ಬಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ, ಕಾರ್ಕಳ ಇದರ 4 ನೇ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸೆಪ್ಟೆಂಬರ್ 13ರಂದು ಕಾರ್ಕಳದ ಹೋಟೆಲ್ ಸ್ವಾಗತ್ ನಲ್ಲಿ ಜರಗಿತು. ಸೊಸೈಟಿಯ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 31-03-2025ರ ಅಂತ್ಯಕ್ಕೆ ಸೊಸೈಟಿಯು 18.77 ಕೋಟಿ ಠೇವಣಿ ಸಂಗ್ರಹಿಸಿ, 17.95 ಕೋಟಿ ಸಾಲ ನೀಡಿ 36.72 ಕೋಟಿ ವ್ಯವಹಾರವನ್ನು ನಡೆಸಿ 107 ಕೋಟಿ ವಹಿವಾಟನ್ನು ಮಾಡಿ, 58.47 ಲಕ್ಷ ಲಾಭವನ್ನು ಗಳಿಸಿ, 3 ವರ್ಷದಲ್ಲಿಯೇ ಶೇ 13.50 ಡಿವಿಡೆಂಟ್ ನೀಡಿರುವುದು ನಮ್ಮ ಸೊಸೈಟಿಯ ಹೆಮ್ಮೆ ಎಂದು ತಿಳಿಸಿದರು. ಈ ಅಭಿವೃದ್ಧಿಯಲ್ಲಿ ನಮ್ಮ ಸಂಘದ ಸದಸ್ಯರು, ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರ ಸಹಕಾರದಿಂದ ಸೊಸೈಟಿಯು ಅಲ್ಪಾವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು ಎಂದು ತಿಳಿಸಿದರು.

ಸೊಸೈಟಿಯ ಉಪಾಧ್ಯಕ್ಷ ಕೆ ಮಂಜುನಾಥ ಶೆಟ್ಟಿ ಸ್ವಾಗತಿಸಿದರು. ನಿರ್ದೇಶಕಿ ವಿನಯ ಅರುಣ್ ಶೆಟ್ಟಿ ಮಹಾಸಭೆಯ ನೋಟಿಸನ್ನು ವಾಚಿಸಿದರು. ನಿರ್ದೇಶಕ ಪ್ರಶಾಂತ್ ಶೆಟ್ಟಿ 3ನೇ ವಾರ್ಷಿಕ ಮಹಾಸಭೆಯ ನಡವಳಿಯನ್ನು ಮಂಡಿಸಿದರು. 2024 -25 ನೇ ಸಾಲಿನ ವಾರ್ಷಿಕ ವರದಿಯನ್ನು ಮುಖ್ಯ ಕಾರ್ಯ ನಿರ್ವಾಹನಾಧಿಕಾರಿ ಕಿಶೋರ್ ಶೆಟ್ಟಿ ಮಂಡಿಸಿದರು. ನಿರ್ದೇಶಕ ಕೆ ನವೀನ್ ಚಂದ್ರ ಶೆಟ್ಟಿ 2024- 25 ನೇ ಸಾಲಿನ ಲೆಕ್ಕಪರಿಶೋಧಿತ ಲೆಕ್ಕಪತ್ರ ಮಂಡನೆ ಮಾಡಿದರು. ನಿರ್ದೇಶಕ ಎಂ ಪ್ರಸನ್ನ ಶೆಟ್ಟಿ 2024 -25 ನೇ ಸಾಲಿನ ಆಯವ್ಯಯ ಪರಿಶೀಲನೆಯನ್ನು ಮಂಡಿಸಿದರು. ನಿರ್ದೇಶಕ ಪ್ರದೀಪ್ ಕುಮಾರ್ ಶೆಟ್ಟಿ 2024 -25 ನೇ ಸಾಲಿನ ಬಜೆಟ್ ಗಿಂತ ಜಾಸ್ತಿ ಖರ್ಚಾದ ಐವೇಜಿಗೆ ಮಂಡಿಸಿದರು. ಪ್ರಧಾನ ವ್ಯವಸ್ಥಾಪಕ ಕೃಷ್ಣ ಎಂ ಶೆಟ್ಟಿ 2025 -26 ನೇ ಸಾಲಿನ ಬಜೆಟನ್ನು ಮಂಡನೆ ಮಾಡಿದರು. ನಿರ್ದೇಶಕ ರಮೇಶ್ ಶೆಟ್ಟಿ ಇವರು ಲೆಕ್ಕ ಪರಿಶೋಧಕರ ವರದಿಯಲ್ಲಿ ಸೂಚಿಸಿರುವ ನ್ಯೂನತೆಗೆ ಅನುಪಾಲನ ವರದಿಯನ್ನು ಮಂಡಿಸಿದರು. ನಿರ್ದೇಶಕ ಸಚೇಂದ್ರ ಶೆಟ್ಟಿ 2024 -25 ನೇ ಸಾಲಿನ ನಿವ್ವಳ ಲಾಭದ ಹಂಚಿಕೆಯನ್ನು ಮಂಡಿಸಿದರು. ನಿರ್ದೇಶಕ ಎಂ ಸುಧಾಕರ ಶೆಟ್ಟಿ ಸಾಧಕರ ಸನ್ಮಾನ ಪತ್ರವನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 11 ಮಂದಿ ಗಣ್ಯರನ್ನು ಸನ್ಮಾನಿಸಲಾಯಿತು. 12 ಜನ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬದವರಿಗೆ ಧನ ಸಹಾಯವನ್ನು ನೀಡಲಾಯಿತು. ವೇದಿಕೆಯಲ್ಲಿ ನಿರ್ದೇಶಕರುಗಳಾದ ಮಾಲಿನಿ ಎನ್ ರೈ, ಸುನೀತ ಎಸ್ ಶೆಟ್ಟಿ, ಸುಹಾಸ್ ಹೆಗ್ಡೆ ನಂದಳಿಕೆ ಉಪಸ್ಥಿತರಿದ್ದರು. ಸಭೆಯ ಪ್ರಾರಂಭದಲ್ಲಿ ಸೊಸೈಟಿಯ ಸದಸ್ಯರಾದ ಲಲಿತಾ ಶೆಟ್ಟಿ ಪ್ರಾರ್ಥನೆಗೈದರು. ಬಾಲಕೃಷ್ಣ ಶೆಟ್ಟಿ ನಿರೂಪಿಸಿ ವಂದನಾರ್ಪಣೆಗೈದರು.