ಮನುಷ್ಯನ ಜೀವನದ ಅತ್ಯಂತ ಪ್ರಮುಖ ಮೂರು ಅಗತ್ಯಗಳಲ್ಲಿ ಪ್ರಥಮ ಸ್ಥಾನ ಆಹಾರಕ್ಕೆ. ಮತ್ತಿನದು ಮಾನ ಮುಚ್ಚಲು ಬಟ್ಟೆ ಮತ್ತು ವಾಸಿಸಲು ಸೂರು. ಹಸಿವು ನೀರಡಿಕೆ ಇಂಗಿಸಲೆ0ದೇ ಹಲಬಗೆಯ ಅನ್ವೇಷಣೆ, ವಲಸೆಗಳನ್ನು ಕೈಗೊಂಡ ಮಾನವ ಜನಾಂಗಕ್ಕೆ ಆಹಾರ ‘ಅಗತ್ಯ’ವಾಗಿತ್ತು. ಆದರೆ ಇಂದು ಆಹಾರ ಐಷಾರಾಮದ, ಸುಖ ಲೋಲು ಪತೆಯ ಒಂದು ಮುಖವಾಗಿದೆ.

ಕಳೆದ ಎರಡು-ಮೂರು ದಶಕಗಳಲ್ಲಿ ಆಹಾರ ಸಂಬ0ಧಿ ಉದ್ಯಮದ ಆಗಾಧ ಬೆಳವಣಿಗೆಯಾಗಿದೆ. ರೆಸ್ಟುರೆಂಟ್ಗಳು, ಬೀದಿಬದಿ ವ್ಯಾಪಾರ, ಮನೆಮನೆಗೆ ತಲಪಿಸುವ ವ್ಯವಸ್ಥೆಗಳು, ಆಹಾರದಲ್ಲಿನ ವೈವಿಧ್ಯಗಳು ಅಪಾರವೆಂಬ0ತೆ ಬೆಳೆದಿದೆ. ಒಂದರ್ಥದಲ್ಲಿ ಮನುಷ್ಯ ಎಂದು ಐಷಾರಾಮದ ಕಬಂಧ ಬಾಹುಗಳಲ್ಲಿ ಬಂದಿಯಾಗಿ ಬಿಟ್ಟಿದ್ದಾನೆ. ಇಂದು ಅಬಾಲವೃದ್ಧರಾದಿಯಾಗಿ ಎಲ್ಲರೂ ಪಿಜಾ, ನಾನ್, ಪರೋಟ, ವಿವಿಧ ರೂಪದ ಬೇಕರಿ ಪದಾರ್ಥಗಳು, ಸಮೋಸ, ಕಟ್ಲೆಟ್ನಂತಹ ವೈವಿಧ್ಯತೆಗಳನ್ನು ಸವಿಯುತ್ತಿರುವವರೇ, ಇವರಾರೂ ಹಸಿದವರಲ್ಲ!! ಎಲ್ಲವೂ ನಾಲಗೆಯ ರುಚಿಯ ಮೇಲೆ ಅವಲಂಬಿತ. ಇಷ್ಟೆಲ್ಲಾ ಆಹಾರದ ಕ್ರಾಂತಿ ನಡೆಯಬೇಕಾದರೆ ಅದರ ಮೂಲದಲ್ಲಿ ಇರುವುದು ಒಂದೇ ವಸ್ತು ಎಂದರೆ ಆಶ್ಚರ್ಯವೆನಿಸಬಹುದು…… ಅದೇ ಮೈದಾ. ಮೈದಾ ಎನ್ನುವ ಮ್ಯಾಜಿಕ್ ಹುಡಿ ಪ್ರಪಂಚದಾದ್ಯ0ತ ಆಹಾರ ಉದ್ಯಮದಲ್ಲಿ ಕ್ರಾಂತಿ ಎಬ್ಬಿಸಿದೆ. ೨೦ನೆಯ ಶತಮಾನದ ಮೊದಲಾರ್ಧದಲ್ಲಿ ಅಮೇರಿಕಾದಲ್ಲಿ ಪರಿಚಯಿಸಲ್ಪಟ್ಟ ಮೈದಾ ಭಾರತಕ್ಕೆ ಬಂದದ್ದು ಮೊಘಲರ ಕಾಲದಲ್ಲಿ. ಒಂದು ಮಾಹಿತಿಯ ಪ್ರಕಾರ ರೋಟಿ ಇಷ್ಟಪಡದ ಬಾಬರ್ ಪರ್ಷಿಯದಿಂದ ‘ನಾನ್’ಅನ್ನು ಭಾರತಕ್ಕೆ ಪರಿಚಯಿಸಿದ. ಪರ್ಷಿಯದಲ್ಲಿ ‘ನಾನ್’ ಹುಟ್ಟಿದ್ದು ೧೪ನೆ ಶತಮಾನದಲ್ಲಿ. ಭಾರತಕ್ಕೆ ಬಂದದ್ದು ೧೬ನೆಯ ಶತಮಾನದಲ್ಲಿ.
