ಕರ್ನಾಟಕ ಜಾನಪದ ಅಕಾಡೆಮಿಯ 2020 ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಡಾ ತಲ್ಲೂರು ಶಿವರಾಮ್ ಶೆಟ್ಟಿಯವರ ಕಲಾ ಸಂಚಯ ದಕ್ಷಿಣ ಭಾರತದ ಕೆಲವು ಅನುಷ್ಠಾನ ಕಲೆಗಳು ಎಂಬ ಕೃತಿ ಆಯ್ಕೆಯಾಗಿವೆ.
ಲಯನ್ಸ್ ಜಿಲ್ಲಾ ಗವರ್ನರ್ ಆಗಿಯೂ ಸೇವೆ ಸಲ್ಲಿಸಿದ್ದ ಡಾ ತಲ್ಲೂರು ಶಿವರಾಮ್ ಶೆಟ್ಟಿ ಮೂಲತಃ ಕುಂದಾಪುರದವರಾಗಿದ್ದು, ಪ್ರಸ್ತುತ ಉಡುಪಿಯಲ್ಲಿ ನೆಲೆಸಿ ಹೊಟೇಲು ಉದ್ಯಮದ ಜೊತೆಗೆ ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವರಾಮ್ ಶೆಟ್ಟರು ಬಿಎ ಪದವೀಧರರಾಗಿದ್ದು, ಯಕ್ಷಗಾನ ಪೋಷಕರಾಗಿ ಹವ್ಯಾಸಿ ಕಲಾವಿದರಾಗಿದ್ದಾರೆ. ಇವರು 8 ಕೃತಿಗಳನ್ನು ಬರೆದಿದ್ದಾರೆ. ಹೊಂಬೆಳಕು, ಮುಂಬೆಳಕು, ಕಲಾ ಸಂಚಯ, ಹೊಂಗಿರಣ, ಪಾಥೇಯ ಇವರ ಪ್ರಮುಖ ಕೃತಿಗಳು. ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷ, ಜಿಲ್ಲಾ ಹೊಟೇಲು ಮಾಲೀಕರ ಸಂಘ, ಉಡುಪಿ ರಂಗಭೂಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.