ಸಮರ್ಥ ಬಿಲ್ಡರ್ಸ್ ಗ್ರಾಹಕರಿಗೆ ಉತ್ತಮ ಮೌಲ್ಯವನ್ನು ತಂದುಕೊಡುವ ಉದ್ದೇಶದಿಂದ ನಿರ್ಮಾಣವಾದ ಸಂಸ್ಥೆ. ಇಂಟಿರಿಯರ್, ವ್ಯಾಪಾರಿ ಮತ್ತು ವಸತಿ ಸಮುಚ್ಛಯಗಳ ನಿರ್ಮಾಣದಲ್ಲಿ ಕಂಪೆನಿ ತೊಡಗಿಸಿಕೊಂಡಿದ್ದು ಉತ್ತಮ ಗುಣಮಟ್ಟದ ಉತ್ಪನ್ನಗಳ ತಯಾರಿಕೆಯಲ್ಲಿ ಹೆಸರುವಾಸಿಯಾಗಿದೆ. ಸಂದೀಪ್ ಶೆಟ್ಟಿ ಮಾಲಕತ್ವದ ಸಮರ್ಥ ಬಿಲ್ಡರ್ಸ್ ನ ನೂತನ ಆಡಳಿತ ಕಚೇರಿ ಮೂಡಬಿದಿರೆಯಲ್ಲಿ ಉದ್ಘಾಟನೆಗೊಂಡಿತು.
ಉದ್ಘಾಟನಾ ಸಮಾರಂಭಕ್ಕೆ ಶಾಸಕ ಉಮಾನಾಥ್ ಕೋಟ್ಯಾನ್, ಕಾಂಗ್ರೆಸ್ ಮುಖಂಡ ಮಿಥುನ್ ರೈ, ಮೂಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ಪುರಸಭೆಯ ಪ್ರಸಾದ್ ಭಂಡಾರಿ, ಉದ್ಯಮಿ ಅಚ್ಯುತ ಶೆಟ್ಟಿ ಬೆಳುವಾಯಿ, ಸಂದೀಪ್ ಶೆಟ್ಟಿಯವರ ಪೋಷಕರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾಗಿರುವ ಸಂದೀಪ್ ಶೆಟ್ಟಿಯವರು ಕಳೆದ ಹತ್ತು ವರ್ಷಗಳಿಂದ ಮಿತ ದರದಲ್ಲಿ ಉತ್ತಮ ಗುಣಮಟ್ಟದ ಮನೆಗಳನ್ನು, ಕಟ್ಟಿಕೊಡುವ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಉದ್ಯಮದ ಜೊತೆಗೆ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದು ಪ್ರಸ್ತುತ ಮೂಡಬಿದಿರೆ ಯುವ ಬಂಟರ ಸಂಘದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.