ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಪದಗ್ರಹಣ ಸಮಾರಂಭ ಜುಲೈ 10 ರಂದು ಗುರುವಾರ ಸಂಜೆ 7: 00 ಗಂಟೆಗೆ ಆರ್.ಎನ್ ಶೆಟ್ಟಿ ಸಭಾಭವನದ ಎಸ್.ಎಸ್ ಹೆಗ್ಡೆ ಸಭಾಭವನದಲ್ಲಿ ನಡೆಯಲಿದೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ| ಅಂಪಾರು ನಿತ್ಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಭುಜಂಗ ಶೆಟ್ಟಿ ರಟ್ಟಾಡಿ, ಕೋಶಾಧಿಕಾರಿಯದ ಶ್ರೀ ಅಣ್ಣಪ್ಪ ಶೆಟ್ಟಿ ಯರುಕೋಣೆ ಮತ್ತು ಎಲ್ಲಾ ಪದಾಧಿಕಾರಿಗಳು ಹಾಗೂ ನಿರ್ದೇಶಕರಿಗೆ 317c ಯ ಮಾಜಿ ಜಿಲ್ಲಾ ಗವರ್ನರ್ ಲಯನ್ ಎಂ.ಜೆ.ಎಫ್ ಬಿ. ದಿವಾಕರ ಶೆಟ್ಟಿ ಭದ್ರಾವತಿ ಪ್ರಮಾಣ ವಚನ ಬೋಧಿಸಲಿದ್ದಾರೆ.

ನೂತನವಾಗಿ ಸೇರ್ಪಡೆಕೊಳ್ಳಲಿರುವ ಹೊಸ ಸದಸ್ಯರಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಚೀಫ್ ಕೋ ಆರ್ಡಿನೇಟರ್ ಲಯನ್ ಪಿ.ಎಂ.ಜೆ.ಎಫ್ ರಂಜನ್ ಕಲ್ಕೂರ ಪ್ರಮಾಣವಚನ ನಡಸಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ರೀಜನ್ ನ ಎಲ್ಲಾ ಪದಾಧಿಕಾರಿಗಳು ಮತ್ತು ಜಿಲ್ಲೆಯ ಕ್ಯಾಬಿನೆಟ್ ಸದಸ್ಯರುಗಳು ಭಾಗವಹಿಸಲಿದ್ದಾರೆ. ವಿವಿಧ ರೀತಿಯ ಸೇವಾ ಚಟುವಟಿಕೆಗಳು ಮತ್ತು ಅಭಿನಂದನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಸ್ಥಾಪಕ ಅಧ್ಯಕ್ಷರಾದ ಲ. ಅಶೋಕ್ ಶೆಟ್ಟಿ ಸಂಸಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.