
ಶ್ರೀ ಕ್ಷೇತ್ರ ಕಾತ್ರಾಜ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶ್ರೀ ಅಯ್ಯಪ್ಪ ಸ್ವಾಮಿ, ಶಿವ ಹಾಗೂ ಪರಿವಾರ ದೇವರುಗಳ ವಾರ್ಷಿಕ ಉತ್ಸವ, ಮಹಾಪೂಜೆಯು ಸ್ವಸ್ತಿ ಶ್ರೀ ವಿಶ್ವಾವಸುನಾಮ ಸಂವತ್ಸರ ಧನುರ್ಮಾಸ 28, ಜನವರಿ 12 ಸೋಮವಾರದಂದು ಜರಗಲಿದೆ. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮತ್ತು ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ರಾಘವೇಂದ್ರ ಭಟ್ ರವರ ಸಹಕಾರದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ವಾರ್ಷಿಕೋತ್ಸವದ ಅಂಗವಾಗಿ ಜನವರಿ 11ರಂದು ರವಿವಾರ ಸಂಜೆ ಗಂಟೆ 7.೦೦ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಪ್ರಸಾದ ಶುದ್ಧಿ ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಕಲಶಪೂಜೆ, ವಾಸ್ತು ಬಲಿ, ದುರ್ಗಾ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ಜರಗಲಿದೆ. ದಿನಾಂಕ 12 ರಂದು ಸೋಮವಾರ ಬೆಳಿಗ್ಗೆ ಗಂಟೆ 8.೦೦ ರಿಂದ ಮಹಾಗಣಪತಿ ಹೋಮ, ಕಲಶ ಪೂಜೆ, ನವಗ್ರಹ ಪೂಜೆ, ಅಶ್ಲೇಷಾ ಬಲಿ, ನಾಗದೇವರಿಗೆ ಅಭಿಷೇಕ, ತಂಬಿಲ, ಶ್ರೀ ದುರ್ಗಾ ದೇವಿಗೆ ಕಲಶ ಪೂಜೆ, ದುರ್ಗಾ ಪೂಜೆ, ಶಿವ ರುದ್ರಾಭಿಷೇಕ, ಶಿವಪೂಜೆ ನಡೆಯಲಿದೆ. ನಂತರ ಬೆಳಿಗ್ಗೆ ಗಂಟೆ 11.೦೦ರಿಂದ ಪಂಚಗವ್ಯಾಭಿಷೇಕ, ಪಂಚಾಮೃತಾಭಿಷೇಕ, ಕಲಶಾಭಿಷೇಕ, 11.30 ರಿಂದ ಪಲ್ಲಕಿ ಮೆರವಣಿಗೆ, ಮದ್ಯಾಹ್ನ ಗಂಟೆ 12.೦೦ರಿಂದ ಮಹಾಪೂಜೆ, ಪ್ರಸಾದ ವಿತರಣೆ, ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ. ರಾತ್ರಿ ಗಂಟೆ 7.೦೦ರಿಂದ ರಂಗ ಪೂಜೆ, ಶ್ರೀ ದೇವರ ಬಲಿ ಉತ್ಸವ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ನಂತರ ಅನ್ನಸಂತರ್ಪಣೆ ನಡೆಯಲಿರುವುದು. ಸಾಂಸ್ಕ್ರತಿಕ ಕಾರ್ಯಕ್ರಮಗಳ ಅಂಗವಾಗಿ ಮಧ್ಯಾಹ್ನ ಗಂಟೆ 2.೦೦ ರಿಂದ ಮಕ್ಕಳಿಂದ ವೈವಿದ್ಯಮಯ ನೃತ್ಯ ಕಾರ್ಯಕ್ರಮ, ನಂತರ ಕಲಾಸಾರಥಿ ಕರ್ನೂರ್ ಮೋಹನ್ ರೈ ಸಂಚಾಲಕತ್ವದಲ್ಲಿ ರವಿ ವರ್ಕಾಡಿ ನಿರ್ವಹಣೆಯಲ್ಲಿ ಸೋಮನಾಥ ಶೆಟ್ಟಿ ರಚಿಸಿ, ರಂಗ್ ದ ರಾಜೆ ಸುಂದರ್ ರೈ ಮಂದಾರ ತ್ರಿಪಾತ್ರದಲ್ಲಿ ಅಭಿನಯಸಿ ನಿರ್ದೇಶಸಿದ ಅಮ್ಮ ಕಲಾವಿದೆರ್ ಕುಡ್ಲ ಇವರಿಂದ ಹಾಸ್ಯಮಯ ನಾಟಕ ಆನ್ ಮಗೆ ಪ್ರದರ್ಶನಗೊಳ್ಳಲಿದೆ.

ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ವಾರ್ಷಿಕೋತ್ಸವದ ವಿಶೇಷ ಪರ್ವ ದಿನದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳು, ಮಹಾಪೂಜೆ, ಬಲಿ ಉತ್ಸವ, ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಅಯ್ಯಪ್ಪ ಸ್ವಾಮಿ ಪರಿವಾರ ದೇವರುಗಳ ಕೃಪೆಗೆ ಪಾತ್ರರಾಗುವಂತೆ ಗೌರವಾಧ್ಯಕ್ಷರಾದ ಸದಾನಂದ ಕೆ ಶೆಟ್ಟಿ, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಸುಭಾಷ್ ಎ ಶೆಟ್ಟಿ, ಸ್ಥಾಪಕಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ರಘುರಾಮ್ ಕೆ ರೈ, ಉಪಾಧ್ಯಕ್ಷ ಸುಧಾಕರ್ ಸಿ ಶೆಟ್ಟಿ, ಕೋಶಾಧಿಕಾರಿ ಸಚ್ಚಿದಾನಂದ ಎಸ್ ಶೆಟ್ಟಿ, ಜೊತೆ ಕೋಶಾಧಿಕಾರಿ ಬಾಲಕೃಷ್ಣ ಗೌಡ, ಜನ ಸಂಪರ್ಕಾಧಿಕಾರಿ ಪ್ರಶಾಂತ್ ಆಳ್ವ, ಸಲಹೆಗಾರರಾದ ಶೇಖರ್ ಟಿ ಪೂಜಾರಿ, ಜಗದೀಶ್ ಬಿ ಶೆಟ್ಟಿ, ಭಾಸ್ಕರ್ ವಿ ಶೆಟ್ಟಿ, ಗುರು ಸ್ವಾಮಿ ಭಾಸ್ಕರ ಕೊಟ್ಟಾರಿ, ಕಾರ್ಯಕಾರಿ ಸಮಿತಿಯ ಕಾರ್ಯಾಧ್ಯಕ್ಷ ಜಗದೀಪ್ ಶೆಟ್ಟಿ, ವಾರ್ಷಿಕೋತ್ಸವ ಮಹಿಳಾ ಸಮಿತಿ ಕಾರ್ಯಾಧ್ಯಕ್ಷೆ ಶ್ರೀಮತಿ ಅಂಬಿಕಾ ವಿ ಶೆಟ್ಟಿ ಹಾಗೂ ಎಲ್ಲಾ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ವಿನಂತಿಸಿಕೊಂಡಿರುತ್ತಾರೆ.
ಚಿತ್ರ, ವರದಿ : ಹರೀಶ್ ಮೂಡುಬಿದ್ರಿ





















































































































