ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ೩೧ ಶಾಖೆಗಳನ್ನು ಹೊಂದಿ ಕಾರ್ಯಾಚರಿಸುತ್ತಿರುವ ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ., ೨೦೨೫-೨೬ನೇ ಸಾಲಿನ ಮೊದಲ ತ್ರೆöÊಮಾಸಿಕ ಅವಧಿ ೩೦.೦೬.೨೦೨೫ರ ಅಂತ್ಯಕ್ಕೆ ರೂ.೬೦೬ ಕೋಟಿ ಠೇವಣಿ ಮತ್ತು ರೂ.೫೨೧ ಕೋಟಿ ಸಾಲದೊಂದಿಗೆ ರೂ.೧೧೨೭ ಕೋಟಿ ಒಟ್ಟು ವ್ಯವಹಾರವನ್ನು ದಾಖಲಿಸಿರುವುದು. ಜೂನ್ ೨೦೨೪ಕ್ಕೆ ಹೋಲಿಸಿದಾಗ, ಠೇವಣಿಯು ರೂ.೬೯ ಕೋಟಿ ಹಾಗೂ ಸಾಲವು ರೂ.೫೬ ಕೋಟಿ ಹೆಚ್ಚಳವಾಗಿ, ಒಟ್ಟು ವ್ಯವಹಾರದಲ್ಲಿ ರೂ.೧೨೫ ಕೋಟಿ ವೃದ್ಧಿಯನ್ನು ಕಂಡಿದೆ. ಕೆ. ಜೈರಾಜ್ ಬಿ. ರೈ ಅಧ್ಯಕ್ಷರು ಸಂಘವು ದಿನಾಂಕ ೩೦.೦೬.೨೦೨೫ ಕ್ಕೆ ರೂ.೨.೬೦ ಕೋಟಿ ನಿವ್ವಳ ಲಾಭವನ್ನು ಗಳಿಸಿದೆ, ಮತ್ತು ಒಟ್ಟು ಅನುತ್ಪಾದಕ ಆಸ್ತಿ ಹೊರಬಾಕಿ ಸಾಲದ ಶೇ.೦.೦೫ಕ್ಕೆ ಸೀಮಿತವಾಗಿದೆ ಹಾಗೂ ನಿವ್ವಳ ಅನುತ್ಪಾದಕ ಆಸ್ತಿಯು ಶೂನ್ಯ ಪ್ರಮಾಣದಲ್ಲಿದೆ.

ಸಂಘವು ೨೦೨೫-೨೬ನೇ ವಿತ್ತೀಯ ವರ್ಷದ ಮೊದಲ ತ್ರೆöಮಾಸಿಕ ಅವಧಿ ೩೦.೦೬.೨೦೨೫ಕ್ಕೆ ಸಾಧಿಸಿರುವ ಈ ಪ್ರಗತಿಯು ತೃಪ್ತಿದಾಯಕವಾಗಿದೆ. ಈ ತ್ರೆöÊಮಾಸಿಕ ಅವಧಿಯ ಜೂನ್ ತಿಂಗಳಲ್ಲಿ ೧೧ ದಿನಗಳ ಕಿರು ಅವಧಿಯಲ್ಲಿ ಸಂಘವು ೪ ಹೊಸ ಶಾಖೆಗಳನ್ನು ಮತ್ತು ೨ ವಿಸ್ತರಣಾ ಕೌಂಟರ್ಗಳನ್ನು ಆರಂಭಿಸಿ, ಸಹಕಾರ ರಂಗದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿರುವುದು. ಈ ಹಿಂದೆ ೨೦೨೧ರ ನವೆಂಬರ್ ತಿಂಗಳ ಮೊದಲ ೭ ದಿನಗಳ ಕಿರು ಅವಧಿಯಲ್ಲಿ ೫ ಹೊಸ ಶಾಖೆಗಳನ್ನು ಆರಂಭಿಸಿದ ಸಾಧನೆಯು ಇಲ್ಲಿ ಉಲ್ಲೇಖನೀಯ ಎಂದು ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ಪ್ರಕಟಣೆಯಲ್ಲಿ ತಿಳಿಸಿದರು.