ಉಡುಪಿ ಸಮೀಪದ ಕಾಪು ಹೊಸ ಮಾರಿಗುಡಿಯ ಅಭಿವೃದ್ಧಿ ಕಾರ್ಯ ಭರಪೂರವಾಗಿ ನಡೆಯುತ್ತಿದ್ದು ಇದರ ಯಶಸ್ವಿಗಾಗಿ ಅಂತರಾಷ್ಟ್ರೀಯ ಘಟಕವನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಬೋಸ್ಟನ್ನಲ್ಲಿ ಉದ್ಘಾಟಿಸಲಾಯಿತು. ದೇವಾಲಯಗಳ ನಾಡು ‘ತುಳುನಾಡ್’ ತನ್ನ ಕಿರೀಟಕ್ಕೆ ಮತ್ತೊಂದು ಸೇರ್ಪಡೆಯಾಗಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಜೀರ್ಣೋದ್ದಾರವಾಗುತ್ತಿದ್ದು ಹದಿನೇಳನೇ ಶತಮಾನದ ಕೆಳದಿ ಅರಸರ ಕಾಲದ ಬೇರುಗಳನ್ನು ಹೊಂದಿರುವ ಐತಿಹಾಸಿಕ ದೇವಾಲಯವನ್ನು ಭರಪೂರವಾಗಿ ನವೀಕರಿಸಲಾಗುತ್ತಿದೆ. ದೇವಿಯ ಭಕ್ತರು ಪ್ರಪಂಚದಾದ್ಯಂತ ಹರಡಿಕೊಂಡಿದ್ದಾರೆ ಮತ್ತು ಹೊಯ್ಸಳ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗುತ್ತಿರುವ ದೇವಾಲಯದ ಜೀರ್ಣೋದ್ಧಾರಕ್ಕೆ ಸಹಾಯ ಮಾಡಲು 18 ಕ್ಕೂ ಹೆಚ್ಚು ದೇಶಗಳಲ್ಲಿ ಸಮಿತಿಗಳನ್ನು ರಚಿಸಲಾಗಿದೆ.
ಒಂಬತ್ತು ಸದಸ್ಯರ ಯು ಎಸ್ ಎ ಸಮಿತಿಯನ್ನು ಶ್ರೀ ಭಾಸ್ಕರ್ ಶೇರಿಗಾರ್ ದೀಪ ಬೆಳಗಿಸುವ ಮೂಲಕ ಧಾರ್ಮಿಕ ಸಮಾರಂಭದಲ್ಲಿ ಉದ್ಘಾಟಿಸಿದರು. ಶೈಲಶ್ರೀ ಶೇರಿಗಾರ್, ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀ ವಾಸುದೇವ ಶೆಟ್ಟಿ, ಅಮೇರಿಕಾ ಸಮಿತಿಯ ಸದಸ್ಯರಾದ ಶ್ರೀ ಶರತ್ ಅಮೀನ್ ಮತ್ತು ಬೋಸ್ಟನ್ ತುಳುಕೂಟದ ಸಂಸ್ಥಾಪಕ ಅಧ್ಯಕ್ಷರು, ಬೋಸ್ಟನ್ ಕನ್ನಡ ಕೂಟದ ಮಾಜಿ ಅಧ್ಯಕ್ಷರಾದ ಡಾ. ಸುಧಾಕರ ರಾವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಯುಎಇಯಿಂದ ಎನ್ಆರ್ಐ ಸಮಿತಿಯ ಅಧ್ಯಕ್ಷ ಶ್ರೀ ಸರ್ವೋತ್ತಮ ಶೆಟ್ಟಿ, ಯುಎಇಯಿಂದ ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿ ಮತ್ತು ಇತರ ಅಂತರರಾಷ್ಟ್ರೀಯ ಸಮಿತಿಗಳ ಅಧ್ಯಕ್ಷರುಗಳು ಗೂಗಲ್ ಮೀಟ್ ನ ಮೂಲಕ ಮಾರ್ಗದರ್ಶನ ನೀಡಿದರು. ಯು ಎಸ್ ಎ ಸಮಿತಿಯ ಇತರ ಸದಸ್ಯರಲ್ಲಿ ಅಟ್ಲಾಂಟಾದ ಬಾನಾ ಮಾಜಿ ಅಧ್ಯಕ್ಷ ಶ್ರೀ ಶಿರೀಶ್ ಶೆಟ್ಟಿ, ಟೆಕ್ ಉದ್ಯಮಿ – ಡಿಜಿಟಲ್ ಕ್ಯೂಬ್ಸ್ನ ಸ್ಥಾಪಕ ಮತ್ತು ಸಿಇಒ – ಮಿಚಿಗನ್ನ ಶ್ರೀ ಸಂತೋಷ್ ಉಡುಪಿ, ನ್ಯೂಯಾರ್ಕ್ನ ಶ್ರೀ ರಾಮದಾಸ್ ಕುಲಾಲ್, AATA ದ ಹೊಸ ಅಧ್ಯಕ್ಷರು – ಫ್ಲೋರಿಡಾದ ಶ್ರೀವಲ್ಲಿ ರೈ, ಟೆಕ್ಸಾಸ್ನ ಸಿದ್ಧಾರ್ಥ್ ಶೆಟ್ಟಿ, ಸುಷ್ಮಾ ಜಯಚಂದ್ರ ಮತ್ತು ಉತ್ತರ ಕೆರೊಲಿನಾದ ತುಳುವೆರೆ ಚಾವಡಿಯ ಸಂಸ್ಥಾಪಕ ಉಮೇಶ್ ಅಸೈಗೋಳಿ ಕೂಡ ಉದ್ಘಾಟನಾ ಸಮಾರಂಭದಲ್ಲಿ ವೆಬ್ ಪೋರ್ಟಲ್ ಸಭೆಯಲ್ಲಿ ಭಾಗವಹಿಸಿದ್ದರು.
