ಬಿಗ್ ಬಾಸ್ ರೂಪೇಶ್ ಶೆಟ್ಟಿ ನಟನೆ, ನಿರ್ದೇಶನದ “ಸರ್ಕಸ್” ತುಳು ಚಿತ್ರ ಗೋವಾದ ಪಣಜಿಯಲ್ಲಿರುವ ಐನೋಕ್ಸ್ ಚಿತ್ರಮಂದಿರದಲ್ಲಿ ಸಂಜೆ 3.30 ಕ್ಕೆ ಗೋವಾದ ಪ್ರಸಿದ್ಧ ಉದ್ಯಮಿ, ಸಮಾಜಸೇವಕ, ಗೋವಾ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಮುರಳಿ ಮೋಹನ್ ಶೆಟ್ಟಿಯವರ ಸಾರಥ್ಯದಲ್ಲಿ ಬಿಡುಗಡೆಗೊಳ್ಳಲಿದೆ.
“ಸರ್ಕಸ್” ತುಳು ಚಿತ್ರ ನಿರ್ದೇಶಕ, ನಟ ರೂಪೇಶ್ ಶೆಟ್ಟಿ ಅವರು, “ತುಳು ಸಿನಿಮಾಕ್ಕೆ ಸಣ್ಣ ಮಾರುಕಟ್ಟೆ ಇದ್ದರೂ ಇಷ್ಟು ದೊಡ್ಡ ರೀತಿಯಲ್ಲಿ ಸಿನಿಮಾ ಯಶಸ್ವಿಗೊಳಿಸಿರುವುದು ಖುಷಿಯ ವಿಚಾರ. ತುಳು ಚಿತ್ರರಂಗಕ್ಕೆ ಕೆ.ಎನ್. ಟೇಲರ್ ಅವರಂತಹ ಹಿರಿಯರಿಂದ ಇಂದಿನ ಯುವ ಕಲಾವಿದರ ತನಕ ನೂರಾರು ಮಂದಿ ದುಡಿದಿದ್ದಾರೆ. ಸರ್ಕಸ್ ಚಿತ್ರಕ್ಕೆ ಶೂಲಿನ್ ಫಿಲಂಸ್, ಮುಗ್ರೋಡಿ ಫಿಲಂಸ್, ಮಂಜುನಾಥ ಅತ್ತಾವರ ಬಂಡವಾಳ ಹೂಡಿದ್ದಾರೆ.
ರೂಪೇಶ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಸಾಯಿಕೃಷ್ಣ ಕುಡ್ಲ, ರಚನಾ ರೈ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಚಂದ್ರಹಾಸ ಉಳ್ಳಾಲ, ಪಂಚಮಿ ಭೋಜರಾಜ್, ರೂಪ ವರ್ಕಾಡಿ, ಪ್ರದೀಪ್ ಆಳ್ವ ಕದ್ರಿ, ನಿತೇಶ್ ಶೆಟ್ಟಿ ಎಕ್ಕಾರ್ ಅಭಿನಯಿಸಿದ್ದಾರೆ.
ಕನ್ನಡದ ಖ್ಯಾತ ಗಾಯಕ ಚಂದನ್ ಶೆಟ್ಟಿ ಹಾಡಿರುವ ಟೈಟಲ್ ಹಾಡಿಗೆ ಲೋಯ್ ವಾಲೆಂಟೈನ್ ಸಲ್ದಾನ ಇವರ ಸಂಗೀತವಿದೆ. ನವೀನ್ ಶೆಟ್ಟಿ ನೃತ್ಯ ಸಂಯೋಜನೆ ಮಾಡಿದ್ದಾರೆ. ರೂಪೇಶ್ ಶೆಟ್ಟಿ ಸಾಹಿತ್ಯ ಬರೆದಿದ್ದಾರೆ. “ಗಿರಿಗಿಟ್” ಖ್ಯಾತಿಯ ಪ್ರಸನ್ನ ಶೆಟ್ಟಿ ಬೈಲೂರು ಸಂಭಾಷಣೆ ಬರೆದಿದ್ದಾರೆ. ನವೀನ್ ಶೆಟ್ಟಿ ನೃತ್ಯ ಸಂಯೋಜನೆ, ನಿರಂಜನ್ ದಾಸ್ ಕ್ಯಾಮರಾ, ರಾಹುಲ್ ವಸಿಷ್ಠ ಸಂಕಲನದ ಜವಾಬ್ದಾರಿ ವಹಿಸಿದ್ದಾರೆ.
ಗೋವಾದಲ್ಲಿರುವ ನಮ್ಮ ಸಮಾಜ ಬಾಂಧವರು ಸರ್ಕಸ್ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕಾಗಿ ಮುರಳಿಮೋಹನ್ ಶೆಟ್ಟಿ ಹಾಗೂ ಸಂಘಟಕರು ವಿನಂತಿಸಿಕೊಂಡಿದ್ದಾರೆ. ಟಿಕೆಟ್ ಕಾಯ್ದಿರಿಸಲು ಯುವ ಉದ್ಯಮಿ ಕರುಣಾಕರ್ ಶೆಟ್ಟಿ 9765006767 ಹಾಗೂ ನವೀನ್ ಶೆಟ್ಟಿಯವರನ್ನು 8050479419 ಈ ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.