ಮಹಾರಾಷ್ಟ್ರದ ಪ್ರಖ್ಯಾತ ದಿನಪತ್ರಿಕೆಯಾದ ಪುಡಾರಿಯು ಕೊಡ ಮಾಡುವ ಪಿಂಪ್ರಿ ಚಿಂಚ್ವಾಡ್ ಭೂಷಣ ಗೌರವ ಪುರಸ್ಕಾರ ಕಾರ್ಯಕ್ರಮವು ರಾಗ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಿತ್ತು. ಈ ಬಾರಿಯ ಪಿಂಪ್ರಿ ಚಿಂಚ್ವಾಡ್ ಭೂಷಣ್ ಪುರಸ್ಕಾರವು ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆಯವರಿಗೆ ನೀಡಿ ಗೌರವಿಸಿದೆ. ಅಲ್ಲದೇ ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ಉಪಾಧ್ಯಕ್ಷರಾದ ಪ್ರಸಾದ್ ಶೆಟ್ಟಿ ಅವರಿಗೆ ಕೂಡಾ ಪಿಂಪ್ರಿ ಚಿಂಚ್ವಾಡ್ ಭೂಷಣ್ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿಯನ್ನು ಸರಕಾರದ ಆರೋಗ್ಯ ಸಚಿವರಾದ ಪ್ರಕಾಶ್ ಅಬಿತ್ಕರ್ ಮತ್ತು ಸಂಸದರಾದ ಶ್ರೀರಂಗ (ಅಪ್ಪ) ಬಾರ್ನೆ ಮತ್ತು ಎಂ ಎಲ್ ಸಿ ಅಮಿತ್ ಗೋರ್ಕೆ ಎಂಎಲ್ಸಿ ಮತ್ತು ಶತ್ರುಘ್ನ ಕಾಟೆಯವರು ಒಡಗೂಡಿ ಪ್ರದಾನ ಮಾಡಿದರು.

ವರದಿ : ಹರೀಶ್ ಮೂಡಬಿದ್ರಿ, ಪುಣೆ