ಸಾಯಿ ಕ್ರಿಕೆಟರ್ಸ್ ಪುಣೆ, ವಾರಿಜ ಎ ಶೆಟ್ಟಿ ಸ್ಮರಣಾರ್ಥ ಸಾಯಿ ಟ್ರೋಪಿ ,ಮಹಾಗಣಪತಿ ಯಕ್ಷಗಾನ ಮಂಡಳಿ ವಿನ್ನರ್ಸ್
ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಪಾಲ್ಗೊಳ್ಳುವಿಕೆ ಮತ್ತು ಶಿಸ್ತು ಬದ್ದವಾದ ನಡವಳಿಕೆ ಮುಖ್ಯ –ಪ್ರವೀಣ್ ಶೆಟ್ಟಿ ಪುತ್ತೂರು
ಪುಣೆ ; ಇಂದಿನ ಜೀವನವೇ ಸ್ಪರ್ದಾತ್ಮಕವಾಗಿದೆ , ಜೀವನದ ನಿರ್ವಹಣೆಗೆ ಗಂಡು ಹೆಣ್ಣೆಂಬ ಬೇದವಿಲ್ಲದೆ ದುಡಿಯುವ ಜಂಜಾಟದಲ್ಲಿ ಮನಸ್ಸಿಗೆ ಸಮಾದಾನ ನೆಮ್ಮದಿಗೆ , ಮನೋರಂಜನಾ ಕಾರ್ಯಕ್ರಮಗಳು ,ಕ್ರಿಕೆಟ್ ಆಟೋಟಗಳು ,ಕ್ರೀಡೆಗಳು ತುಂಬಾ ಸಹಾಯಕವಾಗಬಲ್ಲದು ಇಂತಹ ಕ್ರೀಡೆಗಳಲ್ಲಿ ಭಾರತೀಯರಲ್ಲಿ ಅಚ್ಚು ಮೆಚ್ಚು ಎಂದರೆ ಕ್ರಿಕೆಟ್,. ನಮ್ಮ ಪುಣೆಯಂತಹ ಮಹಾನಗರದಲ್ಲಿ ನೆಲೆಸಿರುವ ತುಳು ಕನ್ನಡಿರಲ್ಲಿ ಕೂಡಾ ಹೆಚ್ಚಿನ ಯುವ ಜನತೆ ಕ್ರಿಕೆಟ್ ನಲ್ಲಿ ಬಾಗಿಗಳಾಗುತ್ತಾರೆ .ಪುಣೆಯಲ್ಲಿ ಜಾತಿ ಮತ ಬೇದ ಬಾವವಿಲ್ಲದೆ ಪ್ರತಿ ವರ್ಷವೂ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿ ಉತ್ತಮವಾಗಿ ನಡೆಸಿಕೊಂಡು ಬಂದಿರುವ ಸಾಯಿ ಕ್ರಿಕೆಟರ್ಸ್ ನವರು ಒಂದು ಸಂಸ್ಥೆಯಾಗಿ ದುಡಿಯುತಿದ್ದಾರೆ , ತುಳು ಕನ್ನಡಿಗ ಎಲ್ಲಾ ಕ್ರಿಕೆಟ್ ಆಟಗಾರರು , ಅಭಿಮಾನಿಗಳು ,ಆಸಕ್ತರನ್ನು ಒಂದೇ ಸೂರಿನಡಿ ಸೇರಿಸಿ ದೊಡ್ಡ ಮಟ್ಟದ ಟೂರ್ನ ಮೆಂಟ್ ನ್ನು ಆಯೋಜಿಸಿದ ಈ ಸಂದರ್ಭವನ್ನು ನೋಡಿ ದಾಗ ಮನಸ್ಸಿಗೆ ತುಂಬಾ ಅನಂದವಾಗುತ್ತದೆ. ಇಂತಹ ಕೂಟಗಳಿಂದ ನಮ್ಮಲ್ಲಿ ಒಳ್ಳೆಯ ಚುರುಕಿನ ಆಟಗಾರರು, ಪ್ರತಿಭಾಶಾಳಿಗಳು ಇದ್ದಾರೆ ಎಂಬುದು ತಿಳಿಯುತ್ತದೆ ,ಇಂತಹ ಪಂದ್ಯಾಟದಲ್ಲಿ ಸೋಲು ಗೆಲುವ ಮುಖ್ಯವಲ್ಲ ಶಿಸ್ತು ಬದ್ದವಾಗಿ, ನಡೆಸುವುದು ಮುಖ್ಯ .ವಸಂತ್ ಶೆಟ್ಟಿ ,ಪ್ರಶಾಂತ್ ಶೆಟ್ಟಿಯವರು ಈ ಕ್ರಿಕೆಟ್ ಆಯೋಜನೆಯನ್ನು ಮಾಡಿದ್ದಾರೆ ಅವರಿಗೆ ಮತ್ತು ಇಂದು ಭಾಗವಹಿಸಿದ ಎಲ್ಲಾ ತಂಡಗಳಿಗೆ ವಿಜೇತ ತಂಡಗಳಿಗೆ ಶುಭಹಾರೈಕೆಗಳು ಎಂದು ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿನುಡಿದರು .
