ಬೋಂಬೆ ಬಂಟ್ಸ್ ಅಸೋಸಿಯೇಷನ್ ಇದರ 42 ನೇ ವಾರ್ಷಿಕ ಮಹಾಸಭೆಯು ಅಧ್ಯಕ್ಷರಾದ ಅಡ್ವೋಕೇಟ್ ಡಿ.ಕೆ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನವೆಂಬರ್ 16ರಂದು ರವಿವಾರ ಬೆಳಿಗ್ಗೆ 10.00 ಗಂಟೆಗೆ ಸರಿಯಾಗಿ ನವಿ ಮುಂಬಯಿ ಜೂಹಿ ನಗರ ಪಶ್ಚಿಮದಲ್ಲಿರುವ ಬಂಟ್ಸ್ ಸೆಂಟರ್ ನಲ್ಲಿ ಜರಗಲಿದೆ. ಈ ಸಭೆಯಲ್ಲಿ ವಾರ್ಷಿಕ ವರದಿಯ ಮಂಡನೆ, ವಾರ್ಷಿಕ ಲೆಕ್ಕ ಪತ್ರಗಳ ಮಂಡನೆ, 2025-26 ರ ಸಾಲಿನ ಲೆಕ್ಕ ಪರಿಶೋಧಕರ ನೇಮಕ ಮತ್ತು ಇನ್ನಿತರ ವಿಷಯಗಳ ಬಗ್ಗೆ ಸದಸ್ಯರ ಜತೆ ಸಮಾಲೋಚನೆ, ಬಹಿರಂಗ ಅಧಿವೇಶನ ನಡೆಯಲಿದೆ. ಅಡ್ವೋಕೇಟ್ ಡಿ.ಕೆ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ, ಸಂಪೂರ್ಣ ಹೊಟೇಲ್ಸ್ ಪ್ರೈವೇಟ್ ಲಿಮಿಟೆಡ್ ನ ಸಿಎಂಡಿ ಪದ್ಮನಾಭ ಎಸ್ ಪಯ್ಯಡೆಯವರು ಉದ್ಘಾಟಿಸಲಿದ್ದು ಭವಾನಿ ಸಮೂಹ ಸಂಸ್ಥೆಗಳ ಸಿಎಂಡಿ ಕುಸುಮೋಧರ ಡಿ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.




ಸಮಾರಂಭದಲ್ಲಿ ಬಂಟ ಸಮಾಜದ ಶಿಕ್ಷಣ ಕ್ಷೇತ್ರದ ಸಾಧಕ ಲ| ಸಂತೋಷ ಆರ್ ಶೆಟ್ಟಿ, ವೈದ್ಯಕೀಯ ಕ್ಷೇತ್ರದ ಸಾಧಕ ಡಾ. ಸ್ವರೂಪ್ ಎಸ್ ಹೆಗ್ಡೆ, ಉದ್ಯಮ ರಂಗದ ಸಾಧಕ ಏಳಿಂಜೆ ಅನಿಲ್ ಶೆಟ್ಟಿ, ಮತ್ತು ಕ್ರೀಡಾ ಕ್ಷೇತ್ರದ ಸಾಧಕ ಗಣೇಶ ಕೆ ಶೆಟ್ಟಿಯವರನ್ನು ಸನ್ಮಾನಿಸಲಾಗುವುದು. ಬಂಟ ಸಮುದಾಯದ ಹಿರಿಯ ವಕೀಲರಾದ ಶ್ರೀ ಆರ್.ಸಿ ಶೆಟ್ಟಿಯವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಕಾರ್ಯಕ್ರಮದ ಕೊನೆಗೆ ಎಲ್ಲರಿಗೂ ಪ್ರೀತಿ ಭೊಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಆದ್ದರಿಂದ ಈ ವಾರ್ಷಿಕ ಮಹಾಸಭೆಗೆ ಎಲ್ಲಾ ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಗೂ ಸಮಯದಲ್ಲಿ ಭಾಗವಹಿಸಿ ಸಹಕರಿಸಬೇಕೆಂದು ಅಧ್ಯಕ್ಷರಾದ ಅಡ್ವೋಕೇಟ್ ಡಿ.ಕೆ ಶೆಟ್ಟಿ, ಉಪಾಧ್ಯಕ್ಷ ಐಕಳ ಕಿಶೋರ್ ಕೆ ಶೆಟ್ಟಿ, ಗೌ.ಪ್ರ ಕಾರ್ಯದರ್ಶಿ ನ್ಯಾಯವಾದಿ ಶೇಖರ್ ಆರ್ ಶೆಟ್ಟಿ, ಗೌ. ಕೋಶಾಧಿಕಾರಿ ಸಿಎ ವಿಶ್ವನಾಥ್ ಎಸ್ ಶೆಟ್ಟಿ, ಜತೆ ಕಾರ್ಯದರ್ಶಿ ಜಯರಾಜ್ ರೈ ಕೆ, ಜತೆ ಕೋಶಾಧಿಕಾರಿ ಸಿಎ ದಿವಾಕರ ಕೆ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತ ಎನ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರತೀಕ್ ಪಿ ಶೆಟ್ಟಿ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಮಾಜಿ ಅಧ್ಯಕ್ಷರು, ಟ್ರಸ್ಟಿಗಳು, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







































































































