ಹೋಟೆಲು ಉದ್ಯಮಿ, ಶ್ರೀ ಕಾವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಘು ಎಲ್ ಶೆಟ್ಟಿಯವರು ಪಟ್ಲ ದಶಮ ಸಂಭ್ರಮಕ್ಕೆ ಘೋಷಣೆ ಮಾಡಿರುವ 5 ಲಕ್ಷ ರೂಪಾಯಿಗಳ ಚೆಕ್ಕನ್ನು ಶ್ರೀ ಕಾವೇಶ್ವರ ದೇವರ ಸನ್ನಿಧಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಪಟ್ಲ ಫೌಂಡೇಶನ್ನಿನ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರಿಗೆ ಹಸ್ತಾಂತರಿಸಿದರು.

ಈ ಸಂಧರ್ಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಅಧ್ಯಕ್ಷ ಸುಧಾಕರ್ ಎಸ್ ಪೂಂಜಾ, ಪ್ರದೀಪ್ ಆಳ್ವ ಕದ್ರಿ ಹಾಗೂ ಪಟ್ಲ ಫೌಂಡೇಶನ್ ನ ಪದಾಧಿಕಾರಿಗಳು, ಹಿತೈಷಿಗಳು ಉಪಸ್ಥಿತರಿದ್ದರು.