ಪುಣೆಯ ಸಾಯಿ ಕ್ರಿಕೆಟರ್ಸ್ ನ ವತಿಯಿಂದ , ದಿ. ವಾರಿಜಾ ಆನಂದ್ ಶೆಟ್ಟಿ ಸ್ಮರಣಾರ್ಥ ಸಾಯಿ ಟ್ರೋಪಿ ಕ್ರಿಕೆಟ್ ಟೂರ್ನಮೆಂಟ್ ಎಪ್ರಿಲ್ 8 ರಂದು ಪುಣೆಯ ಪಾಷನ್ ನಲ್ಲಿರುವ ಏನ್ .ಸಿ .ಎಲ್ .ಗ್ರೌಂಡ್ ನಲ್ಲಿ .ನಡೆಯಿತು ,ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಅಗಮೀಸಿದ್ದ ಪುಣೆ ಬಂಟರ ಸಂಘ ದಕ್ಷಿಣ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಶೆಟ್ಟಿ ಯವರು ಕಾಯಿ ಒಡೆದು ಬ್ಯಾಟಿಂಗ್ ಮಾಡುವ ಮೂಲಕ ಟೂರ್ನಮೆಂಟನ್ನು ಉದ್ಘಾಟಿಸಿದರು.
ಸಂಜೆ ನಡೆದ ಪ್ರಶಸ್ತಿ ವಿತರಣಾ ಸಮಾರಂಭದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ,ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ ರವರು ಆಗಮಿಸಿದ್ದರು .ವೇದಿಕೆಯಲ್ಲಿ ನಿವೃತ್ತ ಕಸ್ಟಮ್ ಅಧಿಕಾರಿ ದನಂಜಯ ವೈದ್ಯ ,ಪುಣೆ ಬಿಲ್ಲವ ಸಂಘದ ಕಟ್ಟಡ ಸಮಿತಿಯ ಕೋಶಾಧಿಕಾರಿ ಗಿರೀಶ್ ಪೂಜಾರಿ ,ಬಿಲ್ಲವ ಸಂಘದ ಕ್ರೀಡಾ ಧ್ಯಕ್ಷ ಸುದೀಪ್ ಪೂಜಾರಿ ಎಳ್ಳಾರೆ , ಸಾಯಿ ಕ್ರಿಕೆಟರ್ಸ್ ನ ವಸಂತ್ ಶೆಟ್ಟಿಯವರು ಉಪಸ್ಥಿತರಿದ್ದರು.ಅತಿಥಿ ಗಣ್ಯರನ್ನು ಸಾಯಿ ಕ್ರಿಕೆಟರ್ಸ್ ನ ಪದಾಧಿಕಾರಿಗಳು ಪುಷ್ಪಗುಚ್ಚ್ ನೀಡಿ ಗೌರವಿಸಿದರು .ಸಾಯಿ ಟ್ರೋಪಿ ಪ್ರಥಮ ಸ್ಥಾನ ಪಡೆದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ,ದ್ವಿತೀಯ ಸ್ಥಾನ ಪಡೆದ ಮಸಕ ಎ ಮತ್ತು ತ್ರಿತೀಯ ಸ್ಥಾನ ಪಡೆದ ಕರಾಡಿ ಪ್ಯಾಂಥರ್ಸ್ ತಂಡಗಳಿಗೆ ಅತಿಥಿಗಳು ಟ್ರೋಪಿ ಮತ್ತು ನಗದು ಬಹುಮಾನ ನೀಡಿ ಅಭಿನಂದಿಸಿದರು .ವೈಯುಕ್ತಿಕ ಪ್ರಶಸ್ತಿ ಪಡೆದ ಆಟಗಾರರನ್ನು ಸತ್ಕರಿಸಲಾಯಿತು ,
