ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಮನ್ಮಹಾರಥೋತ್ಸವ ಫೆಬ್ರವರಿ 13 ರಂದು ನಡೆಯಲಿದೆ. ಫೆ.9 ರಂದು ಆದಿತ್ಯವಾರ ಬೆಳಿಗ್ಗೆ 9 ಗಂಟೆಯಿಂದ ಬಾರಾಳಿ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಗಣಹೋಮ, ರಾತ್ರಿ 8 ಗಂಟೆಯಿಂದ ಶ್ರೀ ಕ್ಷೇತ್ರದಲ್ಲಿ ವಿಘ್ನೇಶ್ವರ ಪ್ರಾರ್ಥನೆ, ರಂಗ ಪೂಜೆ (ದೊಡ್ಡ ಮನೆಯವರಿಂದ ಕಟ್ಟುಕಟ್ಟಳೆ) ಫೆಬ್ರವರಿ 10 ಸೋಮವಾರ ರಾತ್ರಿ ಎಂಟು ಗಂಟೆಯಿಂದ ವಿಶೇಷ ಪೂಜೆ, ರಂಗ ಪೂಜೆ (ಹೆಗ್ಗುಂಜೆ ದೊಡ್ಡ ಮನೆಯವರಿಂದ ಕಟ್ಟುಕಟ್ಟಳೆ) ಕಟ್ಟೆಪೂಜೆ.ಫೆ.11 ಮಂಗಳವಾರ ರಾತ್ರಿ 8 ಗಂಟೆಗೆ ರಂಗ ಪೂಜೆ (ಹೆಗ್ಗುಂಜೆ ಹೊಸ ಮನೆಯವರಿಂದ ಕಟ್ಟುಕಟ್ಟಳೆ) ಕಟ್ಟೆ ಪೂಜೆ, ವಸಂತ ಪೂಜೆ ನಡೆಯಲಿದೆ. ಫೆಬ್ರವರಿ 12 ಬುಧವಾರ ಕುಂಭ ಸಂಕ್ರಮಣ, ರಾತ್ರಿ 9ಗಂಟೆಯಿಂದ ಕೆಂಡಸೇವೆ, ರಾತ್ರಿ 3 ಗಂಟೆಯಿಂದ ಹಾಲಿಟ್ಟು ಸೇವೆ, ನಾಗದರ್ಶನ, ರಾತ್ರಿ 4 ರಿಂದ ಹಿರೇ ರಂಗಪೂಜೆ, ಬಲಿ ಉತ್ಸವ, ದಕ್ಕೆ ಬಲಿ ನಡೆಯಲಿದೆ.
ಫೆ. 13 ಗುರುವಾರ ಮಧ್ಯಾಹ್ನ 12:30ಕ್ಕೆ ಶ್ರೀ ಮನ್ಮಹಾರಥಾರೋಹಣ ನಡೆಯಲಿದೆ. ಸಂಜೆ ಆರು ಗಂಟೆಗೆ ರಥೋತ್ಸವ, ರಾತ್ರಿ ಎಂಟು ಗಂಟೆಯಿಂದ ಓಲಗ ಮಂಟಪ ಪೂಜೆ, ಶಯನೋತ್ಸವ ಕವಾಟ ಬಂಧನ ನಡೆಯಲಿದೆ. ಫೆ.14 ಶುಕ್ರವಾರ ಬೆಳಿಗ್ಗೆ 8:00 ಗಂಟೆಗೆ ಕವಾಟ ವಿಸರ್ಜನೆ, ಲಕ್ಷ್ಮೀ ಮಂಟಪ ಪೂಜೆ, ರಾತ್ರಿ 8 ರಿಂದ ದೀಪೋತ್ಸವ, ರಂಗಪೂಜೆ, (ಹೆಗ್ಗುಂಜೆ ಪಟೇಲರ ಮನೆಯವರಿಂದ ಕಟ್ಟುಕಟ್ಟಳೆ), ಓಲಗ ಮಂಟಪ ಪೂಜೆ, ಆಷ್ಟಾವಧಾನ ಸೇವೆಗಳು, ತದನಂತರ ಮಂದಾರ್ತಿಯ ಐದು ಮೇಳದವರಿಂದ ಯಕ್ಷಗಾನ ಸೇವೆ ನಡೆಯಲಿದೆ.