ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಮತ್ತು ಶ್ರೀ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಎಡಪದವು ಇವರ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಹುಡುಗರ ವಿಭಾಗದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು 04 ಚಿನ್ನ, 02 ಬೆಳ್ಳಿ ಹಾಗೂ 01 ಕಂಚಿನ ಪದಕಗಳೊಂದಿಗೆ ಒಟ್ಟು 07 ಪದಕ ಗಳಿಸಿ 178 ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ಹುಡುಗಿಯರ ವಿಭಾಗದಲ್ಲಿ 05 ಚಿನ್ನ, 02 ಬೆಳ್ಳಿ ಹಾಗೂ 01 ಕಂಚು ಒಟ್ಟು 08 ಪದಕ ಪಡೆದು 213 ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನು ಪಡೆದರು.

ಹುಡುಗರ ವಿಭಾಗದಲ್ಲಿ : 60 ಕೆಜಿ – ರವಿ ಸಿದ್ದಪ್ಪ (ಪ್ರಥಮ), 65 ಕೆಜಿ – ಯಶಸ್ ಜಿ (ತೃತೀಯ), 71 ಕೆಜಿ – ಹೇಮಂತ್ ಕೆ ವಿ (ದ್ವಿತೀಯ), 79 ಕೆಜಿ – ಶ್ರೇಯಸ್ (ದ್ವಿತೀಯ), 88 ಕೆಜಿ – ಶಮಂತ್ ಶೆಟ್ಟಿ (ಪ್ರಥಮ), 94 ಕೆಜಿ – ಪಾರ್ಥರಾಜ್ ಎಂ (ಪ್ರಥಮ), 110 ಕೆಜಿ – ಗಣೇಶ್ ಯು (ಪ್ರಥಮ). ಹುಡುಗಿಯರ ವಿಭಾಗದಲ್ಲಿ : 48 ಕೆಜಿ – ಪಲ್ಲವಿ (ಪ್ರಥಮ), 53 ಕೆಜಿ – ಮೈತ್ರಿ ರೆಲೆಕರ್ (ದ್ವಿತೀಯ), ದೀಪಿಕಾ ಕುರಗೋಡು (ತೃತೀಯ), 58 ಕೆಜಿ – ಕಾಂಚನಾ ಭೀಮಪ್ಪ (ಪ್ರಥಮ), 63 ಕೆಜಿ – ಸಿಂಚನಾ ಎಂ (ಪ್ರಥಮ), 69 ಕೆಜಿ – ನೀಲಾಂಬಿಕೆ ಜಿ ಪಾಟೀಲ್ (ಪ್ರಥಮ), 79 ಕೆಜಿ – ಸ್ಪೂರ್ತಿ ಟಿ ಜೆ (ಪ್ರಥಮ), 86 ಕೆಜಿ – ಅಶ್ವಿನಿ ಸಿದ್ದಪ್ಪ (ದ್ವಿತೀಯ) ಪಡೆದುಕೊಂಡರು. ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.








































































