ಈ ಕ್ರಿಕೆಟ್ ಟೂರ್ನಮೆಂಟನ್ನು ಪುಣೆಯಲ್ಲಿ ನೆಲೆಸಿರುವ ತುಳು ಕನ್ನಡಿರಿಗಾಗಿ ಆಯೋಜಿಸಿಸಲಾಗಿದ್ದು,ಸೀಮಿತ ಓವರ್ ಗಳ ಈ ಪಂದ್ಯಾಟದಲ್ಲಿ ಸುಮಾರು 10 ತಂಡಗಳು ಬಾಗವಹಿಸಿದ್ದವು , ಶಬರಿ ಎ ಮತ್ತು ಬಿ , ,ಮಸಕ ಎ ಮತ್ತು ಬಿ,ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಎಲೆವನ್ ,ಕರಾಡಿ ಪ್ಯಾಂಥರ್ಸ್ ,, ಪ್ರೆಸೆಂಟ್ಸ್ ಗ್ರೂಪ್ , ಕೊಥ್ರೋಡ್ ವಾರಿಯರ್ಸ್ ,ಮೌಂಟ್ ಏನ್ ಹೈ ,ಸನ್ನಿದಿ ಸ್ಪೋರ್ಟ್ಸ್ ,ತಂಡಗಳು ಈ ಟೂರ್ನ ಮೆಂಟ್ ನಲ್ಲಿ ಸೆಣಸಿದವು ,ನಾಕ್ ಟ್ ಮಾದರಿಯಲ್ಲಿ ನಡೆದ ಈ ಕ್ರಿಕೆಟ್ ಪಂದ್ಯಾಟದಲ್ಲಿ ಫೈನಲ್ ಪಂದ್ಯದಲ್ಲಿ ಮಸಕ ಎ ತಂಡವನ್ನು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಇಲೆವನ್ ಸೋಲಿಸಿ ಮಿರುಗುವ ಸಾಯಿ ಟ್ರೋಪಿ ಮತ್ತು ನಗದು 25000 ಬಹುಮಾನವನ್ನು ತನ್ನದಾಗಿಸಿಕೊಂಡಿತು ,ದ್ವಿತಿಯ ಸ್ಥಾನಿ ಮಸಕ ತಂಡವು ಟ್ರೋಪಿ ಮತ್ತು ನಗದು 15000 ನ್ನು ಪಡೆಯಿತು ,ತ್ರಿತೀಯ ಸ್ಥಾನಿಯಾದ ಕರಾಡಿ ಪ್ಯಾಂಥರ್ಸ್ ಟ್ರೋಪಿ ಪಡೆಯಿತು
ಪುಣೆಯ ವಿವಿದ ಸಂಘ ಸಂಸ್ಥೆಗಳ ಪದಾದಿಕಾರಿಗಳು ಈ ಸಮಯದಲ್ಲಿ ಆಗಮಿಸಿದ್ದರು , ಆಗಮಿಸಿದ ಗಣ್ಯರಿಗೆ ಸಾಯಿ ಕ್ರಿಕೆಟರ್ಸ್ ನ ವಸಂತ್ ಶೆಟ್ಟಿ ಮತ್ತು ಪ್ರಶಾಂತ್ ಶೆಟ್ಟಿ ಹಾಗೂ ಪದಾದಿಕಾರಿಗಳು ಹೂ ಗುಚ್ಛ ನೀಡಿ ಅಭಿನಂದಿಸಿದರು , ಸಾಯಿ ಕ್ರಿಕೆಟರ್ಸ್ ನ ಪದಾದಿಕಾರಿಗಳು ಸಹಕರಿಸಿದರು . ಸಂತೋಷ್ ಸುವರ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಪುಣೆಯಲ್ಲಿ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆಯಲ್ಲಿ ಸಾಯಿ ಕ್ರಿಕೆಟ್ ನ ವಸಂತ್ ಶೆಟ್ಟಿಯವರ ಹೆಸರು ಮೊದಲಿಗೆ ಬರುತ್ತದೆ .ಸುಮಾರು ವರ್ಷಗಳಿಂದ ನಮ್ಮ ತುಳುಕನ್ನಡಿಗರಿಗಾಗಿ ಎಲ್ಲರನ್ನು ಒಟ್ಟು ಸೆರಿಸಿಕೊಂಡು ಶಿಸ್ತು ಬದ್ದವಾಗಿ ಟೂರ್ನಮೆಂಟ್ ನ್ನು ಆಯೋಜಿಸುವದರಲ್ಲಿ ಆನಂದವನ್ನು ಕಾಣುವ ಇವರು ಈ ವರ್ಷ ತಮ್ಮ ತಾಯಿಯ ಸ್ಮರಣೆಯಲ್ಲಿ ಟ್ರೋಪಿಯನ್ನು ಇಟ್ಟು ಮಾತೃ ಪ್ರೇಮವನ್ನು ಬೆಳೆಸಿದ್ದಾರೆ .