ಪುಣೆ : ಜನ ಸಾಮಾನ್ಯರಿಗೆ ಬೇಕಾದ ವಸ್ತುಗಳು ಪ್ರಾಮುಖ್ಯತೆಯನ್ನು ಹೊಂದಿ ಪ್ರದರ್ಶನಗೊಂಡಾಗ ಉತ್ಪನ್ನ ಮತ್ತು ಸೇವೆಯನ್ನು ಉತ್ತೇಜಿಸಲು ಸಹಕಾರಿಯಾಗುತ್ತದೆ, ಇಂತಹ ಪ್ರದರ್ಶನಗಳಿಂದ ನಾವು ಸ್ಪಷ್ಟ ಕಲ್ಪನೆಯೊಂದಿಗೆ ಯೋಜನೆ ರೂಪಿಸಿದರೆ ಸಂಘಕ್ಕೆ ಸಂಪನ್ಮೂಲ ಕ್ರೋಡಿಕರಣಕ್ಕೆದಾರಿ ಯನ್ನು ಮಾಡಿಕೊಳ್ಳಬಹುದು ,ಅಲ್ಲದೆ ಪ್ರದರ್ಶನಕಾರರ ವಿಶ್ವಾಸಾರ್ಹತೆಯನ್ನು ಪ್ರದರ್ಶಿಸಲು ಮತ್ತು ಪ್ರಚಾರ ಪಡೆಯಲು ಕಾರಣವಾಗುತ್ತದೆ .ನಮ್ಮ ಬಂಟರ ಸಂಘದ ಮಹಿಳಾ ವಿಬಾಗವರು ಆಯೋಜಿಸಿರುವ ಈ ಪ್ರದರ್ಶನದಲ್ಲಿ ಉತ್ತಮ ಗುಣ ಮಟ್ಟದ ಸೀರೆಗಳು ನಮಗೆ ಒಂದೇ ಕಡೆ ಸಿಗುವಂಥಹ ಅವಕಾಶವನ್ನು ಕೌಶಿಕಿ ಸಿಲ್ಕ್ ನವರು ಮಾಡಿ ಕೊಟ್ಟಿದ್ದಾರೆ. ಇದರಲ್ಲಿ ಎಲ್ಲರೂ ಬಾಗಿಗಳಾಗಬೇಕು . ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಮಹಿಳಾ ವಿಭಾಗದವರು ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಶುಭವನ್ನು ಕೋರುತ್ತೇನೆ ಹಾಗೂ ಪ್ರದರ್ಶನ ಮತ್ತು ಮಾರಾಟ ಯಶಸ್ವಿಯಾಗಲಿ ಎಂದು ಶುಭ ಹಾರೈಸುತ್ತೇನೆ, ಶರನ್ನವರಾತ್ರಿಯ ಶುಭಾಶಯಗಳು ಮತ್ತು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕೃಪಾಶೀರ್ವಾದ ಸರ್ವರಿಗೂ ಲಬಿಸಲಿ ಎಂದು ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ನುಡಿದರು.
ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ಮಹಿಳಾ ವಿಭಾಗದ ವತಿಯಿಂದ ಕೌಶಿಕಿ ಸಿಲ್ಕ್ ಮೀರಾ ರೋಡ್ ಇವರ ಸಹಬಾಗಿತ್ವದಲ್ಲಿ ಸೀರೆಗಳ ಭವ್ಯ ಪ್ರದರ್ಶನ ಮತ್ತು ಮಾರಟವು ಅ 15ರಂದು ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಓಣಿ ಮಜಲು ಜಗನ್ನಾಥ್ ಶೆಟ್ಟಿ ಮಿನಿ ಹಾಲ್ ನಲ್ಲಿ ಜರಗಿತು .
ಈ ಸೀರೆಗಳ ಪ್ರದರ್ಶನ ಮತ್ತು ಮಾರಟದ ಕಾರ್ಯಕ್ರಮವನ್ನು ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ಮತ್ತು ಮಹಿಳಾ ವಿಬಾಗದ ಅಧ್ಯಕ್ಷೆ ಜ್ಯೋತಿ ವಿ .ಶೆಟ್ಟಿ ಮತ್ತು ಸಮಿತಿ ಸದಸ್ಯ ಸದಸ್ಯೆಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಘದ ಪ್ರ .ಕಾರ್ಯದರ್ಶಿ ಅರುಣ್ ಶೆಟ್ಟಿ ,ಮಹಿಳಾ ವಿಬಾಗದ ಮಾಜಿ ಅಧ್ಯಕ್ಷೆಯರುಗಳಾದ ಜಯಲಕ್ಷ್ಮಿ ಪಿ .ಶೆಟ್ಟಿ , ಸುಪ್ರಿಯಾ ಜೆ .ಶೆಟ್ಟಿ, ಮಹಿಳಾ ಸಮಿತಿಯ ಪ್ರಮುಖರಾದ ಉಪಾಧ್ಯಕ್ಷೆ ಸುನಿತಾ ಜಿ .