ಶ್ರೀರಾಮ ಶಾಲೆ ವೇದಶಂಕರ ನಗರ ಉಪ್ಪಿನಂಗಡಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಉಪ್ಪಿನಂಗಡಿ ಘಟಕದ ಮೇಲ್ವಚಾರಣೆಯಲ್ಲಿ 2025-26 ನೇ ಸಾಲಿನ “ಯಕ್ಷ ಶಿಕ್ಷಣ” ಯೋಜನೆಯು ಜೂನ್ 27 ರಂದು ಉಚಿತ ಯಕ್ಷಗಾನ ತರಬೇತಿ ಕಾರ್ಯಕ್ರಮವು ಉರಿಮಜಲು ರಾಮ ಭಟ್ ವೇದಿಕೆಯಲ್ಲಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಕೆ ಜಗದೀಶ್ ಶೆಟ್ಟಿಯವರು ಉದ್ಘಾಟಿಸಿ, ಪಟ್ಲ ಫೌಂಡೇಶನ್ ಸ್ಥಾಪನೆಯ ಉದ್ದೇಶ, ಕಾರ್ಯವೈಖರಿಯನ್ನು ತಿಳಿಸಿದರು.

ಪಟ್ಲ ಫೌಂಡೇಶನ್ ಉಪ್ಪಿನಂಗಡಿ ಘಟಕದ ಸದಸ್ಯರಾದ ಸುಧಾಕರ್ ಶೆಟ್ಟಿ ಗಾಂಧೀಪಾರ್ಕ್ ಇವರು ಮಾತನಾಡಿ, ಮಕ್ಕಳು ಕಲೆಯನ್ನು ಉಳಿಸಿಕೊಂಡು, ಉತ್ತಮ ಸಂಸ್ಕಾರ ಬೆಳೆಸಿಕೊಂಡು ಹೋಗಬೇಕಾದರೆ ಇಂತಹ ತರಬೇತಿಗಳು ಅಗತ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕರಾದ ಯು.ಜಿ ರಾಧಾ ಮಾತನಾಡಿ, ಉಚಿತ ಯಕ್ಷಗಾನ ತರಬೇತಿಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಯಕ್ಷಗಾನ ನಾಟ್ಯ ಗುರುಗಳಾದ ಸತೀಶ್ ಆಚಾರ್ಯ ಮಾಣಿ ಇವರಿಗೆ ಸ್ವಸ್ತಿಕ ನೀಡಿ ಗುರುವಂದನೆ ಮಾಡಿ ಗೌರವಿಸಿದ ನಂತರ ನಾಟ್ಯ ತರಗತಿ ಆರಂಭಗೊಂಡಿತು. ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ಶಿಕ್ಷಕರಾದ ಪೂವಪ್ಪ, ಪ್ರಭಾರ ಮುಖ್ಯ ಮಾತಾಜಿ ಉಷಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾ ಮಾತಾಜಿ ನಿರ್ವಹಿಸಿದರು. ಈ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಉಪ್ಪಿನಂಗಡಿ ಘಟಕದ ಸದಸ್ಯರಾದ ಯು. ಕೃಷ್ಣ ಮಲ್ಲಿಗೆ, ಯು. ಯತೀಶ್ ಶೆಟ್ಟಿ, ಗುಣಕರ ಅಗ್ನಾಡಿ, ಶರತ್ ಕೋಟೆ, ಗಣೇಶ ಆಚಾರ್ಯ ಭಾವನಾ ಕಲಾ ಆರ್ಟ್ಸ್, ಶ್ರೀರಾಮ ಶಾಲೆಯ ಪೋಷಕರ ಸಂಘದ ಅಧ್ಯಕ್ಷರಾದ ಉದಯ ಅತ್ರಮಜಲು ಹಾಗೂ ಶ್ರೀರಾಮ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.