ಸಂಘಟನಾತ್ಮಕ ಹೋರಾಟದಿಂದ ಸರಕಾರಿ ಶಾಲೆ ಉಳಿಯಲಿ ಬೆಳೆಯಲಿ ಎಂದು ಉದ್ಯಮಿ ಚಿತ್ರರಂಜನ್ ಹೆಗ್ಡೆ ಹೇಳಿದರು. ಬೈಂದೂರು ವಲಯದ ಸರಕಾರಿ ಕಿರಿಯ ಪ್ರಾಥಮಿಕ ಕಟ್ಟಿನಮಕ್ಕಿ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಳೆ ವಿದ್ಯಾರ್ಥಿಗಳು ಹಾಗೂ ಊರಿನವರ ಬಾಂಧವ್ಯ ಒಂದಾದಾಗ ಮಾತ್ರ ಸರಕಾರಿ ಶಾಲೆ, ಉಳಿವಿಗೆ ಮತ್ತು ಅಭಿವೃದ್ಧಿಗೆ ಸಹಕಾರಿಯಾಗುವುದು ಎಂದು ಹೇಳಿದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಆಲೂರು ಪಂಚಾಯಿತಿ ಅಧ್ಯಕ್ಷ ರಾಜೇಶ ಎನ್. ದೇವಾಡಿಗ, ಮತ್ತು ಸದಸ್ಯರಾದ ರಾಜೇಂದ್ರ ದೇವಾಡಿಗ, ಪ್ರಮೋದ ಶೆಟ್ಟಿ, ವಿಜಯಕುಮಾರ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಶೇಖರ ಪೂಜಾರಿ, ಉದ್ಯಮಿ ಚಂದ್ರಶೇಖರ ಶೆಟ್ಟಿ ಕುಷ್ಟಗಿ, ರಘುರಾಮ ದೇವಾಡಿಗ, ಚಂದ್ರಯ್ಯ ಆಚಾರ್ಯ ಕಳಿ, ಅರುಣ ಕುಮಾರ್ ಶೆಟ್ಟಿ, ರಾಜೇಶ್ ಶೆಟ್ಟಿ ಗಾಣದರ ಹಕ್ಲು, ಭರತ್ ಶೆಟ್ಟಿ ನಾರ್ಕಳಿ, ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಚಿತ್ರಂಜನ್ ದೇವಾಡಿಗ, ರಮ್ಮ, ಮನೀಶ ದೇವಾಡಿಗ ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕಿ ಗುಣವತಿ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ಸಂಟಾ ಪ್ರಾಸ್ ವರದಿ ಮಂಡಿಸಿದರು. ಶಿಕ್ಷಕ ಉದಯಕುಮಾರ್ ಶೆಟ್ಟಿ ನಿರೂಪಿಸಿದರು. ಸವಿತಾ ದೇವಾಡಿಗ ವಂದಿಸಿದರು. ಉದ್ಯಮಿ ಚಿತ್ತರಂಜನ್ ಹೆಗ್ಡೆ, ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಗೋಪಾಲ ಪೂಜಾರಿ ಹಾಗೂ ನಿವೃತ್ತ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಅವರನ್ನು ಈ ಸಂಧರ್ಭ ಸನ್ಮಾನಿಸಲಾಯಿತು.