ತುಳುನಾಡ್ ದ ಜನೊಕುಲೆಗ್, ಅಂಚನೇ ರೈತೆರೆಗ್ ಈ ಅಮಾವಾಸ್ಯೆ ಪನ್ಪಿನವೇ ನಿಜವಾಯಿನ ರಜೆತ ದಿನ. ಅಮವಾಸ್ಯೆದಾನಿ ಪ್ರಕೃತಿದ ಮಿತ್ತ್ ಸುಮಾರು ಬದಲಾವಣೆ ಆಪುಂಡ್. ಕಡಲ್ ಸಮೇತ ಆ ದಿನೊತಾನಿ ಪನಿ ಜೋರಾದೇ ಶಬ್ದ ಮಲ್ಪುಂಡ್ ಇಂಚಪುರಾ ಇಪ್ಪುನಗಾ ಅಮಾವಾಸ್ಯೆಲಾ ಒಂಜಿ ಎಡ್ಡೆ ದಿನನೇಂದ್ ತುಳುನಾಡ್ ದ ದೈವೋರಾಧನೆ ಬೊಕ್ಕ ಸಂಸ್ಕೃತಿ ವಿಮರ್ಶೆಕೆರಾಯಿನ ತಮ್ಮಣ್ಣ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಯೆರ್. ಅಂತಾರಾಷ್ಟ್ರೀಯ ತರಬೇತಿ ಮತ್ತು ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿರುವ ಜೆಸಿಐ ಪುತ್ತೂರು ಘಟಕದ ಜುಲೈ ತಿಂಗಳ ಮಾಸಿಕ ಸಭೆಯಲ್ಲಿ ನಡೆದ ಆಟಿದ ಕೂಟ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತಾನಾಡಿದರು.

ತುಳುನಾಡ್ ದ ಪ್ರತಿಯೊಂಜಿ ಇಲ್ಲ್ ಲ ಒಂಜಿ ಯುನಿವರ್ಸಿಟಿ ದ ಲೆಕ್ಕೋನೆ. ಮುಲ್ಪದ ಪ್ರತಿಯೊರಿಲ ಒಂಜಿ ಲೈಬ್ರರಿ ಎಂದು ಹೇಳಿದ ಅವರು ಇಂದಿನವರ ಆಹಾರಕ್ರಮ ಆರೋಗ್ಯ ರಕ್ಷಣೆಗಾಗಿದ್ದರೆ, ಯುವ ಪೀಳಿಗೆಯು ಬ್ರೆಡ್- ಬನ್ ಕಡೆಗೆ ಮುಖ ಮಾಡಿದ್ದಾರೆ. ಆದಷ್ಟೂ ಬೇಗನೆ ನಾವೆಲ್ಲರೂ, ನಮ್ಮ ಮಕ್ಕಳ ಸಹಿತ ಮೂಲ ಸಂಸ್ಕೃತಿಯಡೆಗೆ ಮುಖ ಮಾಡೋಣವೆಂದು ಹೇಳಿದರು. ಆ ಬಳಿಕ ಜೆಸಿಐ ವತಿಯಿಂದ ತಮ್ಮಣ್ಣ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.ಜೆಸಿಐ ಪುತ್ತೂರು ಘಟಕದಿಂದ ಮಡಂತ್ಯಾರ್ ನಲ್ಲಿ ನಡೆಯಲಿರುವ ಜೆಸಿಐ ವ್ಯವಹಾರಿಕ ಸಮ್ಮೇಳನ 2025ರಲ್ಲಿ ಸಾಧನಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಜೆಸಿಐ ವಲಯ ಉಪಾಧ್ಯಕ್ಷರಾದ ಸುಹಾಸ್ ಮರಿಕೆರವರಿಗೆ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ 50ಕ್ಕೂ ಮಿಕ್ಕಿದ ವಿವಿಧ ತುಳುನಾಡಿನ ಆಟಿಯ ವಿಶೇಷ ಖಾದ್ಯಗಳನ್ನು ಜೆಸಿಐ ಸದಸ್ಯರು ತಯಾರಿಸಿ ತಂದು ಬಳಿಕ ಸಹಭೋಜನ ಮಾಡಲಾಯಿತು. ಖಾದ್ಯ ತಯಾರಿಸಿ ತಂದ ಪ್ರತಿ ಸದಸ್ಯರಿಗೂ ಅಧ್ಯಕ್ಷರಾದ ಭಾಗ್ಯೇಶ್ ರೈ ಅವರು ವಿಶೇಷ ಉಡುಗೊರೆ ನೀಡಿ ಗೌರವಿಸಿದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಮೋಹನ ಕೆ, ಕಾರ್ಯದರ್ಶಿ ಮನೋಹರ ಪಾಟಾಳಿ, ಮಹಿಳಾ ಘಟಕದ ಸಂಯೋಜಕರಾದ ಆಶಾ ಮೋಹನ್ ಮುತ್ಲಾಜೆ, ಜೂನಿಯರ್ ಜೆಸಿ ಸಂಯೋಜಕರಾದ ಸ್ವಸ್ತಿ ಶೆಟ್ಟಿ, ಕಾರ್ಯಕ್ರಮದ ಸಂಯೋಜಕರಾದ ಮಾಲಿನಿ ಕಶ್ಯಪ್ ಉಪಸ್ಥಿತರಿದ್ದರು. ರಮ್ಯಾ ಭಾಗ್ಯೇಶ್ ರೈ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು. ರಂಜಿನಿ ಶೆಟ್ಟಿ ಜೇಸಿ ವಾಣಿ ವಾಚಿಸಿದರು. ಜೆಸಿಐ ಪೂರ್ವ ಅಧ್ಯಕ್ಷರಾದ ದಾಮೋದರ ಪಾಟಾಳಿ ಅವರು ತಮ್ಮಣ್ಣ ಶೆಟ್ಟಿಯವರನ್ನು ಸಭೆಗೆ ಪರಿಚಯಿಸಿದರು.
ಸಭಾ ಕಾರ್ಯಕ್ರಮದ ನಂತರ ತೆಂಗಿನಕಾಯಿ ಕಟ್ಟುವ ಸ್ವರ್ಧೆ ನಡೆಯಿತು ಕಾರ್ಯಕ್ರಮದಲ್ಲಿ ಜೆಸಿ ಪುತ್ತೂರು ಘಟಕದ ಪೂರ್ವ ಅಧ್ಯಕ್ಷರು, ಘಟಕ ಆಡಳಿತ ಮಂಡಳಿಯ ಸದಸ್ಯರು, ಹಾಗೂ ಘಟಕದ ಸದಸ್ಯರು ಪಾಲ್ಗೊಂಡಿದ್ದರು.