ಕನ್ನಡ ಸೇವಾ ಸಂಘ ಪೊವಾಯಿ ಇದರ ಸದಸ್ಯರು, ಅಧ್ಯಕ್ಷ ನ್ಯಾಯವಾದಿ ಆರ್ ಜಿ ಶೆಟ್ಟಿ, ಶ್ರೀಮತಿ ಪ್ರಶಾಂತಿ ಡಿ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶೋಭಾ ರಮೇಶ್ ರೈ ಇವರ ನೇತೃತ್ವದ ನಿಯೋಗವು ”ಸಲಾಂ ಬಾಲ ಆಶ್ರಮ”ಕ್ಕೆ ಸಂಘದ ರಜತ ಮಹೋತ್ಸವ ನಿಮಿತ್ತ ಭೇಟಿ ನೀಡಿ ಆಶ್ರಮದ ಮಕ್ಕಳಿಗೆ ಹಣ್ಣು ಹಂಪಲು ಹಾಗೂ ನೋಟ್ ಬುಕ್ ಹಾಗೂ ಇನ್ನಿತರ ಪಠ್ಯ ಪರಿಕರಗಳನ್ನು ನೀಡಿದರು. ಪೊವಾಯಿ ಕನ್ನಡ ಸೇವಾ ಸಂಘವು ಇನ್ನೂ ಹತ್ತು ಹಲವಾರು ಯೋಜನೆಗಳನ್ನು ಕೈಗೊಂಡಿದ್ದು ತುಳು ಕನ್ನಡ ಭಾಷೆ, ಸಂಸ್ಕೃತಿಯನ್ನು ಮಹಾರಾಷ್ಟ್ರದಲ್ಲಿ ಉಳಿಸಿ ಬೆಳೆಸುವಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿದೆ.