

ಬೆಂಗಳೂರು ಮಾಗಡಿ ಮುಖ್ಯರಸ್ತೆಯ ಹೇರೋಹಳ್ಳಿ ಲೇಕ್ ಎದುರು ಕಳೆದ ಹತ್ತು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕಿಂಗ್ಸ್ ಕಿಚನ್ ಎಕ್ವಿಪ್ಮೆಂಟ್ಸ್ ಸಂಸ್ಥೆ, ಕಮರ್ಷಿಯಲ್ ಕಿಚನ್ ಉಪಕರಣಗಳ ತಯಾರಿಕೆಯಲ್ಲಿ ತನ್ನದೇ ಆದ ಮುದ್ರೆ ಮೂಡಿಸಿದೆ. ಉಡುಪಿ ಜಿಲ್ಲೆಯ ಬಾರ್ಕೂರು ಮೂಲದ ಉದ್ಯಮಿ ಜಯಪ್ರಕಾಶ್ ಶೆಟ್ಟಿ ಎಲ್ಲರಿಗೂ ಆತ್ಮೀಯವಾಗಿ ‘ಜೇಪಿ ಅಣ್ಣ’ ಎಂದು ಪರಿಚಿತರಾಗಿರುವವರು. ತಮ್ಮ ದೂರದೃಷ್ಟಿ ಮತ್ತು ದುಡಿಮೆಯಿಂದ ಈ ಸಂಸ್ಥೆಯನ್ನು ಇಂದು ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಈ ಸಂಸ್ಥೆ ಹೋಟೆಲ್ ಉದ್ಯಮಕ್ಕೆ ಅಗತ್ಯವಿರುವ ಸಂಪೂರ್ಣ ಅಡುಗೆ ಮನೆಯ ಪರಿಹಾರಗಳನ್ನು ಒದಗಿಸುವ ಸಮಗ್ರ ಕೈಗಾರಿಕಾ ಘಟಕವಾಗಿದೆ. ಸ್ಟೈನ್ ಲೆಸ್ ಸ್ಟೀಲ್ ಕಿಚನ್ ವ್ಯವಸ್ಥೆಗಳು, ಕಮರ್ಷಿಯಲ್ ಸ್ಟೌವ್ಗಳು, ಸ್ಟೋರೇಜ್ ಯೂನಿಟ್ಗಳು ಹಾಗೂ ಗ್ರಾಹಕರ ಅವಶ್ಯಕತೆಗಳಿಗೆ ತಕ್ಕಂತೆ ಕಸ್ಟಮ್ ವಿನ್ಯಾಸದ ಉಪಕರಣಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ನಿಪುಣ ಕಾರ್ಮಿಕರ ತಂಡದ ಸಹಕಾರದಿಂದ ಗುಣಮಟ್ಟ, ದೀರ್ಘಕಾಲಿಕತೆ ಮತ್ತು ಕಾರ್ಯಕ್ಷಮತೆ ಎಂಬ ಮೂರು ಅಂಶಗಳನ್ನು ಕೇಂದ್ರವಾಗಿಟ್ಟುಕೊಂಡು ಉತ್ಪಾದನೆ ನಡೆಯುತ್ತಿದೆ.