ಮೈದಾ ಎಂದರೇನು?
ರೋಗಿಗಳಿಗೆ ಕೊಡುವ ಬ್ರೆಡ್ ಬಿಸ್ಕಿಟ್, ಜನ ಇಷ್ಟಪಡುವ ನೂಡಲ್ಸ್, ತರಹೇವಾರಿ ಸಿಹಿಪದಾರ್ಥಗಳು, ಪಿಜಾ, ಬರ್ಗರ್, ಕೇಕ್, ಸಿಹಿತಿಂಡಿಗಳು ಎಲ್ಲವೂ ಮೈದಾಮಯ. ಗೋಧಿ ಹುಡಿಯ ತಯಾರಿಕೆಯಲ್ಲಿನ ಬೇಡವಾದ, ಬಿಸಾಡವ ಹುಡಿಯೇ ಮೈದಾ. ಗೋಧಿಯ ಪೌಷ್ಟಿಕಾಂಶಗಳನ್ನು ಹೊರತುಪಡಿಸಿ, ಉಳಿದ ಭಾಗವನ್ನು ಹುಡಿಮಾಡಿದಾಗ ಸಿಗುವ ತುಸು ಹಳದಿ ಬಣ್ಣದ ವಸ್ತುವೇ ಮೈದಾ.
ಹೇಗೆ ಆಹಾರೋದ್ಯಮದ ವಿವಿಧ ಕಲ್ಪನೆಗಳನ್ನು ಮೈದಾ ಸಾಕಾರಗೊಳಿಸಲು ಸಹಾಯಮಾಡಿತೋ ಕೇವಲ ೨ ದಶಕಗಳಲ್ಲಿ ಉದ್ಯಮ ಏರುಗತಿಯಲ್ಲಿ ವಿಸ್ತರಿಸಲು ಸಹಾಯ ಮಾಡಿತೋ ಇಂದು ಇದೇ ಮೈದಾದ ಬಗ್ಗೆ ಹಲವು ಪ್ರಜ್ಞಾವಂತರು ಅಪಸ್ವರ ಎತ್ತಲಾರಂಭಿಸಿದ್ದಾರೆ. ಅದಕ್ಕೆ ಕಾರಣವಿಲ್ಲದಿಲ್ಲ. ಇಂದು ಮಧುಮೇಹ ರೋಗವಿಲ್ಲದ ಮನೆಯಿಲ್ಲ ಎಂಬ0ತಾಗಿದೆ. ಕ್ಯಾನ್ಸರ್ ಜಗತ್ತಿನ ೨ನೆಯ ಅತಿದೊಡ್ಡ ನರಹಂತಕವೆನಿಸಿದೆ. ಹೃದಯ ಸಂಬ0ಧಿ ರೋಗಗಳು, ಬೊಜ್ಜು, ಕರುಳಿನ ತೊಂದರೆ, ಗಂಟುನೋವು, ಬಲಕಳೆದು ಕೊಳ್ಳುತಿರುವ ಎಲುಬುಗಳು, ಆತಂಕ, ಖಿನ್ನತೆ, ಅಸ್ತಮಾ ಮಾನವ ಜನಾಂಗವನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಆಹಾರೋದ್ಯಮ ಬೆಳೆಯುತ್ತಿರುವ ಅದೇ ವೇಗದಲ್ಲಿ ವೈದ್ಯಕೀಯ ಸಂಬ0ಧಿ ಉದ್ಯಮವೂ ಬೆಳೆಯುತ್ತಿದೆ. ಇದೆಲ್ಲದರ ಹಿಂದೆ ಇರುವ ಒಂದು ಪ್ರಮುಖ ಕಾರಣ ನಮ್ಮ ಮನೆ- ಮನವನ್ನು ಹೊಕ್ಕ ಮೈದಾ.
