ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಪಿ.ವಿ ಶೆಟ್ಟಿಯವರಿಗೆ ಬಂಟರ ಸಂಘ ಮುಂಬಯಿ ವತಿಯಿಂದ ರಾಧಾಬಾಯಿ.ಟಿ ಭಂಡಾರಿ ಅಡಿಟೋರಿಯಂನಲ್ಲಿ ಅಭಿನಂದನಾ ಸಮಾರಂಭವು ಜರಗಿತು. ಎಂ.ಬಿ.ಬಿ.ಎಸ್ ಪದವೀಧರರಾದ ಡಾ. ಪಿ.ವಿ ಶೆಟ್ಟಿಯವರು ಉದ್ಯಮಿಯಾಗಿ, ಸಮಾಜಸೇವಕರಾಗಿ ಗುರುತಿಸಿಕೊಂಡವರು. ಕ್ರೀಡಾ ಕ್ಷೇತ್ರದಲ್ಲಿ ಅವರ ಕೊಡುಗೆ ಅಪೂರ್ವವಾದುದು. ಪಯ್ಯಡೆ ಸ್ಪೋರ್ಟ್ಸ್ ಕ್ಲಬ್ ಅಕಾಡೆಮಿಯಿಂದ ಎಷ್ಟೋ ಕ್ರೀಡಾ ಪ್ರತಿಭೆಗಳು ಅರಳಿವೆ. ಕ್ರಿಕೆಟ್ ತಾರೆಗಳಾದ ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ, ಪುಟ್ಬಾಲ್ ನಲ್ಲಿ ಮಿಂಚುತ್ತಿರುವ ಮಹಾರಾಷ್ಟ್ರ ರಾಜ್ಯ ಪುಟ್ಬಾಲ್ ತಂಡದ ನಾಯಕ ವಿಜೇಶ್ ಶೆಟ್ಟಿ ಇವರೆಲ್ಲಾ ಡಾ. ಪಿ.ವಿ ಶೆಟ್ಟಿ ಅವರ ಗರಡಿಯಲ್ಲಿ, ಪಳಗಿ ಬೆಳಗಿದವರು.

ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬೈಯ ಅಧ್ಯಕ್ಷ ಪ್ರವೀಣ್ ಬೋಜ ಶೆಟ್ಟಿ, ಉಪಾಧ್ಯಕ್ಷ ಮಹೇಶ್ ಎಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್ ಕೆ ಶೆಟ್ಟಿ, ಕೋಶಾಧಿಕಾರಿ ಸಿಎ ರಮೇಶ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಸಿಎ ಶಂಕರ್ ಶೆಟ್ಟಿ, ಪದ್ಮನಾಭ ಪಯ್ಯಡೆ, ಚಂದ್ರಹಾಸ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಚಿತ್ರಾ ಆರ್ ಶೆಟ್ಟಿ, ಉದ್ಯಮಿ ರವಿ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ಸವಿನ್ ಶೆಟ್ಟಿ, ಮಾತೃಭೂಮಿ ಸೊಸೈಟಿ ಅಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಮುಂಡಪ್ಪ ಪಯ್ಯಡೆ, ಗಿರೀಶ್ ಶೆಟ್ಟಿ ತೆಳ್ಳಾರ್, ಶಶಿಧರ್ ಶೆಟ್ಟಿ ಇನ್ನಂಜೆ ಮತ್ತಿತರರು ಉಪಸ್ಥಿತರಿದ್ದರು.









































































































