ಕುಂದಾಪುರ ತಾಲ್ಲೂಕಿನ ಕಂಡ್ಲೂರು ಸರಕಾರಿ(ಕನ್ನಡ) ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಗೌತಮ್ ಶೆಟ್ಟಿ ಇವರು BAS ಕಂಪೆನಿಯ ಶೂ ವಿತರಿಸಿದರು.
ಈ ಸಂದರ್ಭ ಶ್ರೀ ಕನ್ನಿಕಾ ಎಜ್ಯುಕೇಶನ್ ಟ್ರಸ್ಟ್ (ರಿ) ಅಧ್ಯಕ್ಷ ಗೌರಿ ಶ್ರೀಯಾನ್, ಅಂಪಾರು ವಲಯದ ಸಿ.ಆರ್.ಪಿ ರಾಘವೇಂದ್ರ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಭಾಸ್ಕರ ಮೊಗವೀರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರತ್ನಾ ಶೆಟ್ಟಿ, ಶಿಕ್ಷಕ ವರ್ಗದ ರೇಖಾ, ವೀಣಾ, ಜ್ಯೋತಿ, ಜ್ಯೋತಿ ಗ್ಲಾಡಿಸ್, ರವಿ, ನಾಗರಾಜ್, ಸುನೀತಾ, ಲಲಿತಾ, ಚಂದ್ರ, ಬಸವ ನಾಯಕ್, ಹರ್ಷ ಕೋಟೇಶ್ವರ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.