ಬ್ರಹ್ಮಾವರ ನ. 8: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನ ಸುಸಜ್ಜಿತ ಕ್ರೀಡಾಂಗಣ ಜಿ ಎಮ್ ಅರೆನಾದಲ್ಲಿ 21ನೇ ವಾರ್ಷಿಕ ಕ್ರೀಡಾಕೂಟ ಯಶಸ್ವಿಯಾಗಿ ಜರಗಿತು. ಶ್ರೀಯುತ ಸೋಮಶೇಖರ ಪಡುಕರೆ, ಕರ್ನಾಟಕದ ಪ್ರಸಿದ್ಧ ಸ್ಪೋರ್ಟ್ಸ್ ಜರ್ನಲಿಸ್ಟ್, ಉಡುಪಿ ಇವರು ಕ್ರೀಡಾಜ್ಯೋತಿಯನ್ನು ಬೆಳಗಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ ನಮ್ಮ ದೇಶಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ತಂದು ಕೊಟ್ಟಿದ್ದು ಹಾಕಿ ಕ್ರೀಡೆ ಎಂದು ತಿಳಿಸಿದರು. ಹಾಗೆಯೇ ಜಿ ಎಮ್ ವಿದ್ಯಾಸಂಸ್ಥೆಯಿಂದ ಅಂತರಾಷ್ಟ್ರೀಯ ಕ್ರೀಡೆಗೆ ಆಯ್ಕೆಯಾದ ವಿದ್ಯಾರ್ಥಿಗಳ ಹೆಸರುಗಳನ್ನು ಗುರುತಿಸಿದರು. ವಿದ್ಯಾರ್ಥಿಗಳಿಗೆ ನಿಮ್ಮ ಜೀವನಕ್ಕಾಗಿ ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಿ ಆದರೆ ನಿಮ್ಮ ಬದುಕಿನ ಅಂತರಾತ್ಮದಲ್ಲಿ ಒಬ್ಬ ಕ್ರೀಡಾಪಟುವಿರಲಿ ಎಂದು ಕರೆನೀಡಿದರು.

ಸಮಾರೋಪ ಸಮಾರಂಭದಲ್ಲಿ ಶ್ರೀಯುತ ಜಗದೀಶ್ ಕೆ. ದೈಹಿಕ ಶಿಕ್ಷಣ ನಿರ್ದೇಶಕರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ. ಇವರು ಮಾತನಾಡಿ ಕ್ರೀಡೆಯು ನಮ್ಮಲ್ಲಿ ಜೀವನ ಕೌಶಲ, ನಾಯಕತ್ವ ಗುಣ, ಮನೋಲ್ಲಾಸ ಮತ್ತು ನಾವೆಲ್ಲರೂ ಒಂದೇ ಎಂಬ ಮನೋಭಾವನೆಯನ್ನು ಮೂಡಿಸುತ್ತದೆ ಎಂದು ತಿಳಿಸಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ರವರು ಧ್ವಜಾರೋಹಣಗೈದು ಮಾತನಾಡಿ ಶಾಲಾ ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡ ಯೋಗ, ಕರಾಟೆ, ನೃತ್ಯ ಕೌಶಲದ ಕುರಿತು ಪ್ರಶಂಸಿದರು. ಕ್ರೀಡೆಯು ನಮ್ಮ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ತಿಳಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿಯವರು ಮಾತನಾಡಿ ಸಾಧಕರನ್ನು ನಮ್ಮ ಆದರ್ಶ ವ್ಯಕ್ತಿಗಳನ್ನಾಗಿ ತೆಗೆದುಕೊಳ್ಳಬೇಕು ಮತ್ತು ಕ್ರೀಡಾ ಸಾಧಕರಲ್ಲಿರುವ ಕ್ರೀಡಾ ನಿಷ್ಠೆ, ಶಿಸ್ತು, ಪಾಲ್ಗೊಳ್ಳುವಿಕೆ ಮತ್ತು ಅವರು ನೀಡುವ ಪ್ರದರ್ಶನಗಳನ್ನು ನಮ್ಮಲ್ಲಿ ಮೈಗೂಡಿಸಿಕೊಳ್ಳಬೇಕು.
ನಮ್ಮ ವಿದ್ಯಾಸಂಸ್ಥೆಯು ಕೇವಲ ಶಿಕ್ಷಣಕ್ಕೆ ಮಹತ್ವ ನೀಡದೇ, ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಮಹತ್ವ ನೀಡಿ ಅನೇಕ ವಿದ್ಯಾರ್ಥಿಗಳು ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಗೈದಿದ್ದಾರೆ ಎಂದು ತಿಳಿಸಿದರು. ಜಿ ಎಮ್ ಗ್ಲೋಬಲ್ ಸ್ಕೂಲ್ ನ ಆಡಳಿತ ನಿರ್ದೇಶಕರಾದ ಪ್ರಣವ್ ಶೆಟ್ಟಿಯವರು ಮಾತನಾಡಿ ತರಗತಿ ಕೋಣೆ ಜ್ಞಾನವನ್ನು ಬೆಳೆಸುತ್ತದೆ ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸುತ್ತದೆಯೆಂದು ತಿಳಿಸಿ, ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಕ್ರೀಡಾಕೂಟದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯೆ ತಾರಾ ಪ್ರಕಾಂಶ್ಚಂದ್ರ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆಯಾಗಿರುವ ಡಾ. ಅನೂಷಾ ಸುಬ್ರಹ್ಮಣ್ಯಂ, ಶ್ರೀಮಾ ಪ್ರಣವ್ ಶೆಟ್ಟಿ, ದಿನೇಶ್ ಭಟ್, ಪೆÇೀಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲೆಯ ಮೇಧಾ ತಂಡ ಚಾಂಪಿಯನ್ಶಿಪ್ ಪಡೆದುಕೊಂಡಿತು.







































































































