2026 ನೇ ಸಾಲಿನ ಜೇಸಿಐ ಕಾರ್ಕಳದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಜೇಸಿ ಅವಿನಾಶ್ ಜಿ ಶೆಟ್ಟಿ, ಕಾರ್ಯದರ್ಶಿಯಾಗಿ ಸುಶಾಂತ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುಶ್ಮಿತಾ ರಾವ್, ರಕ್ಷಿತಾ ರಾವ್, ಶಿವಕುಮಾರ್, ಶಾಹಿನ್ ರಿಜ್ವಾನ್ ಖಾನ್, ರೇವತಿ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ರಿಜ್ವಾನ್ ಖಾನ್, ಕೋಶಾಧಿಕಾರಿಯಾಗಿ ಮಂಜುನಾಥ್ ಡಿ, ಚುನಾವಣಾ ಕಮಿಟಿಯ ಛೇರ್ಮನ್ ಪ್ರಚಿತ್ ಕುಮಾರ್ ಹಾಗೂ ಸದಸ್ಯರಾದ ವಿಜ್ಞೇಶ್ ಪ್ರಸಾದ್, ಡಾ. ಮುರಳೀಧರ ಭಟ್ ಇವರ ಚುನಾವಣಾ ಪ್ರಕ್ರಿಯೆ ನಡೆಸಿ, ಜೆಸಿಐ ಕಾರ್ಕಳದ ಅಧ್ಯಕ್ಷೆ ಜೇಸಿ ಶ್ವೇತಾ ಜೈನ್ ಇವರು ಎಲ್ಲಾ ಪೂರ್ವಾಧ್ಯಕ್ಷರ ಸಮ್ಮುಖದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದರು.

ಅಧ್ಯಕ್ಷರಾಗಿ ಆಯ್ಕೆಯಾದ ಉದ್ಯಮಿ ಅವಿನಾಶ್ ಜಿ. ಶೆಟ್ಟಿಯವರು ಅಮ್ಮನ ನೆರವು ಎಂಬ ಚಾರಿಟೇಬಲ್ ಟ್ರಸ್ಟ್ ನ್ನು ಸ್ಥಾಪಿಸಿ, ಹಲವಾರು ವಿದ್ಯಾರ್ಥಿಗಳಿಗೆ ಹಾಗೂ ಬಡ ಕುಟುಂಬಗಳಿಗೆ ನೆರವಾಗುತ್ತಿರುವ ಸಮಾಜ ಸೇವಕ, 2025 ನೇ ಸಾಲಿನ ಸಾಧನಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಕಾರ್ಯದರ್ಶಿಯಾಗಿ ಆಯ್ಕೆಯಾದ ಸುಶಾಂತ್ ಶೆಟ್ಟಿಯವರು ಯುವ ಉದ್ಯಮಿಯಾಗಿದ್ದು ರಾಷ್ಟ್ರೀಯ ಮಟ್ಟದ ಕರಾಟೆ ಪಟುವಾಗಿ ಗುರುತಿಸಿಕೊಂಡಿದ್ದಾರೆ.








































































