ಶೈಲಶ್ರೀ ಶೇರಿಗಾರ್ ಸ್ವಾಗತಿಸಿದರು. ಡಾ. ಸುಧಾಕರ್ ರಾವ್ ಅವರು ಪ್ತಸ್ತಾವಿಸಿದರು. ಉದ್ಘಾಟನೆಯ ಅಂಗವಾಗಿ ‘ನವದುರ್ಗೆಯರ ಪ್ರತೀತಿಯಾಗಿ ಒಂಬತ್ತು ಸುಮಂಗಲಿಯರಾದ ಪೂಜಾ ಶೆಟ್ಟಿ, ಡಾ.ಉಷಾರಾವ್, ರಮ್ಯಾ ಜೈನ್, ಲಕ್ಷ್ಮೀ ಪುರಾಣಿಕ್, ಮಧುಗೌಡ, ಚಂದ್ರಿಕಾ ರಾವ್, ಚಂದ್ರ ಬಿಸ್ವಾಸ್, ಶೈಲಶ್ರೀ ಶೇರಿಗಾರ್ ಮತ್ತು ಸೌಮ್ಯಾ ಕರುಣಾಕರ್ ಅವರು ಒಂಬತ್ತು ದೀಪಗಳನ್ನು ಬೆಳಗಿಸಿದರು. ಈ ಐತಿಹಾಸಿಕ ಕಾರ್ಯಕ್ರಮಕ್ಕಾಗಿ ಕೇಂದ್ರ ಸಮಿತಿ ಅಧ್ಯಕ್ಷ ಶ್ರೀ ವಾಸುದೇವ ಶೆಟ್ಟಿ ಮತ್ತು ಕುಟುಂಬದವರು ಭಾರತದಿಂದ ಬೋಸ್ಟನ್ಗೆ ಪ್ರಯಾಣ ಕೈಗೊಂಡಿದ್ದರು.
ಶ್ರೀ ವಾಸುದೇವ ಶೆಟ್ಟಿಯವರು ಉದ್ಘಾಟನಾ ಭಾಷಣದಲ್ಲಿ ದೇವಾಲಯದ ಸಂಕೀರ್ಣದ ಅಭಿವೃದ್ಧಿಯ ಇತಿಹಾಸ, ಕುತೂಹಲಕಾರಿ ಸಂಗತಿಗಳು, ಮಹತ್ವ, ಭವಿಷ್ಯದ ಯೋಜನೆಗಳನ್ನು ವಿವರಿಸಿದರು ಮತ್ತು ಇದಕ್ಕೆ ಸಹಸ್ರಮಾನದ ರೀತಿಯ ಅವಕಾಶವನ್ನು ಎಲ್ಲರೂ ಬೆಂಬಲಿಸಬೇಕೆಂದು ವಿನಂತಿಸಿದರು. ಯು ಎಸ್ ಎ ಸಮಿತಿಯ ಅಧ್ಯಕ್ಷ ಶ್ರೀ ಭಾಸ್ಕರ್ ಶೇರಿಗಾರ್ ಅವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಾದ್ಯಂತ ಸಂದೇಶವನ್ನು ಹರಡಲು ಮತ್ತು ಬೆಂಬಲಿಸುವ ಭರವಸೆ ನೀಡಿದರು. ಯು ಎಸ್ ಎ ಸಮಿತಿಯ ಎಲ್ಲಾ ಒಂಬತ್ತು ಸದಸ್ಯರು ತಮ್ಮನ್ನು ಪರಿಚಯಿಸಿಕೊಂಡರು ಮತ್ತು ಈ ಮಹಾನ್ ಪ್ರಯತ್ನದ ಭಾಗವಾಗಲು ಬದ್ಧರಾಗಿದ್ದಾರೆ. ಪ್ರತಿ ಕ್ಷಣವನ್ನು ಸೆರೆಹಿಡಿಯುವ ಮೂಲಕ ಶ್ರೀ ಅಶ್ವಿನ್ ಶೆಟ್ಟಿ, ಸ್ನೇಹಾ ಶೆಟ್ಟಿ ಮತ್ತು ಅಪೂರ್ವ ಸುರೇಶ್ ಅವರು ಉತ್ತಮ ಮಾಧ್ಯಮ ಪ್ರಸಾರ ಮಾಡಿದರು. ಸ್ವಯಂಸೇವಕರು ಮಧ್ಯಾಹ್ನದ ಊಟಕ್ಕೆ ಮನೆಯಲ್ಲಿ ತಯಾರಿಸಿದ ತುಳುನಾಡಿನ ಖಾದ್ಯಗಳು ಮತ್ತೊಂದು ವಿಶೇಷವಾಗಿತ್ತು. ಶಿರೀಶ್ ಶೆಟ್ಟಿ ವಂದಿಸಿದರು.
ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)