ಯು.ಎ.ಇ ಬಂಟ್ಸ್ ನ 46 ನೇ ವರ್ಷದ ಯು.ಎ.ಇ ಬಂಟೆರ್ನ ಕೂಡುಕಟ್ಟ್ ( Get Together) ಕಾರ್ಯಕ್ರಮವು ಎಪ್ರಿಲ್ 30 ರಂದು ಜರುಗಿತು. ಯು.ಎ.ಇ ದೇಶದ ಎಲ್ಲಾ ರಾಜ್ಯದಲ್ಲಿ ನೆಲೆಸಿರುವ ಸಾವಿರಾರು ಬಂಟ ಬಾಂದವರ ಸಮ್ಮುಖದಲ್ಲಿ ದುಬೈನ ದೇರಾದ ಬ್ರಿಸ್ಟೊಲ್ ಹೋಟೆಲ್ ಸಭಾಂಗಣದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಗಣ್ಯಾತಿ ಗಣ್ಯರನ್ನು ಆರತಿ ಎತ್ತಿ ತಿಲಕವನ್ನು ಹಚ್ಚಿ ಕೇರಳದ ಚೆಂಡೆಯ ವಾದನ, ಸುಮಂಗಲೆಯರು ಪೂರ್ಣ ಕುಂಭ ಕಲಶ ಸ್ವಾಗತದ ಮೆರವಣಿಗೆಯ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತ್ತು. ನಂತರ ಗಣ್ಯರು 46 ನೇ ವರ್ಷದ ಕೂಡುಕಟ್ಟ್ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಂಟ ಗೀತೆ ಹಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ರ ವರೆಗೆ ಯು.ಎ.ಇ ಬಂಟರ ಪ್ರತಿಭೆಗಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಬಂಟ ವಿಭೂಷಣ ಪ್ರಶಸ್ತಿ ಪ್ರದಾನ :
ವರ್ಷಂಪ್ರತಿ ಕೊಡಮಾಡುವ “ಬಂಟ ವಿಭೂಷಣ” ಪ್ರಶಸ್ತಿಯನ್ನು ಈ ವರ್ಷ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ರೂವಾರಿ ಡಾ.ಮೋಹನ್ ಆಳ್ವರವರಿಗೆ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ನಟ ನಿರ್ದೇಶಕ ಶಿವದ್ವಜ್ ಶೆಟ್ಟಿ, ಸಿಐಡಿ ಸ್ಟಾರ್ ಖ್ಯಾತಿಯ ದಯಾನಂದ ಶೆಟ್ಟಿ, ಹರೀಶ್ ಶೆಟ್ಟಿ ಮತ್ತು ಮುಂಬಯಿಯ ರಂಗಕರ್ಮಿ ನಿರೂಪಕರಾದ ಅಶೋಕ್ ಪಕ್ಕಳರವರನ್ನು ಗೌರವಿಸಲಾಯಿತು. ಕೊರೋನ ಕಾಲದಲ್ಲಿ ಕೊರೋನ ವಾರಿಯರ್ ಆಗಿ ಕೆಲಸ ಮಾಡಿ ಯು.ಎ.ಇ ಯ ತುಳು ಕನ್ನಡಿಗರಿಗೆ ಕೊರೋನದ ಬಗ್ಗೆ ದೈರ್ಯ ನೀಡುತ್ತಿದ್ದ ಡಾ.ಪುಷ್ಪರಾಜ್ ಶೆಟ್ಟಿ ದಂಪತಿಗಳನ್ನು ಮತ್ತು ಶ್ರೀಮತಿ ಡಾ. ಪೂರ್ಣಿಮಾ ದಂಪತಿಗಳನ್ನು ಕೂಡ ಅಭಿನಂದಿಸಲಾಯಿತು.
ಯು.ಎ.ಇ ಬಂಟ್ಸ್ ನ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಸನ್ಮಾನಿತರ ಕಿರು ಪರಿಚಯ ಮಾಡಿಕೊಟ್ಟರು. ಬಿ.ಕೆ.ಗಣೇಶ್ ರೈ ಸನ್ಮಾನ ಪತ್ರ ವಾಚಿಸಿದರು. ಯು.ಎ.ಇ ಬಂಟ್ಸ್ ನ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಕಾರ್ಯದರ್ಶಿ ದಿವೇಶ್ ಆಳ್ವ, ಯು.ಎ.ಇ ಬಂಟ್ಸ್ ನ ಪೋಷಕರು ಹಾಗೂ ಸಲಹಾ ಸಮಿತಿಯ ಸದಸ್ಯರಾದ ಗುಣಶೀಲ್ ಶೆಟ್ಟಿ, ಪ್ರೇಮ್ ನಾಥ್ ಶೆಟ್ಟಿ, ಸಂದೀಪ್ ರೈ ನಂಜೆ, ಸುಂದರ್ ಶೆಟ್ಟಿ ಅಬುಧಾಬಿ, ದಿನೇಶ್ ಶೆಟ್ಟಿ ಕೊಟ್ಟಿಂಜ, ಸಜನ್ ಶೆಟ್ಟಿ, ಜಯರಾಮ ರೈ ಅಬುಧಾಬಿ, ರಮಾನಂದ ಶೆಟ್ಟಿ, ರತ್ನಾಕರ ಶೆಟ್ಟಿ, ರವಿರಾಜ್ ಶೆಟ್ಟಿ ಮತ್ತು ಕಾರ್ಯಕ್ರಮದ ವ್ಯವಸ್ಥಾಪಕ ಸಮಿತಿಯ ಸದಸ್ಯ ಸದಸ್ಯೆಯರಾದ ಅಭಿನಂದನ್ ಮತ್ತು ಶ್ರೀಮತಿ ಶರಧಿ ಶೆಟ್ಟಿ, ಸುನಿಲ್ ಮತ್ತು ಶ್ರೀಮತಿ ಹರ್ಷ ಶೆಟ್ಟಿ, ಅತ್ಮ ಮತ್ತು ಶ್ರೀಮತಿ ತೃಪ್ತಿ ರೈ, ಜಯಾನಂದ ಮತ್ತು ಪ್ರಮೀತ ಶೆಟ್ಟಿ, ಸುಮೀತ್ ಮತ್ತು ಶ್ರೀಮತಿ ವಿನೀತ ಶೆಟ್ಟಿ, ಶೈಲೇಶ್ ಮತ್ತು ಶ್ರೀಮತಿ ಸುಷ್ಮ ಶೆಟ್ಟಿ, ಸಂದೀಪ್ ಮತ್ತು ಶ್ರೀಮತಿ ತೃಪ್ತಿ ರೈ ಉಪಸ್ಥಿತರಿದ್ದರು.
