ಮುಂಬಯಿ ಕುರ್ಲಾ ಪೂರ್ವ ಬಂಟರ ಭವನದ ಎನೆಕ್ಸ್ ಕಿರು ಸಭಾಗೃಹದಲ್ಲಿ ಜನವರಿ 15 ರಂದು ಪ್ರಭಾಕರ ಬೆಳುವಾಯಿ ಸಾರಥ್ಯದ ನಮನ ಫ್ರೆಂಡ್ಸ್ ಮುಂಬಯಿ ಇದರ 20ನೇಯ ವಾರ್ಷಿಕೋತ್ಸವ “ನಮನೋತ್ಸವ -2025” ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಬಿಡುಗಡೆಗೊಳಿಸಿದರು. ವಿಭಿನ್ನ ರೀತಿಯಲ್ಲಿ ಜರಗಲಿರುವ ನಮನೋತ್ಸವ ಕಾರ್ಯಕ್ರಮದಲ್ಲಿ ವೀರ ಯೋಧನಿಗೆ ವಿಶೇಷ ಸನ್ಮಾನ ಹಾಗೂ ವಿವಿಧ ಕ್ಷೇತ್ರದ ಸಾಧಕರುಗಳಿಗೆ ಸನ್ಮಾನ ಕಾರ್ಯಕ್ರಮವು ಜರಗಲಿದ್ದು, ಮಹಾರಾಷ್ಟ್ರ ಸರಕಾರದ ಉಪ ಮುಖ್ಯಮಂತ್ರಿಗಳಾದ ಏಕನಾಥ ಶಿಂದೆಯವರು ಭಾಗವಹಿಸುವ ನಿರೀಕ್ಷೆಯಿದೆ. ಈ ಕಾರ್ಯಕ್ರಮಕ್ಕೆ ತುಳು ಕನ್ನಡಿಗರೆಲ್ಲರ ಸಹಕಾರವಿರಲಿ ಹಾಗೂ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ, ಗೌ ಪ್ರಧಾನ ಕಾರ್ಯದರ್ಶಿ ಡಾ| ಆರ್ ಕೆ. ಶೆಟ್ಟಿ, ಜೊತೆ ಕೋಶಾಧಿಕಾರಿ ಶಶಿಧರ ಶೆಟ್ಟಿ ಇನ್ನಂಜೆ, ಬಂಟರ ಸಂಘ ಮುಂಬಯಿ ಇದರ ಸಮನ್ವಯಕರಾದ ರವೀಂದ್ರನಾಥ ಭಂಡಾರಿ, ಬಂಟರ ಸಂಘ ಮುಂಬಯಿ ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಅಶೋಕ್ ಪಕ್ಕಳ, ಬಂಟರ ಸಂಘ ಮುಂಬಯಿ ಇದರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷರಾದ ನವೀನ್ ಶೆಟ್ಟಿ ಇನ್ನಾ ಬಾಳಿಕೆ, ಕರ್ನಾಟಕ ಮಲ್ಲ ದೈನಿಕದ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ ಸೇರಿದಂತೆ ನಮನ ಫ್ರೆಂಡ್ಸ್ ಮುಂಬಯಿ ಸಂಸ್ಥಾಪಕ ಪ್ರಭಾಕರ ಬೆಳುವಾಯಿ ಉಪಸ್ಥಿತರಿದ್ದರು.
ಕಾರ್ಯಕ್ರಮವು ಇದೇ ಬರುವ ಜನವರಿ 26 ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಮದ್ಯಾಹ್ನ 2.30 ರಿಂದ ರಾತ್ರಿ ಗಂಟೆ 9ರವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ನಮನೋತ್ಸವ 2025 ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜರಗಲಿದೆ.
