ಶ್ರೀ ಬ್ರಹ್ಮಲಿಂಗೇಶ್ವರ ಫ್ರೆಂಡ್ಸ್ ಕಣಂಜಾರು ವತಿಯಿಂದ ಬೆಳಕಿನ ಹಬ್ಬದ ಬೆಳ್ಳಿ ಹಬ್ಬ ಹಾಗೂ ಪಟೇಲ ಶೇಖರ್ ಹೆಗ್ಡೆಯವರ ಜನ್ಮಶತಾಬ್ದಿ ಸ್ಮರಣಾರ್ಥ ಉಡುಪಿ ಜಿಲ್ಲಾ ರಕ್ತದಾನ ಕೇಂದ್ರದ ಸಹಯೋಗದೊಂದಿಗೆ ಅಕ್ಟೋಬರ್ 18ರಂದು ಮಡಿಬೆಟ್ಟು ಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರ ಜರುಗಿತು. ಹಿರಿಯಡ್ಕ ಪೊಲೀಸ್ ಠಾಣಾಧಿಕಾರಿ ಪುನೀತ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವೀಣಾ ರಕ್ತದಾನದ ಮಹತ್ವ ತಿಳಿಸಿದರು. ವೇದಿಕೆಯಲ್ಲಿ ವಿಕ್ರಮ್ ಹೆಗ್ಡೆ, ಶರ್ಮಿಳಾ ನವೀನ್ ಚಂದ್ರ ಭಂಡಾರಿ, ನ್ಯಾಯವಾದಿ ಸತೀಶ್ ಪೂಜಾರಿ ಪೆಲತ್ತೂರು, ಶಾಲಾ ಸಂಚಾಲಕ ಸಿಎ ಚಂದನ್ ಕುಮಾರ್ ಹೆಗ್ಡೆ, ಸಚ್ಚಿದಾನಂದ ಪ್ರಭು, ಮಹೇಶ್ ಶೆಟ್ಟಿ, ಸುರೇಶ್ ಶೆಟ್ಟಿ ಹಾಗೂ ಮಾಲತಿ ಶೆಟ್ಟಿ ಉಪಸ್ಥಿತರಿದ್ದರು.
ಶ್ರೀ ಮೇಲ್ಬಂಟ ಫ್ರೆಂಡ್ಸ್, ಹಡಂಕೋಳಿ ಫ್ರೆಂಡ್ಸ್, ನಮ್ಮ ಜವನೆರ್ ಕಣಂಜಾರು, ಪೆಲತ್ತೂರು ಫ್ರೆಂಡ್ಸ್, ಮಹಾಲಿಂಗೇಶ್ವರ ಭಜನಾ ಮಂಡಳಿ ಪೆಲತ್ತೂರು, ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಕಣಂಜಾರು ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ವಸಹಾಯ ಸಂಘ ಕಣಜಾರು ಒಕ್ಕೂಟದವರು ಸಹಕರಿಸಿದರು. ಶ್ರೀ ಬ್ರಹ್ಮಲಿಂಗೇಶ್ವರ ಎಜುಕೇಶನ್ ಟ್ರಸ್ಟ್ ಖಜಾಂಚಿ ಪ್ರಕಾಶ್ ಪ್ರಭು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಶ್ವನಾಥ ಪ್ರಭು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಸಂಘದ ಸರ್ವ ಸದಸ್ಯರು ಪಾಲ್ಗೊಂಡಿದ್ದರು. ವಿಕ್ರಮ್ ಹೆಗ್ಡೆ ಪ್ರಸ್ತಾವಿಸಿದರು. ಕಾರ್ತಿಕ್ ಶೆಟ್ಟಿ ಸ್ವಾಗತಿಸಿ, ನಿಖಿಲ್ ಶೆಟ್ಟಿ ನಿರೂಪಿಸಿ, ನಿಮೇಶ್ ಶೆಟ್ಟಿ ವಂದಿಸಿದರು.





















































































































