ಲಯನ್ಸ್ ಕ್ಲಬ್ ಹಂಗಳೂರು, ಲಯನ್ಸ್ ಕ್ಲಬ್ ಕುಂದಾಪುರ ಮತ್ತು ಲಯನ್ಸ್ ಕ್ಲಬ್ ಉಡುಪಿ ಆಶ್ರಯದಲ್ಲಿ ನವೆಂಬರ್ 11 ರಂದು ಕುಂದಾಪುರ ಗಾಂಧಿ ಮೈದಾನದಲ್ಲಿ ಲಯನ್ಸ್ ಕ್ಲಬ್ ಹಂಗಳೂರು ಮತ್ತು ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ನಡುವೆ ನಡೆದ ಫೈನಲ್ ಪಂದ್ಯಾಟದಲ್ಲಿ “ಲಯನ್ಸ್ ಜಿಲ್ಲಾ ಸ್ಪೋರ್ಟ್ಸ್ ಮೀಟ್ 2025-26” ರ “ವಿನ್ನರ್ಸ್” ಪ್ರಶಸ್ತಿಯನ್ನು ಲಯನ್ಸ್ ಕ್ಲಬ್ ಹಂಗಳೂರು ಹಾಗೂ “ರನ್ನರ್ಸ್ ಅಪ್” ಪ್ರಶಸ್ತಿಯನ್ನು ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಪಡೆಯಿತು. ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಲಯನ್ ಅಜಿತ್ ಶೆಟ್ಟಿ ಕೊತ್ತಾಡಿ ಟೂರ್ನಮೆಂಟ್ ನ ಅತ್ಯುತ್ತಮ ಆಟಗಾರ “ಮ್ಯಾನ್ ಆಫ್ ದ ಸಿರೀಸ್” ಪ್ರಶಸ್ತಿಯ ಜೊತೆ ಲಯನ್ ಅರುಣ್ ಕುಮಾರ್ ಹೆಗ್ಡೆ ಮತ್ತು ಲಯನ್ ರಜತ್ ಕುಮಾರ್ ಹೆಗ್ಡೆ ಕೊಡಮಾಡಿದ “ಸೈಕಲ್”ನ್ನು ಹಾಗೂ ಲಯನ್ ಅಶ್ವತ್ ಶೆಟ್ಟಿ ಸೆಮಿಫೈನಲ್ ನಲ್ಲಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ಪಡೆದರು.

ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ, ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಕಪ್ತಾನ ಲಯನ್ ಸುಭಾಶ್ ಶೆಟ್ಟಿ ಮಧುವನ, ಕಾರ್ಯದರ್ಶಿ ಲಯನ್ ಚಂದ್ರ ಶೆಟ್ಟಿ ಯಾಳಕ್ಲು, ಸ್ಥಾಪಕಾಧ್ಯಕ್ಷರಾದ ಲಯನ್ ಅಡ್ವೋಕೇಟ್ ಬನ್ನಾಡಿ ಸೋಮನಾಥ್ ಹೆಗ್ಡೆ ಹಾಗೂ ತಂಡದ ಕ್ರೀಡಾಳುಗಳು ಪ್ರಶಸ್ತಿಯನ್ನು ಸ್ವೀಕರಿಸಿದರು. ಲಯನ್ಸ್ ಜಿಲ್ಲಾ ಅಡ್ಮಿನಿಸ್ಟ್ರೈಟರ್ ಲಯನ್ ಅರುಣ್ ಕುಮಾರ್ ಹೆಗ್ಡೆ, ಲಯನ್ಸ್ ರೀಜನ್ ಸೆಕ್ರೆಟರಿ ಲಯನ್ ಏಕನಾಥ್ ಬೋಳಾರ್, ಝೋನ್ ಚೇರ್ ಪರ್ಸನ್ ಲಯನ್ ವಸಂತ್ ರಾಜ್ ಶೆಟ್ಟಿ, ಝೋನ್ ಚೇರ್ ಪರ್ಸನ್ ಲಯನ್ ರಮಾ ಏಕನಾಥ್ ಬೋಳಾರ್ ಮುಂತಾದವರು ಉಪಸ್ಥಿತರಿದ್ದರು.









































































































