ಮುಂಬಯಿಯಲ್ಲಿ ನಡೆದ ನಡೆದ ‘ಮಿಸ್ ದಿವಾ ಯೂನಿವರ್ಸ್ 2023’ ಸ್ಪರ್ಧೆಯಲ್ಲಿ ಕರ್ನಾಟಕದ ತ್ರಿಶಾ ಶೆಟ್ಟಿ ‘ಮಿಸ್ ದಿವಾ ರನ್ನರ್ ಅಪ್’ ಕಿರೀಟಕ್ಕೆ ಭಾಜನರಾಗಿದ್ದಾರೆ. ಕಳೆದ ವರ್ಷ ಮಂಗಳೂರು ಮೂಲದ ಸುಂದರಿ ದಿವಿತಾ ರೈ ಅವರು (Diwita Rai) ಅವರು ‘ಮಿಸ್ ದಿವಾ ಯೂನಿವರ್ಸ್ 2022’ ಆಗಿ ಹೊರಹೊಮ್ಮಿದ್ದರು. ಈ ಬಾರಿ ರನ್ನರ್ ಅಪ್ ಸ್ಥಾನಕ್ಕೆ ಕರ್ನಾಟಕ ತೃಪ್ತಿಪಟ್ಟುಕೊಂಡಿದೆ.
‘ಮಿಸ್ ದಿವಾ ಯೂನಿವರ್ಸ್ 2023’ ಕಿರೀಟ ಚಂಡೀಗಢದ ಬೆಡಗಿ ಶ್ವೇತಾ ಶಾರದಾ (Shwetha Sharda) ಅವರ ಪಾಲಾಗಿದೆ. ಕಳೆದ ವರ್ಷದ ವಿಜೇತೆ ದಿವಿತಾ ರೈ ಅವರು ಈ ಕಿರೀಟವನ್ನು ಈ ಸಾಲಿನ ವಿಜೇತೆ ಶ್ವೇತಾ ಶಾರದಾ ಅವರಿಗೆ ತೊಡಿಸಿದರು. ಮಿಸ್ ದಿವಾ ಯೂನಿವರ್ಸ್ 2023 ರಲ್ಲಿ ಕರ್ನಾಟಕದಿಂದ ಬಂದ ತ್ರಿಶಾ ಶೆಟ್ಟಿ ಮೊದಲ ರನ್ನರ್-ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ತ್ರಿಶಾ ಶೆಟ್ಟಿ ಅವರ ಕುರಿತು ಹೇಳುವುದಾದರೆ, 22 ನೇ ವಯಸ್ಸಿನಲ್ಲಿ, ತ್ರಿಶಾ ಮನೋವಿಜ್ಞಾನದಲ್ಲಿ ಪದವೀಧರರಾಗಿ, ಮಾಡೆಲ್ ಮತ್ತು ನಟಿಯಾಗಿ ನಿಂತಿದ್ದಾರೆ. ಈಕೆ ನೃತ್ಯಗಾತಿ. ಭರತನಾಟ್ಯ, ಕಥಕ್ ಮತ್ತು ಬೆಲ್ಲಿ ಡ್ಯಾನ್ಸ್ನ ಆಕರ್ಷಕ ಲಯಗಳನ್ನು ಕರಗತ ಮಾಡಿಕೊಂಡಿದ್ದಾರೆ. ಮನೋವಿಜ್ಞಾನದ ಅಧ್ಯಯನ ಮಾಡಿರುವ ತ್ರಿಶಾ ಅವರು, ವಿಕಲಾಂಗ ಮಕ್ಕಳಿಗೆ ಸೃಜನಾತ್ಮಕ ಶಿಕ್ಷಣವನ್ನು ಉತ್ತೇಜಿಸುತ್ತಿದ್ದಾರೆ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಮಿಸ್ ದಿವಾ ಯೂನಿವರ್ಸ್ 2023 ಹಂತವನ್ನು ಅಲಂಕರಿಸುವ ಮೊದಲು, ತ್ರಿಶಾ ಈ ಹಿಂದೆ ಫೆಮಿನಾ ಮಿಸ್ ಗೋವಾ 2020 ರಲ್ಲಿ ಭಾಗವಹಿಸಿದ್ದರು, ಸೌಂದರ್ಯ ಸ್ಪರ್ಧೆಯ ಜಗತ್ತಿನಲ್ಲಿ ತನ್ನ ಆರಂಭಿಕ ತೊಡಗಿಸಿಕೊಳ್ಳುವಿಕೆಯನ್ನು ಪ್ರದರ್ಶಿಸಿದರು. ಮಾಡೆಲಿಂಗ್ ಪ್ರಯಾಣವು ಅವರ ಜೀವನದ ಗಣನೀಯ ಭಾಗವಾಗಿದೆ, ಬ್ಲೆಂಡರ್ಸ್ ಪ್ರೈಡ್ ಫ್ಯಾಶನ್ ಟೂರ್ ಮತ್ತು ಟೈಮ್ಸ್ ಫ್ಯಾಶನ್ ವೀಕ್ನಂತಹ ಪ್ರಮುಖ ಘಟನೆಗಳನ್ನು ಒಳಗೊಂಡಂತೆ ಹಲವಾರು ಫ್ಯಾಶನ್ ಶೋಗಳಲ್ಲಿ ಕಾಣಿಸಿಕೊಂಡಿದ್ದರು.
ತ್ರಿಶಾ ಶೆಟ್ಟಿ ಟ್ರಾವೆಲಿಂಗ್ ಮಾಡಲು ಇಷ್ಟಪಡುತ್ತಾರೆ ಮತ್ತು ಪ್ರಯಾಣದ ಸುಂದರ ಅನುಭವವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಮಿಸ್ ದಿವಾ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಅವಿಭಾಜ್ಯ ವಿಭಾಗವಾಗಿದೆ. ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಿಗೆ ಭಾರತದ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಇದು ಹೊಂದಿದೆ.