ಇಂತಹದೊಂದು ಕಾನೂನು ತಂದ ಮಹಾರಾಷ್ಟ್ರದ ನೆಚ್ಚಿನ ಮುಖ್ಯಮಂತ್ರಿಗೆ ಎಷ್ಟು ಸಲಾಮುಗಳನ್ನು ಹೇಳಬೇಕು ಅರ್ಥ ಆಗ್ತಾ ಇಲ್ಲ. ಸಾಮಾನ್ಯರಿಂದ ಸಾಮಾನ್ಯರ ಮನೆಯಲ್ಲಿ ಇವತ್ತು ಮದುವೆ ಮತ್ತು ಮೆಹಂದಿಯಲ್ಲಿ ಶರಾಬು ಇಲ್ಲದೆ ಕಾರ್ಯಕ್ರಮ ಆಗುವಂತಿಲ್ಲ. ಮಹಾರಾಷ್ಟ್ರದ ನೆಚ್ಚಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಾರಾಯಿ ಹಂಚುವಂತಿಲ್ಲ ಎಂಬ ಕಾನೂನಿನ ಕಡತಕ್ಕೆ ಸಹಿ ಹಾಕಿದ್ದಾರೆ. ಕಾನೂನು ಉಲ್ಲಂಘಿಸಿದಿರಿ ಅಂತಾದರೆ ನಿಮ್ಮನ್ನು ಶಿಕ್ಷಿಸಲಾಗುತ್ತೆ. ಲಕ್ಷ ರೂಪಾಯಿ ದಂಡ ಹಾಕುತ್ತೆ. ಕಟ್ಟು ನಿಟ್ಟಾದ ಕಾನೂನು ಸದ್ಯದಲ್ಲಿಯೇ ಜಾರಿಗೆ ಬರುತ್ತೆ.
ಸ್ನೇಹಿತರೇ ಸಪ್ತಪದಿಯ ಸಂಪ್ರದಾಯ ಸಾರಾಯಿ ಸಮಾರಂಭ ಆಗುವುದು ಎಷ್ಟು ಸರಿ? ಆದರೂ ಶ್ರೀಮಂತರಿಂದ ಹಳ್ಳಿಯ ಬಡ ಕುಟುಂಬವೂ ಸಹ ಇವತ್ತಿನ ದಿನಗಳಲ್ಲಿ ಈ ದರಿದ್ರ ಆಚರಣೆಗೆ ಮಾರು ಹೋಗಿರುವುದು ದುರದೃಷ್ಟಕರ. ಗುಂಪಿನಲ್ಲಿ ಗೋವಿಂದ ಎಂಬಂತೆ ಇವತ್ತಿನ ದಿನಗಳಲ್ಲಿ ಕಡು ಬಡ ಜನರೂ ಸಹ ಈ ಕಾರ್ಯಕ್ರಮಕ್ಕೆ ಜೈ ಅನ್ನುವುದು ವಾಡಿಕೆಯಾಗಿದೆ. ಯೋಗ್ಯತೆ ಇಲ್ಲದೆ ಇದ್ದರೂ ಸಹ ಮೆಹಂದಿ ಸಮಾರಂಭ ಮಾಡಿ ಸಾಲದ ಹೊರೆಯಲ್ಲಿ ಬೀಳುವವರನ್ನು ನಾವು ಕಂಡವರು. ಹಾಗೆಯೇ ಸಪ್ತಪದಿಯ ಈ ಪವಿತ್ರ ಕಾರ್ಯದಲ್ಲಿ ನಮ್ಮ ಆಹಾರ ಪದ್ದತಿಯೂ ಹಿತ ಮಿತದಿಂದ ಕೂಡಿರಬೇಕು ಅಲ್ವಾ? ಅಂದಂತೆ ಆಹಾರಕ್ಕೆ ನಮ್ಮ ಅಭ್ಯಂತರ ಅಂತ ಖಂಡಿತ ಇಲ್ಲ. ಅವರವರ ಆಹಾರ ಅವರವರಿಗೆ ಸಹ್ಯ. ಒಟ್ಟಾರೆಯಾಗಿ ಇವತ್ತಿನ ದಿನಗಳಲ್ಲಿ ಸಾಂಪ್ರದಾಯಿಕ ಆಚರಣೆಗಳು, ಪೂಜಾ ಕೈಂಕರ್ಯಗಳು, ನಮ್ಮ ಸನಾತನ ವಿಧಿ ವಿಧಾನಗಳು ಹಾದಿ ತಪ್ಪಬಾರದು ಎಂಬವುದಷ್ಟೇ ನನ್ನ ಕಳಕಳಿ.
ಪೇತ್ರಿ ವಿಶ್ವನಾಥ ಶೆಟ್ಟಿ