ಕಿಂಗ್ಸ್ ಕಿಚನ್ ಎಕ್ವಿಪ್ಮೆಂಟ್ಸ್ ಸಂಸ್ಥೆಯ ಸೇವಾ ವ್ಯಾಪ್ತಿ ಬೆಂಗಳೂರು ನಗರವನ್ನು ಮೀರಿ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಿದೆ. ಶಿವಮೊಗ್ಗ, ಚಿತ್ರದುರ್ಗ, ಹುಬ್ಬಳ್ಳಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಹಾಗೂ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಹೋಟೆಲ್ಗಳಿಗೆ ಈ ಸಂಸ್ಥೆ ಕಿಚನ್ ಉಪಕರಣಗಳನ್ನು ಒದಗಿಸಿದೆ. ಇದರ ಜೊತೆಗೆ ಗೋವಾ, ಮಧ್ಯ ಪ್ರದೇಶ, ಅಯೋಧ್ಯಾ, ಕಾಶಿ ಮುಂತಾದ ಹೊರ ರಾಜ್ಯಗಳಲ್ಲಿಯೂ ಈ ಸಂಸ್ಥೆ ತನ್ನ ಸೇವೆಯನ್ನು ಯಶಸ್ವಿಯಾಗಿ ವಿಸ್ತರಿಸಿದೆ. ಅನೇಕ ಉದ್ಯಮಿಗಳು ತಮ್ಮ ಹೋಟೆಲ್ಗಳ ಸಂಪೂರ್ಣ ಕಿಚನ್ ವ್ಯವಸ್ಥೆಯನ್ನು ಜೇಪಿ ಅಣ್ಣ ಅವರ ಸಂಸ್ಥೆಯ ಮೂಲಕವೇ ನಿರ್ಮಿಸಿಕೊಂಡಿರುವುದು ಸಂಸ್ಥೆಯ ಮೇಲಿನ ಗಾಢ ವಿಶ್ವಾಸವನ್ನು ತೋರಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ‘ಮೇಕ್ ಇನ್ ಇಂಡಿಯಾ’ ಧ್ಯೇಯದಡಿ ತಯಾರಾಗುವ ಈ ಸಂಸ್ಥೆಯ ಉತ್ಪನ್ನಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಗಮನ ಸೆಳೆಯುತ್ತಿವೆ. ಅಮೆರಿಕದಲ್ಲಿ ಆರಂಭವಾಗುತ್ತಿರುವ ‘ಬೆಂಗಳೂರು ಕಫೆ’ ಹೋಟೆಲ್ಗೆ ಅಗತ್ಯವಿರುವ ಎಲ್ಲಾ ಕಿಚನ್ ಉಪಕರಣಗಳನ್ನು ಕಿಂಗ್ಸ್ ಕಿಚನ್ ಎಕ್ವಿಪ್ಮೆಂಟ್ಸ್ ಸಂಸ್ಥೆಯೇ ಪೂರೈಸುತ್ತಿದ್ದು, ಈಗಾಗಲೇ ಕಂಟೇನರ್ ಮೂಲಕ ಅಮೆರಿಕಕ್ಕೆ ರವಾನಿಸಲಾಗುತ್ತಿದೆ. ಇದು ಸಂಸ್ಥೆಯ ಜಾಗತಿಕ ಪಯಣದ ಮಹತ್ವದ ಘಟ್ಟವಾಗಿದೆ. ಒಟ್ಟಾರೆ, ಜಯಪ್ರಕಾಶ್ ಶೆಟ್ಟಿ (ಜೇಪಿ ಅಣ್ಣ) ಅವರ ನಿಷ್ಠೆ, ಪರಿಶ್ರಮ ಮತ್ತು ಗುಣಮಟ್ಟದ ಮೇಲಿನ ಬದ್ಧತೆ, ಕಿಂಗ್ಸ್ ಕಿಚನ್ ಎಕ್ವಿಪ್ಮೆಂಟ್ಸ್ ಸಂಸ್ಥೆಯನ್ನು ಒಂದು ಸಾಮಾನ್ಯ ಉದ್ಯಮದಿಂದ ಪ್ರೇರಣಾದಾಯಕ ಯಶೋಗಾಥೆಯಾಗಿ ರೂಪಿಸಿದೆ. ಸ್ಥಳೀಯವಾಗಿ ಆರಂಭವಾದ ಈ ಪ್ರಯಾಣ ಇಂದು ಜಾಗತಿಕ ವೇದಿಕೆಯಲ್ಲಿ ಬಂಟರ ಸಾಮರ್ಥ್ಯವನ್ನು ಪ್ರತಿನಿಧಿಸುತ್ತಿದೆ.
ಬರಹ : ಜಯಶೀಲ ಶೆಟ್ಟಿ





























































































