ಹಾಗೂ ತನ್ನದೇ ನಿರ್ದಾರದಂತೆ ತನ್ನ ಆಟಗಾರರನ್ನು ಸೇರಿಸಿಕೊಂಡು ಇತರ ಸಂಸ್ಥೆಗಲ ಹೆಸರಿನಲ್ಲಿ ತಂಡವನ್ನು ರಚಿಸಿ ಎಲ್ಲರಿಗು ಪ್ರೋತ್ಸಾಹ ನೀಡುವ ಇವರ ಕಾರ್ಯ ಮೆಚ್ಚುವಂತಹದು . ಮುಂದಿನ ವರ್ಷಗಳಲ್ಲಿ ಟೂರ್ನ ಮೆಂಟ್ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಶಿಸ್ತು ಬದ್ದವಾಗಿ ಆಯೋಜಿಸುವಲ್ಲಿ ನಮ್ಮೆಲ್ಲರ ಸಹಕಾರ ನಿಮ್ಮೊಂದಿಗಿದೆ.-ವಿಶ್ವನಾಥ್ ಪೂಜಾರಿ ಕಡ್ತಲ ,ಅಧ್ಯಕ್ಷರು ಬಿಲ್ಲವ ಸಂಘ ಪುಣೆ.
ಕ್ರಿಕೆಟ್ ಎಂದರೆ ಅದೊಂದು ಯುವ ಜನತೆಯ ಅಚ್ಚು ಮೆಚ್ಚಿನ ಆಟ ,ಯುವಕರು ಕ್ರಿಕೆಟ್ಗಾಗಿ ಯಾವುದೇ ಕಾರ್ಯ ಇರಲಿ ಬಿಡುವು ಮಾಡಿಕೊಂಡು ಮೈದಾನದಲ್ಲಿ ಹಾಜರಿರುತ್ತಾರೆ ,ಯುವಕರಿಗೆ ಪ್ರೋತ್ಸಾಹ ನೀಡುವಂತಹ ಸಾಯಿ ಕ್ರಿಕೆಟರ್ಸ್ ನ ವಸಂತ್ ಶೆಟ್ಟಿಯಂತವರಂತೆ ಟೂರ್ನಮೆಂಟ್ ಆಯೋಜಿಸಿ ಶಿಸ್ತು ಬದ್ದವಾಗಿ ನಡೆಸಿಕೊಂಡು ಬಂದಿರುವುದು ಕೂಡಾ ಇದಕ್ಕೆ ಕಾರಣ ,ಸಾಯಿ ಕ್ರಿಕೆಟರ್ಸ್ ಪುಣೆಯಲ್ಲಿ ತುಳುಕನ್ನಡಿಗರಿಗೆ ಚಿರಪರಿಚಿತ , ಈ ಬಾರಿ ತಮ್ಮ ತಾಯಿಯ ಸ್ಮರಣೆಯಲ್ಲಿ ವಿಶ್ವನಾಥ್ ಶೆಟ್ಟಿ ,ವಸಂತ್ ಶೆಟ್ಟಿ ಪ್ರಶಾಂತ್ ಶೆಟ್ಟಿ ಯವರು ಟ್ರೋಪಿಯನ್ನು ಇರಿಸಿ ಗೌರವ ಸಲ್ಲಿಸಿದ್ದಾರೆ ,ತುಂಬಾ ಒಳ್ಳೆಯ ವಿಚಾರ ತಾಯಿಗೆ ನೀಡುವ ಗೌರವ ದೇವರಿಗೆ ಸಂದುವಂತಹದು. ಮುಂದೆಯೂ ತಮ್ಮ ಸಂಸ್ಥೆ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಟೂರ್ನಮೆಂಟ್ ಆಯೋಜಿಸಲಿ ನಮ್ಮೆಲ್ಲರ ಸಂಪೂರ್ಣ ಸಹಕಾರ ಇದೆ – ಶ್ರೀ ಶೇಖರ್ ಶೆಟ್ಟಿ ,ಕಾರ್ಯಾಧ್ಯಕ್ಷರು ದಕ್ಷಿಣ ವಲಯ ಪ್ರಾದೇಶಿಕ ಸಮಿತಿ,ಬಂಟರ ಸಂಘ ಪುಣೆ .
ವರದಿ ಹರೀಶ್ ಮೂಡಬಿದ್ರಿ