ಯುನಿವರ್ಸಲ್ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಪಿಯು ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪ ಪ್ರಾಂಶುಪಾಲರಿಗಾಗಿ ವಿಶೇಷವಾಗಿ ನಾಯಕತ್ವ ಹಾಗೂ ಚಿಂತನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 2 ರಂದು ಬೆಳಗ್ಗೆ 11ರಿಂದ ಸಂಜೆ 4.30 ರವರೆಗೆ ಕೆಂಗೇರಿಯಲ್ಲಿರುವ ಯುನಿವರ್ಸಲ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಕೀರ್ಣದ ಕೋಲೂರು ಶಾಖೆಯಲ್ಲಿ ಕಾರ್ಯಾಗಾರ ನಡೆಯಲಿದೆ.

ಶಿಕ್ಷಣ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ ನೇತೃತ್ವ ವಹಿಸಲಿದ್ದು, ‘ಶೈಕ್ಷಣಿಕ ಕ್ಷೇತ್ರದಲ್ಲಿನ ಪ್ರಸ್ತಕ ಸವಾಲುಗಳು ಹಾಗೂ ಶೈಕ್ಷಣಿಕ ಆಡಳಿತದಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ’ ಕುರಿತು ಕಾರ್ಯಕ್ರಮ ನಡೆಯಲಿದೆ.ಕೃತಕ ಬುದ್ಧಿಮತ್ತೆ ಮೂಲಕ ಶೈಕ್ಷಣಿಕ ಆಡಳಿತ ಮತ್ತು ನಿರ್ಧಾರಗಳ ಯಶಸ್ಸಿಗೆ ಸಹಾಯ ಮಾಡುವುದರ ಜತೆಗೆ ಶಿಕ್ಷಣ ಸಂಸ್ಥೆಗಳು ಹೊಸ ಸವಾಲು ಎದುರಿಸುವುದರ ಕುರಿತು ಚರ್ಚೆ ನಡೆಯಲಿದೆ. ನೋಂದಣಿ ಉಚಿತವಾಗಿದ್ದು, ಶೈಕ್ಷಣಿಕ ಆಡಳಿತದಲ್ಲಿ ಎಐ ಕುರಿತು ತಜ್ಞರ ಭಾಷಣ, ಪಿಯು ಕಾಲೇಜು ಮುಖ್ಯಸ್ಥರೊಂದಿಗೆ ನೆಟ್ ವರ್ಕಿಂಗ್ ಅವಕಾಶ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9686664985 ಗೆ ಸಂಪರ್ಕಿಸಬಹುದು.