ಶೆಟ್ಟಿ , ಕೋಶಾಧಿಕಾರಿ ಸ್ಮಿತಾ ಎಂ .ಹೆಗ್ಡೆ, ಸಾಂಸ್ಕ್ರತಿಕ ಸಮಿತಿಯ ಕಾರ್ಯಾಧ್ಯಕ್ಷೆ ದೀಪಾ ಪಿ .ಶೆಟ್ಟಿ, ಕ್ರೀಡಾ ಕಾರ್ಯಾಧ್ಯಕ್ಷೆ ದಿವ್ಯ ವೈ .ಶೆಟ್ಟಿ ಲೋನಾವಾಲ .ಮತ್ತು ಮಹಿಳಾ ವಿಬಾಗದ ಸದಸ್ಯರು ಉಪಸ್ಥಿತರಿದರು. ಹಾಗೂ ಕೌಶಿಕಿ ಸಿಲ್ಕ್ ನ ಪ್ರಮುಖರಾದ ಕಿಶೋರ್ ಶೆಟ್ಟಿ ಕುತ್ಯಾರ್ ,ಅಮಿತಾ ಕೆ .ಶೆಟ್ಟಿ ,ಪ್ರಸನ್ನ ಪಿ .ಶೆಟ್ಟಿ ,ನಯನ ಅರ್.ಶೆಟ್ಟಿ ,ರತ್ನಾಕರ್ ಶೆಟ್ಟಿ ಯವರು ಉಪಸ್ಥಿತರಿದ್ದರು, ಕೌಶಿಕಿ ಸಿಲ್ಕ್ ವತಿಯಿಂದ ಕಿಶೋರ್ ಶೆಟ್ಟಿ ಕುತ್ಯಾರ್ ರವರು ರಾಕೇಶ್ ಶೆಟ್ಟಿ, ಜ್ಯೋತಿ ವಿ .ಶೆಟ್ಟಿ ಮತ್ತು ಸಮಿತಿಯ ಪ್ರಮುಖರನ್ನು ಶಾಲು ಹೊದಿಸಿ ಗೌರವಿಸಿದರು .
ತುಳು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿರುವ ಕೌಶಿಕಿ ಸಿಲ್ಕ್ಸ್ ಉನ್ನತ ದರ್ಜೆಯ ಸೀರೆಗಳ ಮಳಿಗೆಯನ್ನು ಹೊಂದಿದ್ದು ಮುಂಬಯಿ, ಪುಣೆ ಮತ್ತು ಇತರೆ ಕಡೆಗಳಲ್ಲಿ ಪ್ರದರ್ಶನ ಮತ್ತು ಮಾರಾಟದಿಂದ ಹೆಸರು ಗಳಿಸಿದ್ದು, ಉತ್ತಮ ಗುಣ ಮಟ್ಟದ ರಿಯಾಯಿತಿ ದರದಲ್ಲಿ ನೀಡಿ ಪ್ರಶಂಸೆಗೆ ಪಾತ್ರವಾಗಿದೆ, ಇಂದಿನ ಈ ಪ್ರದರ್ಶನದಲ್ಲಿ ಪಿಂಪ್ರಿ ಚಿಂಚ್ವಾಡ್ ,ಪುಣೆಯ ವಿವಿದ ಸಂಘ ಸಂಸ್ಥೆಗಳ ಪ್ರಮುಖರು ಮತ್ತು ಹೆಚ್ಚಿನ ಮಹಿಳೆಯರು ಪಾಲ್ಗೊಂಡರು.
ನಮ್ಮ ಸಂಘದ ಮಹಿಳಾ ವಿಬಾಗದ ವತಿಯಿಂದ ವರ್ಷಂಪ್ರತಿ ಹಲವಾರು ಕಾರ್ಯಕ್ರಮಗಳು ನಡೆಯುತಿದ್ದು ,ಈ ಬಾರಿ ನವರಾತ್ರಿಯ ಶುಭ ಸಂದರ್ಭದಲ್ಲಿ ಮೊದಲ ದಿನವೇ ಈ ಸೀರೆಗಳ ಪ್ರದರ್ಶನ ಮತ್ತು ಮಾರಾಟದ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ,ಪುಣೆ, ಪಿಂಪ್ರಿ -ಚಿಂಚ್ವಾಡ್ ನ ತುಳು ಕನ್ನಡಿಗ ಎಲ್ಲಾ ಮಹಿಳೆಯರನ್ನು ನಾವು ಆಹ್ವಾನಿಸಿದ್ದೇವೆ ,ಎಲ್ಲರೂ ಒಂದಡೆ ಸೆರಿಕೊಂಡರೆ ನಾವು ಮಾಡುವ ಇಂತಹ ಕಾರ್ಯಗಳಿಂದ ಸಂತೋಷ ಸಿಗುತ್ತದೆ , ಸಮಾಜವನ್ನು, ಜನತೆಯನ್ನು ಒಗ್ಗೂಡಿಸುವ ಕಾರ್ಯವು ಆಗುತ್ತದೆ , ಈ ನವರಾತ್ರಿಯ ಶುಭ ಸಂದರ್ಭದಲ್ಲಿ ಎಲ್ಲಾರಿಗೂ ಜಗನ್ಮಾತೆ ಶ್ರೀ ಕಟೀಲು ದುರ್ಗಪರಮೇಶ್ವರಿ ದೇವಿ ಸನ್ಮಂಗಲವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ -ಶ್ರೀಮತಿ ಜ್ಯೋತಿ ವಿ .ಶೆಟ್ಟಿ -ಅಧ್ಯಕ್ಷೆ ಮಹಿಳಾ ವಿಬಾಗ ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ .
ವರದಿ- ಹರೀಶ್ ಮೂಡಬಿದ್ರಿ ,ಪುಣೆ