ಆಗಸ್ಟ್ 10 ರಂದು ಕಾರ್ಕಳ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುವ ಕಾರ್ಕಳ ಹೆಬ್ರಿ ತಾಲೂಕು ಬಂಟರ ಸಂಘ, ಕಾರ್ಕಳ ತಾಲೂಕು ಬಂಟ ಮಹಿಳಾ ಸಂಘ ಹಾಗೂ ಕಾರ್ಕಳ ಯುವ ಬಂಟರ ಸಂಘದ ವತಿಯಿಂದ ನಡೆಯಲಿರುವ ಆಟಿಡೊಂಜಿ ಕೆಸರ್ದ ಕೂಟ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಜುಲೈ 01 ರಂದು ಕಾರ್ಕಳ ತಾಲೂಕು ಸಂಚಾಲಕರಾದ ವಿಜಯ ಶೆಟ್ಟಿಯವರು ಬಿಡುಗಡೆಗೊಳಿಸಿದರು.

ಸನ್ಮಾನ, ಕ್ರೀಡೆಗಳು ಮತ್ತು ಪ್ರತಿಭಾ ಪುರಸ್ಕಾರ ಕಾರ್ಕಳ ವಿಧಾನಸಭಾ ಕ್ಷೇತ್ರದ ಬಂಟ ಸಮಾಜಕ್ಕೆ ಮಾತ್ರ ಸೀಮಿತವಾಗಿದ್ದು, ಈ ಕಾರ್ಯಕ್ರಮದಲ್ಲಿ ಕಾರ್ಕಳ ಬಂಟ ಮಹಿಳಾ ತ್ರೋಬಾಲ್ ತರಬೇತುದಾರ ನವೀನ್ ಚಂದ್ರ ನಾಯಕ್ ಅವರನ್ನು ಸನ್ಮಾನಿಸಲಾಗುವುದು. ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಹೆಗ್ಡೆ, ಯುವ ಬಂಟರ ಸಂಘದ ಅಧ್ಯಕ್ಷ ಅವಿನಾಶ್ ಶೆಟ್ಟಿ, ರವಿ ಶೆಟ್ಟಿ ಕುಕ್ಕುಂದೂರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.