ಮೀರಾ ಭಯಂದರ್ ಇಲ್ಲಿನ ಹೆಸರಾಂತ ವೀರ ಕೇಸರಿ ಸಂಸ್ಥೆಯು ನಾಸ್ತಿಕ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಸದಾ ಕಾಪಾಡಿಕೊಳ್ಳುವಲ್ಲಿ ನಿರಂತರ ಶ್ರಮಿಸುತ್ತಿರುವ ಸಂಸ್ಥೆಯ ವತಿಯಿಂದ ಕಳೆದ ವರ್ಷ ಸಂಪೂರ್ಣ ರಾಮಾಯಣ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿ ಇದೀಗ ಭಗವದ್ಗೀತೆಯ ಪರೀಕ್ಷೆಯನ್ನು ಕನ್ನಡ ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಸ್ಪರ್ಧೆಯನ್ನು ಇದೇ ಬರುವ ಜುಲೈ 20 ರ ರವಿವಾರದಂದು ಆಯೋಜಿಸಿದೆ. ವಿಧ್ವಾನ್ ಶ್ರೀ ರಾಧಾಕೃಷ್ಣ ಭಟ್ ರವರ ಮಾರ್ಗದರ್ಶನದೊಂದಿಗೆ ಮತ್ತು ಶ್ರೀ ಸಾಣೂರು ಸಾಂತಿಂಜ ಜನಾರ್ದನ್ ಭಟ್ ಆಶೀರ್ವಾದದಿಂದ ಹಾಗೂ ವೀರ ಕೇಸರಿ ಮೀರಾ ಭಯಂದರ್ ನ ಅಧ್ಯಕ್ಷರಾದ ಹರೀಶ್ ರೈಯವರ ನೇತೃತ್ವದಲ್ಲಿ ಭಾಯಂದರ್ ಸೈಂಟ್ ಆಗ್ನೇಸ್ ಇಂಗ್ಲಿಷ್ ಹೈಸ್ಕೂಲ್ ಭಯಂದರ್ ಇಲ್ಲಿ ನಡೆಯಲಿದೆ.

ಪರೀಕ್ಷೆಯ ನಿಯಮಗಳು : ಪರೀಕ್ಷಾ ಸಮಯ ಬೆಳಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನಡೆಯಲಿದ್ದು, ಬಹು ಆಯ್ಕೆಯ ಪ್ರಶ್ನೆಗಳು (Multiple choice question) ಇರುತ್ತದೆ. ಹಾಗೂ ಭಗವದ್ಗೀತೆಯ ಕುರಿತು 100 ಪದಗಳನ್ನೊಳಗೊಂಡ ಟಿಪ್ಪಣಿ ಬರೆಯಬೇಕು.
ಪರೀಕ್ಷಾ ವಿಭಾಗಗಳು : 06 ವರ್ಷದಿಂದ 15 ವರ್ಷದವರಿಗೆ 15 ಪ್ರಶ್ನೆಗಳ ಪರೀಕ್ಷೆ (50 ಅಂಕಗಳು), 16 ವರ್ಷದಿಂದ 30 ವರ್ಷದವರಿಗೆ 30 ಪ್ರಶ್ನೆಗಳ ಪರೀಕ್ಷೆ (50 ಅಂಕಗಳು), 30ವರ್ಷದಿಂದ 55 ವರ್ಷದವರಿಗೆ 35 ಪ್ರಶ್ನೆಗಳ ಪರೀಕ್ಷೆ (80 ಅಂಕಗಳು), 56 ವರ್ಷದಿಂದ ಮೇಲ್ಪಟ್ಟವರಿಗೆ 30 ಪ್ರಶ್ನೆಗಳ ಪರೀಕ್ಷೆ (100 ಅಂಕಗಳು)
ಆಯ್ಕೆಯಾದ ಎಲ್ಲಾ ವಿಭಾಗದ ಸ್ಪರ್ಧಿಗಳಿಗೆ ಪ್ರಥಮ ರೂ.5,555/-, ದ್ವಿತೀಯ ರೂ. 4,444/-, ತೃತೀಯ ರೂ. 3,333/- ಬಹುಮಾನಗಳನ್ನು ಮತ್ತು ಸ್ಪರ್ಧಿಗಳಿಗೆ ಸಂಸ್ಥೆಯಿಂದ ಸರ್ಟಿಫಿಕೇಟ್ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಹರೀಶ್ ರೈಯವರು ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿಕೊಂಡಿದ್ದಾರೆ.