
2024 25 ನೇ ಸಾಲಿನ ಮಾಸಿಕ ಸಭೆಯು ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿಯವರ ಅವಧಿಯ ಕೊನೆಯ ಮಾಸಿಕ ಸಭೆ ಬೆಳ್ತಂಗಡಿ ರೆಂಕೆದಗುತ್ತು ಸಿರಿ ಸಂಸ್ಥೆಯ ಕಾನ್ಫರೆನ್ಸ್ ಹಾಲ್ ನಲ್ಲಿ ಜೂನ್ 10 ರಂದು ನಡೆಯಿತು. ಲಯನ್ಸ್ ಸದಸ್ಯರಿಗೆ ಗೋಧಾಮ ವೀಕ್ಷಣೆ ಮತ್ತು ಸಿರಿಯ ಬಗ್ಗೆ ಯತೀಶ್ ಶೆಟ್ಟಿ ಮಾಹಿತಿ ನೀಡಿದರು.


ಮುಖ್ಯ ಅತಿಥಿಗಳಾಗಿ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ಜನಾರ್ಧನ್, ವಲಯ ಅಧ್ಯಕ್ಷ ಉಮೇಶ್ ಶೆಟ್ಟಿ, ಕೋಶಾಧಿಕಾರಿ ಅಮಿತಾನಂದ ಹೆಗ್ಡೆ ಆಗಮಿಸಿದ್ದರು. ಮಾಜಿ ಪ್ರಾಂತ್ಯ ಅಧ್ಯಕ್ಷ ಧರಣೇಂದ್ರ ಜೈನ್ ಸ್ವಾಗತಿಸಿ, ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ ಧನ್ಯವಾದವಿತ್ತರು. ಲಯನ್ಸ್ ಸದಸ್ಯರು, ಲಿಯೋ ಸದಸ್ಯರು ಉಪಸ್ಥಿತರಿದ್ದರು. ನಿಯೋಜಿತ ಅಧ್ಯಕ್ಷ ಮುರಳಿದರ ಬಲಿಪ 2025- 26ನೇ ಸಾಲಿನ ಪದಾಧಿಕಾರಿಗಳ ಪಟ್ಟಿಯನ್ನು ಸಭೆಯ ಮುಂದಿಟ್ಟರು.
ಸೇವಾ ಕಾರ್ಯಕ್ರಮದ ಅಂಗವಾಗಿ ಮುಂಡಾಜೆ ನಿವಾಸಿ ಯಕ್ಷಗಾನ ಕಲಾವಿದ ಪಕಲಕುಂಜ ಕೃಷ್ಣ ನಾಯ್ಕರವರ ಮೊಮ್ಮಗನಿಗೆ ವೀಲ್ ಚೇರ್ ನೀಡಲಾಯಿತು ಹಾಗೂ ಎಸ್.ಎಸ್.ಎಲ್.ಸಿ ಯಲ್ಲಿ 599 ಅಂಕ ಗಳಿಸಿದ ನವ್ಯ ಶೆಟ್ಟಿಯವರಿಗೆ ರೂಪಾಯಿ 10000 ಧನ ಸಹಾಯ, ಮೇಲಂತಬೆಟ್ಟು ನಿವಾಸಿ ನೇತ್ರಾವತಿಯವರಿಗೆ ರೂಪಾಯಿ 5,000 ಚಿಕಿತ್ಸಾ ನೆರವು ನೀಡಲಾಯಿತು.





























































































































