಿಗೆ ಮನವರಿಕೆ ಮಾಡಿದರು.
ಬಂಟರ ಚಾವಡಿ ಪರ್ಕಳದ ಮಹಿಳಾ ಘಟಕವನ್ನು ರಚನೆ ಮಾಡುವ ಸಲುವಾಗಿ ಮಹಿಳಾ ಘಟಕಕ್ಕೆ ಶ್ರೀಮತಿ ನಳಿನಿ ಶೆಟ್ಟಿಯವರನ್ನು ಮತ್ತು ಯುವ ಘಟಕವನ್ನು ರಚನೆ ಮಾಡುವ ಸಲುವಾಗಿ ಯುವ ಘಟಕಕ್ಕೆ ಶ್ರೀ ರಾಹುಲ್ ಶೆಟ್ಟಿಯವರನ್ನು ಸಂಚಾಲಕರನ್ನಾಗಿ ಮಾಡುವ ಬಗ್ಗೆ ಸಭೆಯಲ್ಲಿ ಹಾಜರಿದ್ದ ಸದಸ್ಯರ ಅನುಮೋದನೆಯನ್ನು ಪಡೆಯಲಾಯಿತು. ಪರ್ಕಳ ಘಟಕದ ಅಧ್ಯಕ್ಷರಾದ ರಾಜಮೋಹನ್ ಶೆಟ್ಟಿಯವರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ರಾಷ್ಟ್ರ ಗೀತೆಯೊಂದಿಗೆ ಮಹಾಸಭೆಯನ್ನು ಮುಕ್ತಾಯಗೊಳಿಸಲಾಯಿತು