ಒಮ್ಮೆ ನಿಂತು ಯೋಚಿಸಿದರೆ ಅರಿವಾಗಬಹುದು ಮನುಷ್ಯನಿಗೆ ಅತ್ಯಂತ ‘ಆರೋಗ್ಯವಂತ’ ಸಮಯವಾಗಿ ಕಂಡದ್ದು “ಕೊರೋನಾ ಸಮಯ’ ಮಾತ್ರ. ಕೊರೋನಾದ ಸೋಂಕು ಅಥವ ಅದರ ಭಯ ಮಾತ್ರ ಇದ್ದಿತೇ ಹೊರತು, ಇತರ ಯಾವುದೇ ಕಾಯಿಲೆಗಳು ಅಷ್ಟಾಗಿ ಬಾಧಿಸಲಿಲ್ಲ!! ಇದಕ್ಕೆ ಕಾರಣ ಆಹಾರ ಉದ್ಯಮ ಮುಚ್ಚಿಕೊಂಡದ್ದು. ಹೋಟೇಲು, ಬೇಕರಿಗಳು ತೆರೆಯದೇ ಇದದ್ದು. ಮನೆಯ ಊಟ ಕಷಾಯ ಕುಡಿದ ಜನ ಅಲ್ಪಾಹಾರದಲ್ಲಿ ಕೊರೋನಾದ ಭಯದಲ್ಲಿ ಸರಳ ಜೀವನ ನಡೆಸಿದ್ದು. ಮೈದಾ ಹೇಗೆ ಕೆಲಬಗೆಯ ರೋಗಗಳನ್ನು ಉಂಟು ಮಾಡುತ್ತದೆ ಎಂಬುದನ್ನು ಸ್ಥೂಲವಾಗಿ ಪರಿಶೀಲಿಸೋಣ. ಕರುಳಿನ ರೋಗ ‘ಸೀಲಿಯಾಕ್ ರೋಗ’ ಹೊಟ್ಟೆಉಬ್ಬರ, ಬೇಧಿ, ಹೊಟ್ಟೆನೋವು, ಪಚನವಾಗದೆ ಇರುವ ಸೀಲಿಯಾಕ್ ಕಾಯಿಲೆಗೆ ಕಾರಣವೇ ಮೈದಾದಲ್ಲಿನ ‘ಗ್ಲುಟೆನ್’ ಎಂಬ ಅಂಶ. ಇದು ಕರುಳಿನ ಪದರಕ್ಕೆ ಹಾನಿಯುಂಟುಮಾಡುವುದರಿAದ ಈ ಕಾಯಿಲೆ ಉಂಟಾಗುತ್ತದೆ. ಮಧುಮೇಹ: ತುಸು ಹಳದಿ ಬಣ್ಣದ ಮೈದಾದ ಬಣ್ಣವನ್ನು ಅಚ್ಚ ಬಿಳಿಮಾಡಲು ಉಪಯೋಗಿಸುವ … (ಕ್ಲೋರಿನ್ ಡೈಯಾಕ್ಸೆöಡ್) ನ ಉಪಪದಾರ್ಥ ಅಲೋಕ್ಸಾನ್. ಅಲೋಕ್ಸಾನ್ ಇನ್ಸುಲಿನ್ ಉತ್ಪತ್ತಿಮಾಡುವ ಮೇದೋಜೀರಕ ಗ್ರಂಥಿಯ ಬೀಟಾ ಜೀವಕೋಶಕ್ಕೆ ಹಾನಿಯುಂಟುಮಾಡುತ್ತದೆ. ಇದರಿಂದಾಗಿ ಮಧುಮೇಹ ಉಂಟಾಗಬಹುದು. ಅರ್ಬುದ (ಅಚಿಟಿಛಿeಡಿ) : ಮೈದಾದ ಬಣ್ಣವನ್ನು ತೆಗೆಯಲು ಉಪಯೋಗಿಸುವ ಇನೊಂದು ರಾಸಾಯನಿಕದ ಹೆಸರು ಪೊಟಾಸಿಯಂ ಬ್ರೊಮೈಡ್ಇದು ಅದೆಷ್ಟು ಹಾನಿಕಾರಕ ಎಂದರೆ ಮನುಷ್ಯನ ‘ಜೀನ್’ನ ಮೇಲೆಯೇ ಹಾನಿಯುಂಟು ಮಾಡುತ್ತದೆ. ಹಾಗೆಂದು ಕಂಡು ಹಿಡಿದದ್ದು ೧೯೯೨ ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯ ಒಂದು ಕಮಿಟಿ!!
