ಆಳ್ವಾಸ್ ಫಿಸಿಯೋಥೆರಪಿ ಕಾಲೇಜಿನ ಆಶ್ರಯದಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಮಂಗಳೂರು ವಲಯ ವಾಲಿಬಾಲ್ ಟೂರ್ನಮೆಂಟ್ನ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಚಾಂಪಿಯನ್ಸ್ ಆದರೆ, ಮಹಿಳೆಯರ ವಿಭಾಗದಲ್ಲಿ ಮಂಗಳೂರಿನ ಫಾದರ್ ಮುಲ್ರ್ಸ್ ನರ್ಸಿಂಗ್ ಕಾಲೇಜು ಚಾಂಪಿಯನ್ಸ್ ಪಟ್ಟ ಅಲಂಕರಿಸಿತು. ಪುರುಷ ವಿಭಾಗ
ವಿಜೇತರು: ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, ಮೂಡುಬಿದಿರೆ. ರನ್ನರ್ : ಆಳ್ವಾಸ್ ಫಿಸಿಯೋಥೆರಪಿ ಕಾಲೇಜು, ಮೂಡುಬಿದಿರೆ. ಮೊದಲ ರನ್ನರ್- ಅಪ್ : ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು, ಮೂಡುಬಿದಿರೆ. ಎರಡನೇ ರನ್ನರ್-ಅಪ್: ಕೆ.ವಿ.ಜಿ ಮೆಡಿಕಲ್ ಕಾಲೇಜು, ಸುಳ್ಯ

ಮಹಿಳಾ ವಿಭಾಗ, ವಿಜೇತರು : ಫಾದರ್ ಮುಲ್ಲರ್ಸ್ ನರ್ಸಿಂಗ್ ಕಾಲೇಜು, ಮಂಗಳೂರು. ರನ್ನರ್ : ಆಳ್ವಾಸ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು, ಮೂಡುಬಿದಿರೆ. ಮೊದಲ ರನ್ನರ್- ಅಪ್ : ಎಂ.ವಿ ಶೆಟ್ಟಿ ಫಿಸಿಯೋಥೆರಪಿ ಕಾಲೇಜು, ಮಂಗಳೂರು. ಎರಡನೇ ರನ್ನರ್- ಅಪ್ : ಕೊಡಗು ಮೆಡಿಕಲ್ ಕಾಲೇಜು, ಮಡಿಕೇರಿ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ. ವಿನಯ್ ಆಳ್ವ, ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಯತಿಕುಮಾರ್ಸ್ವಾಮಿ ಗೌಡ ಹಾಗೂ ಮಂಗಳೂರು ವಲಯ ಸಂಯೋಜಕ ಚಂದ್ರಶೇಖರ ಎಸ್.ಎನ್, ದೈಹಿಕ ನಿರ್ದೇಶಕ ಅವಿನಾಶ್ ಸಮಾರೋಪ ಕಾರ್ಯಕ್ರಮದಲ್ಲಿ ಇದ್ದರು.