ಯುವ ಬಂಟರ ಸಂಘ (ರಿ.) ಕಂಬಳಕಟ್ಟ – ಕೊಡವೂರು ಆಯೋಜಿಸಿದ್ದ ಆಟಿ…ಒಂಜಿ ನೆಂಪು – ವನಸ್ ತಿನಸ್ ಪಿರಾಕುದ ಗೊಬ್ಬುಲು ಕಾರ್ಯಕ್ರಮವು ದಿನಾಂಕ 13.08.2023 ರವಿವಾರ ಕಂಬಳಕಟ್ಟ ಕಂಬಳಮನೆ ಹಾಗೂ ತೆಂಕುಮನೆ ವಠಾರದಲ್ಲಿ ನಡೆಯಿತು. ಉಡುಪಿಯ ಮಾನ್ಯ ಶಾಸಕರಾದ ಶ್ರೀ ಯಶಪಾಲ್ ಎ. ಸುವರ್ಣ ಇವರು ಲಗೋರಿ ಆಟ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಶ್ರೀಮತಿ ವಂದನಾ ರೈ ಕಾರ್ಕಳ ಇವರು ಚೆನ್ನಮಣೆ ಆಟವನ್ನು ಸಾಂಕೇತಿಕವಾಗಿ ಆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತೆಂಕುಮನೆ ದಿವಂಗತ ಗೋಪಾಲ ಶೆಟ್ಟಿ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳೊಬ್ಬರಾದ ವಂದನಾ ರೈ ಮಾತಾನಾಡಿ ಇಂದಿನ ಮಕ್ಕಳು ಈಗಿನ ಈ ಆಚರಣೆಗಳನ್ನು ಇತರೆ ಹಬ್ಬಗಳಂತೆ ಇದೂ ಒಂದು ಎಂದು ತಿಳಿದಿದ್ದು, ನಮ್ಮ ಹಿರಿಯರು ಆ ಕಾಲದಲ್ಲಿ ಅನುಭವಿಸಿದ ಕಷ್ಟಗಳು, ನಡೆದು ಬಂದ ಹಾದಿ, ಆಟಿ ತಿಂಗಳ ಮಹತ್ವದ ಬಗ್ಗೆ ನಮ್ಮ ಈಗಿನ ಮಕ್ಕಳಿಗೆ ನಾವು ಅರಿವು ಮೂಡಿಸಿದಲ್ಲಿ ಖಂಡಿತವಾಗಿಯೂ ಯಾವುದೇ ಮಕ್ಕಳು ಅವರ ಜೀವನದಲ್ಲಿ ಹಾದಿ ತಪ್ಪುವುದಿಲ್ಲ ಎಂದು ನುಡಿದರು. ಅವರ ಮಾತೃಶ್ರೀಯವರಾದ ಶ್ರೀಮತಿ ವನಜ ಶೆಟ್ಟಿಯವರು ಸುಶ್ರಾವ್ಯವಾಗಿ ಹಿಂದಿನ ಕಾಲದ ಜನಪದ ಪಾಡ್ದನ ಹಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಯಶಪಾಲ್ ಸುವರ್ಣರವರು ಅರ್ಹ ಫಲಾನುಭವಿಗೆ ಅರ್ಥಿಕ ಸಹಾಯಧನ ವಿತರಿಸಿದರು. ಸಂಘದ ಅದ್ಯಕ್ಷರಾದ ಶ್ರೀ ಶಿವಪ್ರಸಾದ್ ಶೆಟ್ಟಿ ಅದ್ಯಕ್ಷತೆ ವಹಿಸಿದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಸುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ಯಶಪಾಲ್ ಸುವರ್ಣ ಹಾಗೂ ಶ್ರೀಮತಿ ವಂದನಾ ರೈ ಇವರುಗಳಿಗೆ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ವಿವಿಧ ಗ್ರಾಮೀಣ ಕ್ರೀಡೆಗಳನ್ನು ಮಕ್ಕಳು, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಏರ್ಪಡಿಸಲಾಗಿತ್ತು. ಬಂಟ ಮಹಿಳೆಯರು ಸಿದ್ದಪಡಿಸಿದ 35ಕ್ಕೂ ಹೆಚ್ಚು ಆಟಿ ಖಾದ್ಯಗಳನ್ನು ಸುಮಾರು 400 ಕ್ಕೂ ಮಿಕ್ಕಿ ಸಮಾಜ ಭಾಂದವರಿಗೆ ಉಣ ಬಡಿಸಲಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರುಗಳಾದ ಶ್ರೀ ಸಂತೋಷ್ ಶೆಟ್ಟಿ ಪಂಚರತ್ನ, ಸುರೇಶ್ ಶೆಟ್ಟಿ ಕಂಬಳಕಟ್ಟ, ಸ್ಮಿತಾ ವಿದ್ಯಾಧರ ಶೆಟ್ಟಿ ಗರ್ಡೆ, ಹಿರಿಯರಾದ ಜಗನ್ನಾಥ ಶೆಟ್ಟಿ ದೊಡ್ಡಮನೆ, ರಾಜು ಶೆಟ್ಟಿ ಜನ್ನಿಬೆಟ್ಟು, ಬಂಟರ ಸಂಘ ಪುತ್ತೂರು ಅಧ್ಯಕ್ಷ ಶ್ರೀ ಪಿ. ಶಂಕರ್ ಶೆಟ್ಟಿ, ಬಂಟರ ಸಂಘ ಕುಕ್ಕೆಹಳ್ಳಿ ಅಧ್ಯಕ್ಷ ಪ್ರಸಾದ್ ಹೆಗ್ಡೆ, ತೋನ್ಸೆ ವಲಯ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಶ್ರೀ ಮನೋಹರ ಶೆಟ್ಟಿ ತೋನ್ಸೆ, ಬಂಟರ ಸಂಘ ಉಪ್ಪೂರು ಅಧ್ಯಕ್ಷ ಡಾ. ಪ್ರಶಾಂತ್ ಶೆಟ್ಟಿ, ಬಂಟರ ಸಂಘ ನಿಟ್ಟೂರು ಅಧ್ಯಕ್ಷ ಮಹಾಬಲ ಶೆಟ್ಟಿ, ಅರುಣ್ ಶೆಟ್ಟಿ ಗಂಗೋತ್ರಿ, ಮೋಹನ್ ಶೆಟ್ಟಿ ಮೂಡನಿಡಂಬೂರು, ಅರುಣ್ ಕುಮಾರ್ ಶೆಟ್ಟಿ ಡಯಾನಾ ಡಾಲ್, ಪಾಂಡು ಶೆಟ್ಟಿ ಪಂದುಬೆಟ್ಟು, ರಮೇಶ್ ಶೆಟ್ಟಿ ಜಾರ್ಕಳ, ಸುನಿಲ್ ಶೆಟ್ಟಿ ಬರೋಡ, ಕಾರ್ಯದರ್ಶಿ ಶ್ರೀ ಪುಷ್ಪರಾಜ್ ಶೆಟ್ಟಿ, ಖಜಾಂಚಿ ರಮೇಶ್ ಶೆಟ್ಟಿ ಮೂಡುಬೆಟ್ಟು, ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿ, ಗೌರವಾಧ್ಯಕ್ಷ ಶ್ರೀ ಸುರೇಶ್ ಶೆಟ್ಟಿ ಕಂಬಳಕಟ್ಟ ಧನ್ಯವಾದ ಸಮರ್ಪಿಸಿದರು. ಶ್ರೀ ಅಮೃತ್ ಶೆಟ್ಟಿ ಕಂಬಳಕಟ್ಟ ಕಾರ್ಯಕ್ರಮ ನಿರೂಪಿಸಿದರು.