ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿ ಅವರಿಗೆ ಪುಣೆ ಬಂಟರ ಭವನದಲ್ಲಿ ನಡೆದ ತುಳುಕೂಟದ ರಜತ ಸಂಭ್ರಮ ಮತ್ತು ತುಳುನಾಡ ಜಾತ್ರೆ ಸಂದರ್ಭದಲ್ಲಿ ‘ತುಳುನಾಡ ಧನ್ವಂತರಿ’ ಬಿರುದು ಪ್ರಧಾನ ಮಾಡಲಾಯಿತು.
ಒಡಿಯೂರು ಗುರುದೇವಾನಂದ ಸ್ವಾಮೀಜಿ ಮತ್ತು ಕಟೀಲು ಅಸ್ರಣ್ಣ ಅವರ ಉಪಸ್ಥಿತಿಯಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ಐಪಿಎಸ್, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ, ನಾಡೋಜ ಡಾ. ಜಿ. ಶಂಕರ್, ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ಪ್ರವೀಣ್ ಶೆಟ್ಟಿ ಪುತ್ತೂರು, ರೋಹಿತ್ ಶೆಟ್ಟಿ ನಗ್ರಿಗುತ್ತು ಮೊದಲಾದ ಗಣ್ಯರ ಸಮ್ಮುಖದಲ್ಲಿ ಡಾ. ಸುಧಾಕರ ಶೆಟ್ಟಿ ಅವರಿಗೆ ಬಿರುದು ಪ್ರಧಾನ ಮಾಡಲಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಮೂರುವರೆ ದಶಕಗಳ ನಿಸ್ವಾರ್ಥ ಸಮಾಜ ಸೇವೆಗಾಗಿ ಅವರಿಗೆ ತುಳುನಾಡ ಧನ್ವಂತರಿ ಬಿರುದು ನೀಡಿ ಗೌರವಿಸಲಾಗಿದೆ.
ಡಾ. ಸುಧಾಕರ ಶೆಟ್ಟಿಯವರಿಗೆ ಈ ಹಿಂದೆ ಹೊರನಾಡ ಕನ್ನಡ ರತ್ನ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ -2022, ಚಾರ್ ಸಹಿಬಜಾದೆ ಅವಾರ್ಡ್ ದೊರಕಿರುತ್ತದೆ. ಅಷ್ಟೇ ಅಲ್ಲದೆ ಅವರು ಸತತ ನಾಲ್ಕು ಬಾರಿ ಕೇಂದ್ರ ಸರಕಾರದ ರಕ್ಷಾ ಮಂತ್ರಿ ಅವಾರ್ಡ್ ಪುರಸ್ಕೃತ ವೈದ್ಯಕೀಯ ತಂಡದ ಸದಸ್ಯರಾಗಿದ್ದಾರೆ.