ಇಂದು ಕ್ಯಾನ್ಸರ್ ಕಾಯಿಲೆ ಹಳ್ಳಿಹಳ್ಳಿಗಳಲ್ಲಿ ವ್ಯಾಪಿಸಿದೆ. ಯಾಕೆಂದರೆ ಮೈದಾ ಪ್ರತಿ ಮನೆಯೊಳಗೆ ಹೋಗಿಯಾಗಿದೆ ಹೃದಯ ರಕ್ತನಾಳಗಳ ತೊಂದರೆ: ಇದು ಕೂಡಾ ಅಲೋಕ್ಸಾನ್ ನಿಂದಾಗಿ ಉಂಟಾಗುವ ತೊAದರೆ. ಎಲುಬಿನ ತೊಂದರೆ: ಮೈದಾವನ್ನು ರಿಫೈನ್ ಮಾಡುವಾಗ ಅದರ ಎಲ್ಲಾ ಪೌಷ್ಟಿಕಾಂಶಗಳನ್ನು ತೆಗೆದು ಬಿಟ್ಟಾಗ ಮೈದಾದ ಆಮ್ಲೀಯತೆ ಹೆಚ್ಚುತ್ತದೆ. ಆಗ ದೇಹ ಸಮತೋಲನಕ್ಕೆ ತರಲು ಪ್ರಯತ್ನಿಸುತ್ತದೆ. ಇದಕ್ಕೆ ಬೇಕಾದುದು ಕ್ಯಾಲ್ಸಿಯಂ. ಅದು ನಮ್ಮ ದೇಹದಲ್ಲಿರುವುದು ಎಲುಬಿನಲ್ಲಿ.ಆದ್ದರಿಂದ ಎಲುಬಿನ ಕ್ಯಾಲ್ಸಿಯಂ ರಕ್ತಕ್ಕೆ ಬರುತ್ತದೆ. ಎಲುಬುಗಳು ದುರ್ಬಲಗೊಳ್ಳುತ್ತವೆ. ಗಂಟುನೋವು. ಗಂಟುಸವೆತ ಕಾಣಿಸಿಕೊಳ್ಳುತ್ತದೆ. ಉಬ್ಬಸ: ಮೈದಾದಲ್ಲಿ ಉಪಯೋಗಿಸುವ ಇನ್ನೊಂದು ಬಣ್ಣ ತೆಗೆಯುವ ರಾಸಾಯನಿಕ ಉಬ್ಬಸ, ಶೀತ, ಅಲರ್ಜಿ ಉಂಟುಮಾಡುತ್ತದೆ. ರಾಮನನ್ನು ವರಿಸಲು ಬಂದ ಶೂರ್ಪನಖಿಯ ಸುಂದರ ರೂಪದಂತೆ ಬೇಕರಿಗಳ ತಿಂಡಿತಿನಿಸು, ಪಿಜಾ, ಬರ್ಗರ್ಗಳು ಕಾಣಬಹುದು. ಅದರೊಳಗಿನ ಭಯಂಕರ ರೂಪಿಣಿ ಇಂದು ಕಾಣುತ್ತಿದ್ದಾಳೆ. ಆದರೆ ಇದಕ್ಕೂ, ತನಗೂ ಸಂಬ0ಧವಿಲ್ಲದ0ತೆ ಆರೋಗ್ಯ ಕಾಪಾಡಬೇಕಾದ ರಾಜ್ಯ. ರಾಷ್ಟçದ ವ್ಯವಸ್ಥೆಗಳು ಕಣ್ಣು ಮುಚ್ಚಿಕೊಂಡಿವೆ. ನಾವು, ನಮ್ಮ ಮಕ್ಕಳು ದುರ್ಬಲರಾಗುತಿದ್ದೇವೆ. ಔಷಧಿಗಳ ದಾಸರಾಗುತ್ತಿದ್ದೇವೆ. ಗುಣವಾಗದ ರೋಗಗಳಿಗೆ ಬಲಿಯಾಗುತ್ತಿದ್ದೇವೆ. ಔಷಧಿಗಳ ದಾಸರಾಗುತ್ತಿದ್ದೇವೆ. ಎಲ್ಲವೂ ಬಾಯಿಚಪಲಕ್ಕಾಗಿ ಮಾತ್ರ. ‘ಊಟ ಬಲ್ಲವನಿಗೆ ರೋಗವಿಲ್ಲ’ ಎನ್ನುವ ಗಾದೆಮಾತು ಹಿಂದೆ0ದಿಗಿ0ತಲೂ ಇ0ದು ಪ್ರಸ್ತುತವಲ್ಲವೇ