ಕುಟುಂಬ ನೃತ್ಯ ಸ್ಪರ್ಧೆಯ ವಿಜೇತರು
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಕರ್ಷಕ ನೃತ್ಯವಾದ ಕುಟುಂಬ ನೃತ್ಯ ಸ್ಪರ್ಧೆಯಲ್ಲಿ ಒಂಬತ್ತು ತಂಡಗಳು ಬಾಗವಹಿಸಿದ್ದು ಸ್ಪರ್ಧೆಯ ವಿಜೇತರಾಗಿ ಪ್ರಥಮ ನಿವೇದಿತಾ ಮತ್ತು ಇಶಾನ್ವಿ ಹೆಗ್ಡೆ, ದ್ವಿತೀಯ ಅಕ್ಷತ, ಅನ್ವಿ ಮತ್ತು ರವಿ ಶೆಟ್ಟಿ, ತೃತೀಯ ಸಮ್ಯಾಕ್ ಮತ್ತು ಸಮರ್ಥ ಸುರೇಶ್ ಶೆಟ್ಟಿ ಆಯ್ಕೆಯಾದರು. ಕಾರ್ಯಕ್ರಮದ ತೀರ್ಪುಗಾರರಾಗಿ ದಯಾ ಶೆಟ್ಟಿ, ಶ್ರೀಮತಿ ಶಮಾ ರಾಣಿ ಶೆಟ್ಟಿ, ನತಾಶ ಶೆಟ್ಟಿಯವರು ಸಹಕರಿಸಿದರು. ಸಂಗೀತ ಶೆಟ್ಟಿ ಮತ್ತು ತಂಡದವರಿಂದ ಸ್ವಾಗತ ಗೀತೆ, ಗೋಲ್ಡನ್ ಸ್ಟಾರ್ ಆಂಡ್ ಮ್ಯೂಸಿಕ್ ಫೈನ್ ಆರ್ಟ್ಸ್ ಶಾರ್ಜಾದವರಿಂದ ಸ್ವಾಗತ ನೃತ್ಯ, ದಿಶಾ ಶೆಟ್ಟಿಯವರಿಂದ ಭರತನಾಟ್ಯ, ಡಿವೈನ್ ಡ್ಯಾನ್ಸರ್ ಮುಸಾಷ, ಬಾಲಿವುಡ್ ಡ್ಯಾನ್ಸ್ ಡೀವಾಸ್ ದುಬೈ, ಸ್ಟಾರ್ ಸ್ಟೆಪ್ಪರ್ಸ್ ರಾದಿಕಲ್ ಡ್ಯಾನ್ಸ್ ದುಬೈ, ನೈನ್ ಜ್ಯವೆಲ್ಸ್ ರಾದಿಕಲ್ ಡ್ಯಾನ್ಸ್ ತಂಡದವರಿಂದ ಬಾಲಿವುಡ್ ಶೈಲಿಯ ನೃತ್ಯ, ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ ತಂಡದ ಮಕ್ಕಳಿಂದ ಯಕ್ಷಗಾನ ನಾಟ್ಯ ವೈಭವ, ಮೆಲೋಡಿ ಮೇಕರ್ಸ್ ದುಬೈ ತಂಡದವರಿಂದ ಸಂಗೀತ ರಸಮಂಜರಿ, ಡೆಜ್ಲಿಂಗ್ ದೀವಾಸ್ ಅಬುಧಾಬಿ ತಂಡದವರಿಂದ ಕ್ಲಾಸಿಕಲ್ ನೃತ್ಯ, ವೈಷ್ಣವಿ ಶೆಟ್ಟಿ ದುಬೈ ತಂಡದವರಿಂದ ಗ್ರೂಪ್ ಹಾಡು, ರೈಸಿಂಗ್ ಸ್ಟಾರ್ ಬಂಟ್ಸ್ ದುಬೈ ತಂಡದವರಿಂದ ಕರ್ನಾಟಕ ಕಲ್ಚರಲ್ ನೃತ್ಯ ಕಾರ್ಯಕ್ರಮ ಹಾಗೂ ಸಿ.ಐ.ಡಿ ಖ್ಯಾತಿಯ ದಯಾನಂದ ಶೆಟ್ಟಿ ಮತ್ತು ಹರೀಶ್ ಶೆಟ್ಟಿಯವರಿಂದ ಹಾಸ್ಯ ರಸದೌತನ ಜರಗಿತು.
ಮುಂಬಯಿಯ ಖ್ಯಾತ ನಿರೂಪಕರಾದ ಅಶೋಕ್ ಪಕ್ಕಳ, ಬಿ ಕೆ ಗಣೇಶ್ ರೈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟು, ಸರ್ವೋತ್ತಮ ಶೆಟ್ಟಿ ಧನ್ಯವಾದವಿತ್ತರು.
ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)