ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಕುಂತಳನಗರದಲ್ಲಿರುವ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಎಂಆರ್ ಜಿ ಗ್ರೂಪ್ ನ ಪ್ರಾಯೋಜಕತ್ವದಲ್ಲಿ ಬೃಹತ್ ಉದ್ಯೋಗ ಮೇಳವು ನ. 18 ಮತ್ತು ನ. 19 ರಂದು ನಡೆಯಲಿದೆ.
ಉದ್ಯೋಗ ಮೇಳದಲ್ಲಿ 25 ಕಂಪನಿಗಳು ಸುಮಾರು 1500 ಕ್ಕಿಂತಲೂ ಹೆಚ್ಚು ಹುದ್ದೆಗಳಿಗೆ ಸಂದರ್ಶನಕ್ಕೆಅವಕಾಶ ಕೊಡಲಿದೆ. ಇಂಜಿನಿಯರ್, ಡಿಪ್ಲೊಮೋ, ಐ. ಟಿ. ಐ. ಮ್ಯಾನೇಜ್ಮೆಂಟ್ ಸ್ಟಡೀಸ್ ಮಾಡಿದವರಿಗೆ, ಎಚ್ ಆರ್, ಅಕೌಂಟ್ಸ್, ಫೈನಾನ್ಸ್, ಐಟಿ, ಸೇಲ್ಸ್, ಮಾರ್ಕೆಟಿಂಗ್, ಹಾಸ್ಪಿಟಾಲಿಟಿ ಇಂಡಸ್ಟ್ರಿ ಮತ್ತು ಇತರ ಹುದ್ದೆ ಸಿಗುವ ಅವಕಾಶಗಳಿವೆ. ಕಳೆದ ಸಾಲಿನಲ್ಲಿ ನಡೆಸಿದ ಉದ್ಯೋಗ ಮೇಳದಲ್ಲಿ 450 ಕ್ಕಿಂತಲೂ ಅಧಿಕ ಯುವಕರು, ಮಹಿಳೆಯರಿಗೆ ಬೃಹತ್ ಕಂಪನಿಗಳಲ್ಲಿ ಉದ್ಯೋಗ ಲಭಿಸಿರುವುದು ಗಮನಾರ್ಹವಾಗಿದೆ.
ಪಡುಬಿದ್ರಿ ಆಸ್ಪೆನ್ ಸೆಜ್ ನಲ್ಲಿರುವ ಪ್ರಜ್ ಜನಕ್ಸ್ ಲಿ, ಸುಜ್ಲಾನ್ ಎನರ್ಜಿ ಲಿ, ಉಡುಪಿ ಕೋಚಿನ್ ಶಿಪ್ ಯಾರ್ಡ್ ಲಿ, ಅಮೆಜಾನ್ ಲಿ, ಮಣಿಪಾಲ ಲಿ, ರಿಲಯನ್ಸ್ ಜಿಓ, ಕಾಂಚನ ಗ್ರೂಪ್ ಆಫ್ ಕಂಪೆನಿ, ಜೈ ಹಿಂದ್ ಗ್ರೂಪ್, ಎಂ. ಕೆ. ಆಗ್ರೋ ಟೆಕ್, ಬೆಲ್ ಓ ಸಿಲ್ ಮುಂತಾದ ಒಟ್ಟು 25 ಬೃಹತ್ ಕಂಪನಿಗಳು 2 ದಿನ ಸಂದರ್ಶನ ನಡೆಸಲಿದೆ. ಸುಮಾರು 2500 ಅಭ್ಯರ್ಥಿಗಳು ಸಂದರ್ಶನಕ್ಕೆ ಬರುವ ನಿರೀಕ್ಷೆ ಇದ್ದು ಅಂತಿಮ ವರ್ಷದ ಇಂಜಿನಿಯರಿಂಗ್, ಇತರ ಡಿಗ್ರಿ ಕಾಲೇಜು ವಿದ್ಯಾರ್ಥಿಗಳಿಗೆ ಸಂದರ್ಶನಕ್ಕೆ ಅವಕಾಶ ನೀಡಲಾಗುವುದು.
ಉದ್ಯೋಗ ಮೇಳ ಕಾರ್ಯಕ್ರಮದ ನಿರ್ದೇಶಕರಾಗಿ ನಿಟ್ಟೆ ಜಸ್ಟಿಸ್ ಕೆ.ಎಸ್. ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಪ್ಲೇಸ್ಮೆಂಟ್ ಮತ್ತು ಅಡ್ಮಿಶನ್ ನ ಮುಖ್ಯಸ್ಥರು ಮತ್ತು ಜಾಬ್ ಫೇರ್ ನ ಚೇರ್ಮನ್ ಗುರು ಪ್ರಕಾಶ್ ಭಟ್, ವಿಸಿಟಿಂಗ್ ಪ್ರೊ. ದಿವ್ಯಾರಾಣಿ ಪ್ರದೀಪ್ ಕಾರ್ಯನಿರ್ವಹಿಸಲಿದ್ದಾರೆ. ಉದ್ಯೋಗ ಮೇಳದ ಸದುಪಯೋಗ ಪಡಿಸಿಕೊಳ್ಳುವಂತೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ಉದ್ಯೋಗ ಮೇಳದ ಮುಖ್ಯಸ್ಥರು, ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ ಟ್ರಸ್ಟಿಗಳಾದ ವಿಜಿತ್ ಶೆಟ್ಟಿ, ಪದ್ಮನಾಭ ಹೆಗ್ಡೆ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.