
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ| ಕೆ ಪ್ರಕಾಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಹಾಗೂ ಭಕ್ತರ ಸಭೆಯಲ್ಲಿ ಏಪ್ರಿಲ್ 23 ರಿಂದ ಮೊದಲ್ಗೊಂಡು ಮೇ 3 ರ ಪರ್ಯಂತ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪುನಃ ಪ್ರತಿಷ್ಣೆ ಹಾಗೂ ಬ್ರಹ್ಮಕಲಶಾಭಿಷೇಕ ನೆರವೇರಿಸುವುದೆಂದು ನಿಶ್ಚಯಿಸಲಾಗಿದೆ. ಶ್ರೀ ದೇವಳದ ಅನುವಂಶಿಕ ಮೊಕ್ತೇಸರರಾದ ಶ್ರೀ ರತ್ನಾಕರ ರಾಜ ಕಿನ್ಯಕ್ಕ ಬಳ್ಳಾಲ್, ಪೇಟೆಮನೆ ಶ್ರೀ ಭವಾನಿ ಶಂಕರ ಹೆಗ್ಡೆ ಮತ್ತು ಶ್ರೀ ಕೊರ್ನಾಯ ಶ್ರೀಪತಿ ರಾವ್ ಈ ಸಂಧರ್ಭ ಉಪಸ್ಥಿತರಿದ್ದರು. ಶ್ರೀ ಕ್ಷೇತ್ರದ ತಂತ್ರಿಗಳಾದ ಕಂಬಳಕಟ್ಟೆ ಶ್ರೀ ರಾಧಾಕೃಷ್ಣ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.




























































































































